ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಬ್ರಹ್ಮಕಲಶ ಹಾಗೂ ರಥೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಬುಧವಾರ ಪೂರ್ವಾಹ್ನ ಫಲನ್ಯಾಸ,ಸಾಮೂಹಿಕ ದೇವತಾ ಪ್ರಾರ್ಥನೆ ,ಪುಣ್ಯಾಹ ನಾಂದಿ,ಋತ್ವಗ್‌ವರ್ಣಿ,ಮಧುಪರ್ಕ,ಗಣಹೋಮ ನವಗ್ರಹ ಹೋಮ ಚತುರ್ವೇದ ಪಾರಾಯಣ ಹಾಗೂ ಸಂಜೆ ಆಂಜನೇಯ ದೇವರಲ್ಲಿ ಪುಣ್ಯಾಹ ಸ್ಥಾನಶುದ್ಧಿ ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ ವಾಸ್ತುಹೋಮ ಇನ್ನಿತರ ಹೋಮಾಧಿ ಕಾರ್ಯಕ್ರಮಗಳು ತಂತ್ರಿಗಳಾದ ವೇಧಮೂರ್ತಿ ಕೃಷ್ಣ ಸೋಮಯಾಜಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.ಸಂಜೆ ನಡೆದ ಕೂಟಮಹಾಜಗತ್ತು ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ದೀಪ ಬೆಳಗಿಸಿ ಚಾಲನೆ ನೀಡಿದರು.ದೇವಳದ ಉಪಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ,ಕಾರ್ಯದರ್ಶಿ ಜಿ.ಮಂಜುನಾಥ ಮಯ್ಯ,ಕೋಶಾಧಿಕಾರಿ ಪ್ರಸನ್ನ ತುಂಗ,ಸದಸ್ಯರಾದ ವೈ ಸದಾರಾಮ ಹೇರ್ಳೆ ,ವೇ.ಮೂ,ಜಿ.ಚಂದ್ರಶೇಖರ ಉಪಾಧ್ಯ,ಎಂ.ಕೆ ಅಶೋಕ ಕುಮಾರ್ ಹೊಳ್ಳ,ಬಿಜೂರು ಬಲರಾಮ ಮಯ್ಯ,ಪಿ.ಸುಬ್ರಹ್ಮಣ್ಯ ಹೇರ್ಳೆ ಮತ್ತಿತತರರು ಉಪಸ್ಥಿತರಿದ್ದರು.