ಕುಂದಾಪ್ರ ಡಾಟ್ ಕಾಂ ವರದಿ.
ಕೋಟ: ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಕಾರಂತ ಟ್ರಸ್ಟ್(ರಿ) ಕೋಟ ಇವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆಯುತ್ತಿರುವ ಡಾ|| ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಡಾ|| ಕಾರಂತ ಜನ್ಮ ದಿನೋತ್ಸವ ಸಂಭ್ರಮ ಸಾಹಿತ್ಯಿಕ-ಸಾಂಸ್ಕೃತಿಕ ಸುಗ್ಗಿ ಪುನರ್ವಸು-2019 (ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ.
ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ಹಾಗೂ ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ(ರಿ) ಕೋಟ ಇವರು ತರಬೇತಿ ನೀಡಿರುವ ಒಟ್ಟು 200 ವಿದ್ಯಾರ್ಥಿಗಳು ರಚಿಸಿದ ಬೇಸಿಕ್ ಆರ್ಟ್, ಈಝಿ ಫ್ರೀ ಹ್ಯಾಂಡ್ ಸ್ಕೆಚ್ ಮತ್ತು ಆರ್ಟ್, ಪೆನ್ಸಿಲ್ ಆರ್ಟ್ ಮತ್ತು ಶೇಡಿಂಗ್ ಆರ್ಟ್, ಲ್ಯಾಂಡ್ ಸ್ಕೇಪ್ (ಪ್ರಕೃತಿ ಚಿತ್ರಣ), ಕ್ರಾಫ್ಟ್ ವರ್ಕ್ಸ್ ಮತ್ತು ಮಾಡೆಲ್ ಆರ್ಟ್, ಮಾಡರ್ನ್ ಆರ್ಟ್ ಮತ್ತು ಕ್ಯಾನ್‌ವಾಸ್ ಪೈಂಟಿಂಗ್ ಕಲಾತ್ಮಕ ವಿವಿಧ ಕಲಾಚಿತ್ರಗಳು ಪ್ರದರ್ಶನಕ್ಕೆ ಇದೆ.
ಬಣ್ಣ ಮತ್ತು ರೇಖೆಗಳಲ್ಲಿ ಆಸಕ್ತಿ ಮೂಡಿಸುತ್ತ,ಬದುಕಿನ ಲಯ ,ಸೊಬಗು,ಜೀವಂತಿಕೆ ಮತ್ತು ವಿಸ್ಮಯಗಳನ್ನು ಮನಗಾಣುವ ಹೊಸ ದೃಷ್ಠಿಯನ್ನು ರೂಪಿಸುವ ಈ ’ಕಲಾ’ ಕಲಾಪ ಅಭಿನಂದನೀಯ,ಎಲ್ಲರಿಗೂ ಕಲಾತ್ಮಕ ಚಡಪಡಿಕೆ ಸದಾ ಇರಲಿ-ಶ್ರೀ ಜಯಂತ್ ಕಾಯ್ಕಿಣಿ,ಸಾಹಿತಿ
- ಮಗುವಿನ ಕಲ್ಪನೆಯ ಕುಸುರಿಗೆ ಸಾಣೆ ಹಿಡಿದು, ಮಕ್ಕಳಲ್ಲಿನ ಸೃಜನಾತ್ಮಕ ಅಭಿವ್ಯಕ್ತಿಗೆ ವಿಪುಲ ಅವಕಾಶ ನೀಡುತ್ತಿರುವ ಕಾರಂತ ಥೀಮ್ ಪಾರ್ಕ್‌ನ ಅನೌಪಚಾರಿಕ ಶಿಕ್ಷಣ ಕೇಂದ್ರ ಹಾಗೂ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್‌ನ ಎಲ್ಲ ಶಿಕ್ಷಕರ ಶ್ರಮ ಶ್ಲಾಘನೀಯ – ಪೋಷಕರು
- ಅತೀ ಕಡಿಮೆ ಅವಧಿಯಲ್ಲಿ ಚಿಕ್ಕ ಪುಟಾಣಿಗಳು ಬಿಡಿಸಿದ ಚಿತ್ರ ಅದ್ಬುತವಾಗಿತ್ತು.ಯಾವುದೇ ದೊಡ್ಡ ಚಿತ್ರಗಾರರಿಗೆ ಕಡಿಮೆ ಇಲ್ಲದಂತೆ ಮಕ್ಕಳು ಚಿತ್ರ ಅಭ್ಯಾಸ ಮಾಡುತ್ತಿದ್ದಾರೆ,ಮತ್ತು ಮುಂದೆ ದೊಡ್ಡ ಸಾಧನೆ ಮಾಡುತ್ತಾರೆ ಎಂಬ ಕಲ್ಪನೆ ಈ ಚಿತ್ರ ಪ್ರದರ್ಶನ ನಿದರ್ಶನವಾಗಿದೆ.ತರಬೇತುದಾರರಿಗೆ ಅಭಿನಂದನೆ.-ಉಮೇಶ್ ಕುಂದರ್,ಶಿಕ್ಷಕರು ಗಂಗೊಳ್ಳಿ