ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆಗಳಿಗೆ ತೆರಳುವ ಯುವತಿಯರಿಗೆ ಬೆಂಗಳೂರಿನಲ್ಲಿ ಉಚಿತ ಟ್ರಾನ್ಸಿಟ್ ಹಾಸ್ಟೆಲ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ನಗರಕ್ಕೆ ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆ, ಇತ್ಯಾದಿಗಳಿಗೆ ಹಾಜರಾಗಲು ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ 3 ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಬೆಂಗಳೂರಿನಲ್ಲಿರುವ ಟ್ರಾನ್ಸಿಟ್ ಹಾಸ್ಟಲ್‌ಗಳಲ್ಲಿ ಕಲ್ಪಿಸಲಾಗುವುದು. ಬೆಂಗಳೂರು ನಗರದಲ್ಲಿನ ಇಂತಹ 13 ವಸತಿನಿಲಯಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು.

Call us

Click Here

ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0820-2574978 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply