Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮತದಾನದ ವಿಶ್ವಾಸಾರ್ಹತೆ ಹೆಚ್ಚಿಸುವ ವಿವಿ ಪ್ಯಾಟ್
    ವಿಶೇಷ ವರದಿ

    ಮತದಾನದ ವಿಶ್ವಾಸಾರ್ಹತೆ ಹೆಚ್ಚಿಸುವ ವಿವಿ ಪ್ಯಾಟ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವೇ ಮತದಾನ. ಯಾವುದೇ ಧರ್ಮ, ಅಂತಸ್ತು, ಲಿಂಗ ಬೇಧವಿಲ್ಲದೇ ಪ್ರತಿಯೊಬ್ಬ ನಾಗರೀಕರೂ ಸಮಾನವಾಗಿ ಪಡೆದಿರುವ ಮತದಾನದ ಹಕ್ಕು , ತಮ್ಮ ಆಯ್ಕೆಯ ಯೋಗ್ಯ ಪ್ರತಿನಿಧಿಯನ್ನು ಆರಿಸಲು ದೊರೆತಿರುವ ಮುಕ್ತ ಸ್ವಾತಂತ್ರ.

    Click Here

    Call us

    Click Here

    ಈ ಮತದಾನ ಪ್ರಕ್ರಿಯೆಯಲ್ಲಿ, ಮತದಾರರು ಚಲಾಯಿಸುವ ಮತ ತಮ್ಮ ಆಯ್ಕೆಯ ವ್ಯಕ್ತಿಗೆ ದೊರೆತಿದೆ ಎಂಬುದನ್ನು ಖಾತರಿ ಪಡಿಸಲು ಚುನಾವಣಾ ಆಯೋಗ ಒದಗಿಸಿರುವ ವಿವಿ ಪ್ಯಾಟ್ (Voter Verifiable Paper Audit Trail) ಯಂತ್ರ ಮತದಾನದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸುತ್ತದೆ.

    ಹಿಂದೆ ಮತದಾನ ಸಂದರ್ಭದಲ್ಲಿ ಮತಪತ್ರಗಳನ್ನು ಬಳಸುತ್ತಿದ್ದು, ಇದರಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿತ್ತು ಇದನ್ನು ಸರಿಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆಯನ್ನು ಜಾರಿಗೆ ತಂದಿತು, ಇದರಿಂದ ಶೀಘ್ರದಲ್ಲಿ ಮತದಾನ ಮುಗಿದು ಮತ್ತು ಅತ್ಯಂತ ನಿಖರವಾಗಿ ಮತ್ತು ತ್ವರಿತಗತಿಯಲ್ಲಿ ಅಭ್ಯರ್ಥಿಯ ಆಯ್ಕೆ ಘೋಷಣೆ ನಡೆಯಲು ಸಾದ್ಯವಾಯಿತು.

    ಆದರೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಅಪಪ್ರಚಾರದಿಂದ ಮತದಾರರು ಗೊಂದಲಕ್ಕೊಳಗಾದ ಸಂದರ್ಭದಲ್ಲಿ, ಮತದಾರರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಮತಯಂತ್ರಗಳಿಗೆ ವಿವಿ ಪ್ಯಾಟ್ ಯಂತ್ರಗಳನ್ನು ಚುನಾವಣಾ ಆಯೋಗ ಅಳವಡಿಸದೆ.

    ಏನಿದು ವಿವಿ ಪ್ಯಾಟ್: ವೋಟರ್ ವೆರಿಫಯಬಲ್ ಪೇಪರ್ ಆಡಿಟ್ ಟ್ರೆಯಲ್ ಹೆಸರೇ ಸೂಚಿಸುವಂತೆ, ಮತದಾರ ತಾನು ಹಾಕಿದ ಅಮೂಲ್ಯ ಮತವನ್ನು ಸ್ವಯಂ ಪರಿಶೀಲಸಿಕೊಳ್ಳಬಲ್ಲ ಪೇಪರ್ ಮುದ್ರಿತ ಯಂತ್ರ, ಮತಗಟ್ಟೆಯಲ್ಲಿ ಮತ ಚಲಾಯಿಸುವ ಎಲೆಕ್ಟ್ರಾನಿಕ್ ಮತಯಂತ್ರದ ಪಕ್ಕದಲ್ಲಿ ಮತ್ತೊಂದು ಯಂತ್ರ ಇರುತ್ತದೆ, ಮತಯಂತ್ರದಲ್ಲಿ ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿದಾಗ, ವಿವಿ ಪ್ಯಾಟ್ ಯಂತ್ರದಲ್ಲಿ ನೀವು ಚಲಾಯಿಸದ ಮತ, ನೀವು ಮತಯಂತ್ರದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗೆ ಚಲಾವಣೆಯಾಗಿರುವ ಕುರಿತ, ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡು ಚೀಟಿಯ ಮುದ್ರಿತ ವಿವರಗಳನ್ನು ೭ ಸೆಕೆಂಡ್‌ಗಳ ಕಾಲ ವೀಕ್ಷಿಸಬಹುದು. ನಂತರ ಆ ವಿವರದ ಚೀಟಿ, ವಿವಿ ಪ್ಯಾಟ್ ಯಂತ್ರದಲ್ಲಿ ಅಳವಡಿಸಿರುವ ಪೆಟ್ಟಿಗೆಯಲ್ಲಿ ಮುದ್ರಿತವಾಗಿ ಬೀಳುತ್ತದೆ, ಈ ಮುದ್ರಿತ ಪ್ರತಿಯನ್ನು ಯಾರಿಗೂ ನೀಡುವುದಿಲ್ಲ, ವಿವಿ ಪ್ಯಾಟ್ ನಲ್ಲಿನ ಸೀಲ್ ಮಾಡಿದ ಬಾಕ್ಸ್ ನಲ್ಲಿ ಈ ಪ್ರತಿ ಇರಲಿದೆ. ಇದರಿಂದ ಯಾವುದೇ ಗೊಂದಲ, ಅನುಮಾನ ಗಳಿಗೆ ಅವಕಾಶವಿಲ್ಲದಂತೆ, ತನ್ನ ಅಮೂಲ್ಯ ಮತ ತನ್ನ ಆಯ್ಕೆಯ ಅಭ್ಯರ್ಥಿಗೆ ಚಲಾವಣೆಯಾಗಿದೆ ಎಂದು ಸ್ವಯಂ ಮತದಾರರೇ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

