Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: ಡಾ. ಎ. ರಂಜಿತ್‌ಕುಮಾರ್ ಶೆಟ್ಟಿಯವರ ‘ನೆನಪಿನಾಳದಿಂದ’ ಪುಸ್ತಕ ಬಿಡುಗಡೆ
    ಊರ್ಮನೆ ಸಮಾಚಾರ

    ಕುಂದಾಪುರ: ಡಾ. ಎ. ರಂಜಿತ್‌ಕುಮಾರ್ ಶೆಟ್ಟಿಯವರ ‘ನೆನಪಿನಾಳದಿಂದ’ ಪುಸ್ತಕ ಬಿಡುಗಡೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ,
    ಕುಂದಾಪುರ: ವೈದ್ಯರ ಜೀವನದಲ್ಲಿ ನೋವು ನಲಿವುಗಳ ಅಪಾರ ಅನುಭಗಳು ಉಂಟಾಗುತ್ತವೆ. ಕರ್ತವ್ಯನಿಷ್ಠ ವೈದ್ಯ, ಸಮಾಜಕ್ಕೆ ಅನುಕೂಲವಾಗುವ ಸೇವೆಯನ್ನೇ ನೀಡುತ್ತಾನೆ. ಹಲವು ಮನೋಭಾವದ ಜನರೊಂದಿಗೆ ಸ್ಪಂದಿಸಿದಾಗ ಇಲ್ಲಿ ತಾಳ್ಮೆ, ವೃತ್ತಿ ಪ್ರಜ್ಞೆ ಎರಡೂ ಬೇಕಾಗುತ್ತದೆ. ಅಂತಹ ಅಪೂರ್ವ ಅನುಭವಗಳನ್ನು ಸ್ವಾರಸ್ಯಕರವಾಗಿ ತನ್ನ “ನೆನಪಿನಾಳದಿಂದ” ಕೃತಿಯಲ್ಲಿ ಕುಂದಾಪುರದ ಖ್ಯಾತ ವೈದ್ಯ ಡಾ| ಎ. ರಂಜಿತ್ ಕುಮಾರ್ ಶೆಟ್ಟಿ ನಿರೂಪಿಸಿದ್ದಾರೆ. ಇದು ಸಮಾಜದ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ವೈದ್ಯರ ಹಾಗೂ ಸಮಾಜದ ಕೆಲವರ ನಡುವೆ ಸಂಬಂಧಗಳು ಸಡಿಲವಾಗುತ್ತಿರುವಾಗ ಇಂತಹ ಕೃತಿ ಓದಿದರೆ ತಿಳುವಳಿಕೆ ಮೂಡುತ್ತದೆ” ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.

    Click Here

    Call us

    Click Here

    ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ “ಕುಂದಪ್ರಭ” ಆಶ್ರಯದಲ್ಲಿ ನಡೆದ ಡಾ.ಎ. ರಂಜಿತ್ ಕುಮಾರ್ ಶೆಟ್ಟಿಯವರ “ನೆನಪಿನಾಳದಿಂದ” ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

    ವೈದ್ಯಕೀಯ ಸೇವೆಯಲ್ಲಿ ತನ್ನ ಅನುಭವಗಳ ಬುತ್ತಿ ಬಿಚ್ಚಿ ಹೇಳಿದ ಅವರು ಹಲವು ಕಾನೂನು ನಿಯಮಗಳು, ಎಲ್ಲ ರೀತಿಯ ಮಾನವೀಯ ಸೇವೆ ಮಾಡಲು ಅವಕಾಶ ನೀಡುವುದಿಲ್ಲ. ಆದರೂ ವೈದ್ಯರ ಪ್ರಾಮಾಣಿಕ ಸೇವೆಗೆ ಗೌರವ ದೊರಕುತ್ತದೆ. ಡಾ. ರಂಜಿತ್ ಕುಮಾರ್ ಶೆಟ್ಟಿಯವರು ಪತ್ನಿ ಬೀನಾ ಶೆಟ್ಟಿ ಹಾಗೂ ಕುಟುಂಬ ಸದಸ್ಯರ ಸಹಕಾರದಿಂದ ಇಂತಹ ಹಲವು ಕಾರ್ಯಕ್ರಮ ನಡೆಸುವಂತಾಗಲಿ ಎಂದು ಹಾರೈಸಿದರು.

