ಕಲಾಕ್ಷೇತ್ರ ಕಲಾವಿದರ ಪುಣ್ಯಭೂಮಿ: ಪರೀಕ್ಷಿತ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರವೀಂದ್ರ ಕಲಾಕ್ಷೇತ್ರ ಕಲಾವಿದರ ಪುಣ್ಯಭೂಮಿ, ಇಲ್ಲಿ ಯೋಗ್ಯ ಮೂವರಿಗೆ ಸನ್ಮಾನವಾಗಿದೆ , ಯಕ್ಷಗಾನ ಇನ್ನಷ್ಟು ವ್ಯಾಪ್ತಿ ವಿಸ್ತರಿಸಲಿ ಎಂದು ರಾಘವೇಂದ್ರ ವೈಭವ ಧಾರವಾಹಿ ಖ್ಯಾತಿಯ , ಉದಯ ವಾಹಿನಿಯ ಪರಿಕ್ಷಿತ್ ಸರ್ಪಶಯನವರು ನುಡಿದರು‌.

Call us

Click Here

ರಾಘು ಶೆಟ್ಟಿ ನೈಕಂಬ್ಳಿ ಮತ್ತು ಪ್ರದೀಪ ಆಜ್ರಿ ಜಂಟಿ ಸಂಯೋಜನೆಯ ಯಕ್ಷ ಸಿಂಧೂರ ಯಕ್ಷಗಾನ ಕಾರ್ಯಕ್ರಮದ ರವೀಂದ್ರ ಕಲಾಕ್ಷೇತ್ರ ವೇದಿಕೆಯಲ್ಲಿ ಕಾಮಿಡಿ ಕಿಲಾಡಿಗಳಾದ ಅಪ್ಪಣ್ಣ ಗಾಣಿಗೇರ್ , ಸೂರಿ ಮೂಡುಬಗೆ ಕುಂದಾಪುರ , ಮಾರಣಕಟ್ಟೆ ಮೇಳದ ಪ್ರಧಾನ ಕಲಾವಿದರಾದ ಗೋಳಿಕೆರೆ ಚಂದ್ರಗೌಡರಿಗೆ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಉದಯ ಶೆಟ್ಟಿ ಜಡ್ಕಲ್ , ರಘುರಾಮ ಶೆಟ್ಟಿ ಎಳುಮುಡಿ , ರಘುರಾಮ ಶೆಟ್ಟಿ SKC , ಯಕ್ಷಪ್ರೇಮಿ ಜಯರಾಮ ಶೆಟ್ಟಿ , ಸುಬ್ರಮಣ್ಯ ಚಿಟ್ಟಾಣಿ ಉಪಸ್ಥಿತರಿದ್ದರು .

ನಾಗರಾಜ್ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮ ನಿರೂಪಿಸಿದರು .ಕಾರ್ಯಕ್ರಮದ ನಂತರ ಕಲಾಧರ ಬಳಗ ಜಲವಳ್ಳಿಯವರಿಂದ ಅಗ್ನಿವರ್ಷ ಪ್ರಸಂಗ ಪ್ರದರ್ಶನ ನಡೆಯಿತು.

Leave a Reply