Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಥಾಲ್ಯಾಂಡ್ನ ತೆರೆದೆದೆಯ ಸುಂದರಿಯರು. ಇವರು ನಿಜವಾಗಿಯೂ ಹೆಣ್ಣೇ?
    ಅನುಭವದ ಆಳದಿಂದ

    ಥಾಲ್ಯಾಂಡ್ನ ತೆರೆದೆದೆಯ ಸುಂದರಿಯರು. ಇವರು ನಿಜವಾಗಿಯೂ ಹೆಣ್ಣೇ?

    Updated:27/06/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಪ್ರವಾಸೀ ಸಂಸ್ಥೆ ಪರವಾಗಿ ಬರಮಾಡಿಕೊಂಡವಳೇ ಥಾಯೀ ಚೆಲುವೆ ಧಾರಾ. ‘ಸಾವಾತಿಕಾ’ ಎನ್ನುತ್ತಾ, ಎರಡೂ ಕೈ ಮುಗಿದು, ‘ನಮಸ್ತೇ’ ಎಂದು ಹೇಳಿ ನಾವು ಭಾರತೀಯರೆಲ್ಲರ ಒಲುಮೆ ಗಿಟ್ಟಿಸಿಕೊಂಡಳು. ‘ನೀವು ಭಾರತೀಯರು ವಿಚಿತ್ರ ಮಂದಿ’ ಎಂದು ಆಕೆ ಹೇಳಿದಾಗ ನಾವು ಹುಬ್ಬೇರಿಸಿ, ‘ಯಾಕೆ?’ ಎಂದು ಕೇಳಿದೆವು. ‘ನಿಮಗೆ ಭಾರತೀಯವಾದ ತಿಂಡಿ ಸಿಗುವಲ್ಲಿಗೆ ಕರಕೊಂಡು ಹೋಗ್ತೇನೆ, ಆದೀತಾ? ಎಂದು ಆಕೆ ಕೇಳಿದಾಗ ನಾವು ತಲೆಯಾಡಿಸಿದೆವು. ಆಕೆ ಆಗ ಗಹಗಹಿಸಿ ನಕ್ಕು ‘ಇದಕ್ಕೇ ಅಂದದ್ದು, ನೀವು ವಿಚಿತ್ರ ಮಂದಿ ಎಂತ’ ಎಂದು ಹೇಳಿ, ‘ನಾವೆಲ್ಲಾ ‘ಹೌದು’ ಎನ್ನಬೇಕಾದರೆ ತಲೆಯನ್ನು ಮೇಲಿಂದ ಕೆಳಗೆ ಅಲುಗಾಡಿಸುತ್ತೇವೆ. ‘ಅಲ್ಲ’ ಅಥವಾ ‘ಬೇಡ’ ಎನ್ನಬೇಕಾದರೆ ತಲೆಯನ್ನು ಅಡ್ಡಡ್ಡ ಅಲ್ಲಾಡಿಸುತ್ತೇವೆ. ಎಲ್ಲಾ ಕಡೆ ಹೀಗಿದೆ. ಹೌದಾ?’ ಎಂದಳು. ‘ಹೌದು’ ಎಂದೆವು. ‘ನೀವು ಹಾಗಲ್ಲಪ್ಪ – ಅಲ್ಲ ಎನ್ನುವಾಗಲೂ ಅಡ್ಡಡ್ಡ ತಲೆಯಾಡಿಸುತ್ತೀರಿ, ಹೌದು ಎನ್ನುವಾಗಲೂ ಅಡ್ಡಡ್ಡ ತಲೆಯಾಡಿಸುತ್ತೀರಿ. ನಿಮ್ಮದು ವಿಚಿತ್ರ ಅಲ್ಲವೇ?’ ಎಂದಾಕೆ ಕೇಳಿದಾಗ ಆಕೆ ಹೇಳುತ್ತಿರುವುದು ಹೌದೆನ್ನಿಸಿ ಈಗ ನಗುವ ಸರದಿ ನಮ್ಮದಾಯಿತು. ಆಕೆ ಹೀಗೆ ಎಲ್ಲಾ ಭಾರತೀಯ ಪ್ರವಾಸಿ ತಂಡಗಳಿಗೂ ಇದೇ ಕಥೆ ಹೇಳಿ ರಂಜಿಸುತ್ತಿರುತ್ತಾಳೆ.

