ಬೈಂದೂರು ಪಿಎಸೈ ವರ್ಗಾವಣೆ ಆದೇಶ ರದ್ದು: ಮರಳಿ ಕರ್ತವ್ಯಕ್ಕೆ ಹಾಜರ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇತ್ತಿಚಿನ ಬೆಳವಣಿಗೆಯೊಂದರಲ್ಲಿ ಬೈಂದೂರು ಪಿಎಸ್‌ಐ ವರ್ಗಾವಣೆಯನ್ನು ರದ್ದುಗೊಂಡಿದ್ದು, ಅವರು ಮರಳಿ ಬೈಂದೂರು ಠಾಣೆಯಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Call us

Click Here

ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಇತ್ತಿಚಿಗೆ ಬೈಂದೂರು ಠಾಣಾಧಿಕಾರಿ ಸೇರಿದಂತೆ ನಾಲ್ವರು ಪಿಎಸ್‌ಐಗಳ ವರ್ಗಾವಣೆ ಆದೇಶ ನೀಡಿದ್ದರು. ಆದರೆ ಈ ಪೈಕಿ ಮೂವರು ಅಧಿಕಾರಿಗಳ ವರ್ಗಾವಣೆ ಆದೇಶ ರದ್ದುಗೊಳಿಸಿರುವುದರಿಂದ ಮರಳಿ ಅವರು ಬೈಂದೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬೈಂದೂರು ಠಾಣೆಗೆ ಪ್ರಕರಣವೊಂದರ ಇತ್ಯರ್ತಕ್ಕೆಂದು ಬಂದಿದ್ದ ಜಿ.ಪಂ ಸದಸ್ಯರೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಬೈಂದೂರು ಬಿಜೆಪಿ ಪ್ರತಿಭಟನೆ ನಡೆಸಿ ವರ್ಗಾವಣೆಗಾಗಿ ಪಟ್ಟು ಹಿಡಿದಿತ್ತು. ಇದರ ಬೆನ್ನಲ್ಲೆ ವರ್ಗಾವಣೆಯ ಸುದ್ದಿಯೂ ಹೊರಬಿದ್ದಿತ್ತು. ಆದರೆ ಇದೊಂದು ವೃತ್ತಿಸಹಜ ವರ್ಗಾವಣೆ ಎಂದು ಹೇಳಲಾಗಿತ್ತು. ಪಿಎಸ್‌ಐ ವರ್ಗಾವಣೆಯನ್ನು ಕೆಲವು ಸಾರ್ವಜನಿಕರೂ ವಿರೋಧಿಸಿ, ತಿಮ್ಮೆಶ್ ಅವರ ಪರವಾಗಿ ನಿಂತಿದ್ದರು. ಈ ಪ್ರಕರಣ ರಾಜಕೀಯ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು.

 

Leave a Reply