    Click here

    Click here

    Click here

    Call us

    Call us

    ಗುರುಗಳ ಮಾರ್ಗದರ್ಶನದ ಸ್ಪೂರ್ತಿ: ರಿಷಬ್ ಶೆಟ್ಟಿ
    “ನೆನಪಿನಾಳದಿಂದ” ಪುಸ್ತಕ ಬಿಡುಗಡೆ, “ಜಯಂತಣ್ಣನಿಗಾಗಿ” ಕಾದಂಬರಿ ದ್ವಿತೀಯ ಮುದ್ರಣ ಅನಾವರಣಗೊಳಿಸಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಚಿತ್ರನಟ ನಿರ್ದೇಶಕ ರಿಷಬ್ ಶೆಟ್ಟಿ, ಕುಂದಾಪುರ ಬೋರ್ಡ್ ಹೈಸ್ಕೂಲ್‌ನಲ್ಲಿ ಮೂರುವರ್ಷ ಕಲಿತ ನಾನು, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿಗೆ ಸೇರಿದೆ. ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸೇರಿದೆ. ಇಲ್ಲಿ ಶಿಕ್ಷಣ ಪಡೆಯು ವಾಗ ಅಶಸ್ತಿನ ವಿದ್ಯಾರ್ಥಿಯಾಗಿದ್ದೆ. ಶಿಕ್ಷಣಕ್ಕಿಂತ ಪಾಠೇತರ ಚಟುವಟಿಕೆಗಳ ಮೇಲೇಯೇ ಹೆಚ್ಚು ಒಲವಿತ್ತು. ಕೀಟಲೆ ಮಾಡುತ್ತಿದ್ದ ನನ್ನನ್ನು ಹಂದೆ ಗುರುಗಳು ಕರೆದು ನಿನ್ನ ಇದೆ ಉತ್ಸಾಹ ಕ್ರಿಯಾಶೀಲತೆಯನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಜೀವನದಲ್ಲಿ ತುಂಬ ಉಪಯೋಗವಾಗುತ್ತದೆ ಅಂದರು ಹಂದೆ, ವಸಂತ ಬನ್ನಾಡಿ, ದೋಮಚಂದ್ರಶೇಖರ , ಎ.ಸಿ.ತುಂಗ ಮುಂತಾದವರನ್ನು ನೆನೆದ ಅವರು ಶಿಕ್ಷಕರ ಮಾರ್ಗದರ್ಶನ ಅನುಸರಿಸಿದರೆ ಜೀವನದ ನೋವು ನಲಿವುಗಳನ್ನು ಎದುರಿಸಿ ಯಶಸ್ವಿಯಾಗಲು ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ” ಎಂದರು.

    ಡಾ. ರಂಜಿತ್ ಕುಮಾರ್ ಶೆಟ್ಟಿಯವರ ಜಯಂತಣ್ಣನಿಗಾಗಿ ಕಾದಂಬರಿಯನ್ನು “ಚಲನಚಿತ್ರ” ಮಾಡುವುದಾಗಿ ರಿಷಬ್ ಶೆಟ್ಟಿ ಘೋಷಿಸಿದರು. ಜಯಂತಣ್ಣನಿಗಾಗಿ ಕಾದಂಬರಿ ಒಂದು ಅದ್ಭುತ ಕೃತಿಯಾಗಿದ್ದು ಒಂದು ಉತ್ತಮ ಚಲನಚಿತ್ರ ಮಾಡಬಲ್ಲ ಕತೆ ಹೊಂದಿದೆ. ಈಗ ಇರುವ ಒತ್ತಡಗಳನ್ನು ಕಡಿಮೆ ಮಾಡಿಕೊಂಡ ಮೇಲೆ ಡಾ. ಎ. ರಂಜಿತಣ್ಣನವರಿಗಾಗಿ “ಜಯಂತಣ್ಣನಿಗಾಗಿ” ಚಲನಚಿತ್ರ ಮಾಡಿಯೇ ಮಾಡುತ್ತೇನೆ. ಸೂಕ್ತ ಕಲಾವಿದರನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.