    Click Here

    Call us

    Click Here

    ಧಾರಾ ಮಾಡಿದ ಮೋಡಿ
    ‘ಇವತ್ತು ರಾತ್ರಿ ನಿಮಗೆಲ್ಲಾ ಪಟ್ಟಾಯದಲ್ಲಿನ ಪ್ರಸಿದ್ಧ ‘ಅಲ್ಕಝಾರ್’ ಶೋ ತೋರಿಸುತ್ತೇನೆ’ ಎಂದಿದ್ದಳು ಧಾರಾ. ‘ಅಲ್ಲೇನಿದೆ?’ ಎಂದರೆ, ‘ನಿಮ್ಮಂತಹ ಹುಡುಗರಿಗೆ ಬೇಕಾದ್ದೆಲ್ಲಾ ಇದೆ’ ಎಂದು ಕಣ್ಣು ಮಿಟುಕಿಸಿ, ಶೇಳೆ ಮಾಡಿದಳು. ಆಕೆಯ ಮಿಡುಕಲು ಕಂಡು ಖುಷಿಯಾದ ನಮ್ಮ ಹುಡುಗರೆಲ್ಲಾ ಆಗಲೇ ‘ಧಾರಾ – ಈ ಕಡೆ ಬಾರಾ’ ಎಂದು ಬಸ್ಸಿನಲ್ಲಿ ಅವರ ಹೆಂಗಸರಿದ್ದುದನ್ನೂ ಲೆಕ್ಕಿಸದೇ ರಾಗವಾಗಿ ಹಾಡಲು ಶುರುಮಾಡಿದಾಗ, ಅದನ್ನು ಕೇಳಿ ವೈಯಾರ ಮಾಡಿ ಆಕೆ ಅವರತ್ತ ಕೈ ಬೀಸಿದಾಗ, ನಮ್ಮ ಹುಡುಗರಿಗೆ ಸ್ವರ್ಗವೇ ಸಿಕ್ಕಿದಂತೆ – ಗುಲ್ಲೋ ಗುಲ್ಲು. ‘ಆಕೆ ಯಾರನ್ನು ಕಂಡು ಕೈ ಬೀಸಿದಳು?’ ಎಂದೇ ಜಿಜ್ಞಾಸೆ ! ಧಾರಾ ನಮ್ಮ ತಂಡದ ಮೇಲೆ ಆಗಲೇ ಅಂತಹ ಮೋಡಿ ಮಾಡಿಬಿಟ್ಟಿದ್ದಳು.

