ಕೋಡಿ ಬ್ಯಾರೀಸ್‌ನಲ್ಲಿ ಕುಮಾರವ್ಯಾಸ ಭಾರತ ಗಮಕಸಿರಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು, ಕೋಡಿ. ಕುಂದಾಪುರ ಇದರ ಸಾಂಸ್ಕೃತಿಕ ಘಟಕ ’ಕಡಲಸಿರಿ’ ವತಿಯಿಂದ ಕುಮಾರವ್ಯಾಸ ಕಾವ್ಯದ ಗಮಕಗಾಯನ ನೆರವೇರಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತರಾದ ಕರುಣಾಕರ ಆಚಾರ್ಯ ಕೋಟೇಶ್ಯರ ಇವರ ಗಾಯನಕ್ಕೆ ಕಡಲಸಿರಿ ಸಂಘಟಕ ಹಾಗೂ ಕನ್ನಡ ಉಪನ್ಯಾಸಕರಾಗಿರುವ ಸಂದೀಪ ಕುಮಾರ ಶೆಟ್ಟಿ ಯವರ ಅರ್ಥಗಾರಿಕೆ ಮೆರುಗು ನೀಡಿತು.

Call us

Click Here

ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಮೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡಲಸಿರಿ ಘಟಕದ ವಿದ್ಯಾರ್ಥಿನಿ ಕಾರ್ಯದರ್ಶಿ ಸಂಪ್ರೀತ ಭಾಗವತರನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ಭವ್ಯ ಸ್ವಾಗತಿಸಿದರು ಅಷ್ಪಾಕ್ ವಂದಿಸಿದರು. ವಿದ್ಯಾರ್ಥಿನಿ ಕವನ ಕಾರ್ಯಕ್ರಮ ನಿರೂಪಿಸಿದರು.

Leave a Reply