    ಮಂಗಳೂರು ಶ್ರೀರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ, ಮಾತನಾಡಿ “ಡಾ. ಎ. ರಂಜಿತ್ ಕುಮಾರ್ ಶೆಟ್ಟಿಯವರ “ನೆನಪಿನಾಳ”ದಿಂದ ಕೃತಿ ವಿದ್ಯಾರ್ಥಿಗಳಿಗೆ ಒಂದು ಪಠ್ಯವಾಗಿ ಉಪಯೋಗಿಸುವಂತಿದೆ. ಸಮಾಜಕ್ಕೂ ವೈದ್ಯಕೀಯ ಲೋಕದ ವಿಸ್ಮಯದ ಘಟನೆಗಳು ಮಾನವೀಯ ಸಂಬಂಧಗಳೊಂದಿಗೆ, ವ್ಯದ್ಯರನ್ನೇ ಬೆಚ್ಚಿ ಬೀಳಿಸುವಂತ ಜನರ ನಡವಳಿಕೆಯನ್ನೂ ತೋರಿಸುತ್ತದೆ” ಎಂದು ಹಲವು ಸನ್ನಿವೇಶಗಳನ್ನು ವಿವರಿಸಿದರು. ಡಾ. ಎ. ರಂಜಿತ್ ಕುಮಾರ್ ಶೆಟ್ಟಿಯವರ ಹೃದಯಂಗಮ ಕಾದಂಬರಿ ಚಲನಚಿತ್ರವಾಗಿಸುವಂತೆ ಅವರು ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಕೋರಿದರು.

    ಪ್ರಾಸ್ತವಿಕವಾಗಿ ಮಾತನಾಡಿದ ಡಾ.ಎ.ರಂಜಿತ್ ಕುಮಾರ್ ಶೆಟ್ಟಿ” ಇಂದು ವೈದ್ಯರು ಕಬ್ಬಿಣದ ಎದೆ, ಐಸ್‌ಕೂಲ್ ತಲೆ, ಸ್ವೀಟ್ ನಾಲಿಗೆ ಹೊಂದಿರಬೇಕು. ವೈದ್ಯಕೀಯ ಬದುಕಿನ ನಾಲ್ಕು ದಶಕದಲ್ಲಿ ವೈದ್ಯರಲ್ಲೂ, ಜನಸಾಮಾನ್ಯರ ಮನೋಭಾವದಲ್ಲೂ ಬಹಳ ಬದಲಾವಣೆಯಾಗಿದೆ. ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ಪ್ರಾಮಾಣಿಕ ವೈದ್ಯಕೀಯ ಸೇವೆಯೂ ಕೆಲವೊಮ್ಮೆ ಸಂಕಟಕ್ಕೆ ಸಿಲುಕಿದರೂ, ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ವೈದ್ಯರು ಹಣದ ಅತಿ ಮೋಹ ಸಹ ಬಿಡಬೇಕಾಗುತ್ತದೆ ಎಂದರು.

    ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್ ಅಭಿನಂದನಾ ಪತ್ರ ವಾಚಿಸಿದರು. ಬೀನಾ ಶೆಟ್ಟಿ, ಲಕ್ಷ್ಮೀ ಶೆಟ್ಟಿ, ಅನಿಕಾ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಡಾ. ಗಣೇಶ್ ಪೈ, ಡಾ. ಸಿದ್ದಾರ್ಥ ಶೆಟ್ಟಿ, ಡಾ. ಸುಷ್ಮಾ ಶೆಣೈ ಸ್ಮರಣಿಕೆ ನೀಡಿದರು.

    ಕೆ.ಪಿ.ರಾಮನ್ , ಕಿರಣ್ ಭಟ್, ಎಚ್.ಸೋಮಶೇಖರ್ ಶೆಟ್ಟಿ ಸಹಕರಿಸಿದರು. ತೆಂಕನಿಡಿಯೂರು ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿದರು. ಪಿ.ಜಯವಂತ ಪೈ ವಂದಿಸಿದರು. ಡಾ. ಕಾಶಿನಾಥ ಪೈ, ಡಾ. ಪ್ರಕಾಶ್ ಕಾಮತ್, ಡಾ.ಸತೀಶ್ ಪೂಜಾರಿ, ಕು|ಶಿಪ್ರಾ ಚಾತ್ರ, ವಿನೂಶ್ ಭಾರದ್ವಾಜ್ ಸಂಗೀತ ಕಾರ್ಯಕ್ರಮ ನೀಡಿದರು.

     

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ

    06/12/2025

    ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ

    06/12/2025

    ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ

    06/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d