    ಸುಂದರಾಂಗಿಯರ ಅಂಗ ವೈಭವ
    ಅವಳೆಂದಂತೆ ಅಂದು ರಾತ್ರಿ ಅಲ್ಕಝಾರ್ ಶೋಗೆ ಹೋದೆವು. ಆಗಲೇ ಅಲ್ಕಝಾರ್ ಭವನ ಕಿಕ್ಕಿರಿದಿತ್ತು. ಟಿಕೇಟು ಮೂಲಕವೇ ಪ್ರವೇಶ. ಪ್ರವಾಸಿಗಳೇ ಪ್ರೇಕ್ಷಕ ವೃಂದ. ಥಾಯೀ ತರುಣೀಯರ ಮನಮೋಹಕ ನೃತ್ಯ ಪ್ರದರ್ಶನ ಎಂದು ಕೇಳಿಯೇ ನಮ್ಮವರಿಗೆ ಆತುರ, ಕಾತರ. ನೃತ್ಯ ಶುರುವಾಗುವ ಮೊದಲೇ ಅಂದದ ನೃತ್ಯಗಾತಿಯರಿಬ್ಬರು ಕೆಂಪಿನ, ಚಂದದ ಪೋಷಾಕು ತೊಟ್ಟು, ನಸುಗೆಂಪಾದ, ಉಬ್ಬಿದ ಅರ್ಧ ಎದೆ ಹೊರ ಕಾಣುವಂತೆ ಕುಣಿಯುತ್ತಾ ಭವನದ ಹೊರಗೆ ಕಾಯುತ್ತಿದ್ದ ಪ್ರವಾಸಿಗಳೆಡೆ ಬಂದಾಗ, ಅವರನ್ನು ಕಾಣಲು ನೂಕು ನುಗ್ಗಲೇ ಉಂಟಾಯಿತು. ಎಲ್ಲಾ ಪ್ರವಾಸಿಗಳು ಕೈಯಲ್ಲಿದ್ದ ಕ್ಯಾಮರಾದಿಂದ ಝಗ್ ಝಗ್ ಎಂದು ಚಿತ್ರ ತೆಗೆದದ್ದೇ ತೆಗೆದದ್ದು. ಕೆಲವು ಸಾಹಸಿಗರು ಈ ಕೆಂಪಿನ ಕೆಂಚಮ್ಮಗಳೊಂದಿಗೆ ನಿಂತು ಪೋಸು ಕೊಡಲು ಮುನ್ನುಗ್ಗಿ ಹೋದರೆ, ‘ನೂರು ಬಾತ್ ಕೊಡಿ – ಕೊಟ್ಟರೆ ಮಾತ್ರ ಫೋಟೋ’ ಎಂದಾಕೆ ಮೋಹಕವಾಗಿ ಉಲಿದಾಗ ಅದಕ್ಕೆ ಮರುಳಾಗಿ ನೋಟುಗಳ ಸುರಿಮಳೆ ಹರಿಸಿ ಚಿತ್ರ ತೆಗೆಸಿಕೊಂಡರು ಪ್ರವಾಸೀ ಪಡ್ಡೆ ಹುಡುಗರು – ಇಳಿ ವಯಸ್ಕರು ಕೂಡಾ. ಕೊನೆ ಕೊನೆಗೆ ಬರೀ ಫೋಟೋ ತೆಗೆಯಲಿಕ್ಕೂ ದುಡ್ಡು ಕೊಡಿ ಎಂದು ಈ ಬಿಚ್ಚಮ್ಮಗಳು ಹೇಳತೊಡಗಿದಾಗ ಪ್ರವಾಸಿಗಳಿಗೆ ದಮ್ಮಿಲ್ಲ ! ಅಷ್ಟರಲ್ಲಿ ‘ಶೋ’ ಶುರುವಾಗುತ್ತದೆಂದು ಈ ಸುಂದರಾಂಗಿಯರು ಭವನದೊಳಕ್ಕೆ ಓಡಿಬಿಟ್ಟರು.