    Click here

    Click here

    Click here

    Call us

    Call us

    ಈ ವಿವಿ ಪ್ಯಾಟ್ ಯಂತ್ರಗಳನ್ನು ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಸಕಾರಿ ಸ್ವಾಮ್ಯದ ಬಿ.ಇ.ಎಲ್ ಕಂಪೆನಿ ಅಭಿವೃದ್ದಿಪಡಿಸಿದೆ.

    ಚುನಾವಣಾ ಸಮಯದಲ್ಲಿ ಸಾರ್ವಜನಿಕರಲ್ಲಿ ಮತದಾನ ಪ್ರಕ್ರಿಯೆ ಕುರಿತು ಇನ್ನಿಲ್ಲದ ಗೊಂದಲ ಮೂಡಿಸುವ ಕಿಡಿಗೇಡಿಗಳು ಎಚ್ಚರವಾಗಿರಲಿ, ಏಕೆಂದರೆ ವಿವಿ ಪ್ಯಾಟ್ ಯಂತ್ರದ ವಿರುದ್ದ ತಪ್ಪು ಆಪಾದನೆ ಮಾಡುವ ಕಿಡಿಗೇಡಿಗಳಿಗೆ ಕಾರಾಗೃಹವಾಸದ ಶಿಕ್ಷೆ ಖಚಿತ.

    ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸಹ ಈ ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಯಂತ್ರದ ಕಾರ್ಯ ವೈಖರಿ ಕುರಿತಂತೆ ಪ್ರತಿಯೊಬ್ಬ ಸಾರ್ವಜನಿಕರಿಗೂ , ಜಿಲ್ಲಾ ಸ್ವೀಪ್ ಸಮಿತಿಗಳ ವತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ತೋರಿಸುವುದರ ಮೂಲಕ ಮತದಾರರಿಗೆ ತಮ್ಮ ಮತ ಚಲಾವಣೆಯ ಖಾತ್ರಿ ಮೂಡಿಸಲಾಗುತ್ತಿದೆ.

    ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ 1111 ಮತಗಟ್ಟೆಗಳ ವ್ಯಾಪ್ತಿಯ 1 ಲಕ್ಷಕ್ಕೂ ಅಧಿಕ ಮತದಾರರಿಗೆ ವಿವಿ ಪ್ಯಾಟ್ ಕುರಿತು ಅರಿವು ಮೂಡಿಸಲಾಗಿದೆ. ಚುನಾವಣೆಯಲ್ಲಿ ಎಲ್ಲರೂ ಭಾಗವಹಿಸುವ ಉದ್ದೇಶದಿಂದ , ಅಂಗವಿಕಲರು, ಲಿಂಗತ್ವ ಅಲ್ಪ ಸಂಖ್ಯಾತರು, ಮೂಲ ನಿವಾಸಿಗಳು, ಮಹಿಳೆಯರು , ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಮತದಾರರಿಗೆ ವಿವಿ ಪ್ಯಾಟ್ ನ ಪ್ರಾತ್ಯಕ್ಷಿಕೆ ನೀಡಿದ್ದು, ಜಿಲ್ಲಾ ಸ್ವೀಪ್ ವತಿಯಿಂದ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳವತಿಯಿಂದ ಪ್ರತಿದಿನ ನಡೆಯುತ್ತಿರುವ ಸ್ವೀಪ್ ಕಾರ್ಯಕ್ರಮಗಳಲ್ಲಿ ಸಹ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್.

    ಆದ್ದರಿಂದ ಜಿಲ್ಲೆಯಲ್ಲಿ ಏಪ್ರಿಲ್ 18 ಮತ್ತು 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಮತದಾರರು ಯಾವುದೇ ಅನುಮಾನ ಗೊಂದಲಗಳಿಗೆ ಒಳಗಾಗದೇ, ವಿವೇಚನೆ ಬಳಸಿ, ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿ, ನಿಮ್ಮ ಮತ ಸರಿಯಾದ ವ್ಯಕ್ತಿಗೆ ಹಾಕಿರುವ ಕುರಿತು ವಿವಿ ಪ್ಯಾಟ್ ನಿಂದ ಖಾತರಿಪಡಿಸಿಕೊಳ್ಳಿ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.