    ಅಲ್ಕಝಾರ್ ಎಂಬ ಗಂಧರ್ವಲೋಕ
    ಅದೊಂದು ಅದ್ಭುತ ಶೋ. ಕ್ಷಣ ಕ್ಷಣಕ್ಕೂ ರಂಗದ ಮೇಲೆ ರಂಗು ರಂಗಿನ ಅಂಗನೆಯರು ! ವೈವಿಧ್ಯಮಯ ಉಡುಗೆ, ತೊಡುಗೆ – ಆಹ್ಲಾದಕರ ಹಿನ್ನೆಲೆ ಸಂಗೀತ. ಇದಕ್ಕೆ ಸರಿಯಾಗಿ ನತರ್ಿಸುವ ಥಾಯೀ ಕಾಮಿನಿಯರು. ಒಮ್ಮೆಲೇ ವೇದಿಕೆ ಮೇಲೆ ರಾರಾಜಿಸುವ ನೂರರಷ್ಟು ಥಾಯೀ ಲಲನಾ ಮಣಿಗಳು ! ದೇವತೆಗಳಂತೆ ಎತ್ತರದಿಂದ ಇಳಿದು ಬರುವುದು, ಗಂಧರ್ವ ಕನ್ನಿಕೆಯರಂತೆ ಸಖೀ ಸಮೂಹ ಆಕೆಯನ್ನೆದುರುಗೊಳ್ಳುವುದು, ರಾಜಕುಮಾರನೊಬ್ಬನ್ನೊಂದಿಗೆ ಈ ರಾಜಕುಮಾರಿ ಕುಣಿಯುವುದು, ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು. ಯಾವ ಸುಂದರಿಯೂ ಚೆಲುವಿಗೆ ಒಬ್ಬರಿನ್ನೊಬ್ಬರಿಗೆ ಕಡಿಮೆ ಇಲ್ಲ. ವಿಶೇಷ ಆಕರ್ಷಣೆ ಎಂದರೆ ಅರ್ಧ ತೆರೆದ ಅವರ ದಷ್ಟಪುಷ್ಟ ಎದೆಗಳು ಮತ್ತು ಅವುಗಳನ್ನು ಅಲುಗಾಡಿಸುತ್ತಾ ಕುಣಿಯುವ ಕಾಮೋತ್ತೇಜಕ ಭಂಗಿ. ಅದರತ್ತಲೇ ಪ್ರೇಕ್ಷಕರೆಲ್ಲರ ನೋಟ ಮತ್ತು ಅವರ ಕೆಮರಾಗಳ ಕಾಟ. ಫೋಟೋ ತೆಗೆಯಬಾರದು ಎಂಬ ನಿರ್ಬಂಧ ಲೆಕ್ಕಿಸದೇ ಕಿಕ್ಕಿರಿದ ಪ್ರೇಕ್ಷಕರು ಸತತ ಕೆಮರಾ ಕ್ಲಿಕ್ಕಿಸುತ್ತಲೇ ಇದ್ದರು. ರಂಗದ ಮೇಲಿನ ದೃಶ್ಯಗಳೋ ಕ್ಷಣಕ್ಕೊಮ್ಮೆ ಬದಲಾಗುತ್ತಲೇ ಇರುತ್ತವೆ. ಅರಮನೆಯೊಂದರ ಆಸ್ಥಾನದ ದೃಶ್ಯ ಕಂಡುಬಂದ ಮರುಕ್ಷಣದಲ್ಲೇ ಶಿಲ್ಪಕಲಾ ಕುಸುರಿ ಕೆಲಸದ ಆ ಭಾರೀ ಭಾರೀ ಕಂಬಗಳು ತನ್ನಿಂತಾನೇ ಹಿಂದೆ ಸರಿದು ಮಾಯವಾಗಿ, ಅದ್ಭುತ ಉದ್ಯಾನಗಳು ಅವುಗಳ ಸ್ಥಾನದಲ್ಲಿ ಮೂಡಿಬರುವ ಕ್ಷಣಮಾತ್ರದ ಮಾಯಾಜಾಲ, ಬಣ್ಣಗಳ ಮೋಡಿ, ಜಗಜಗಿಸುವ, ವರ್ಣಮಯ ದೀಪಗಳು, ತೂರಿಬರುತ್ತಿರುವ ಬೆಳಕಿನ ಕಿರಣಗಳು ಪ್ರವಾಸಿಗಳಿಗೆ ಧನ್ಯತಾಭಾವ ತಂದಿತು. ಒಬ್ಬನೇ ಗಂಡೂ, ಹೆಣ್ಣೂ ಆಗಿ ಪ್ರೇಕ್ಷಕರನ್ನು ಗೊಂದಲಕ್ಕೂ, ಮೋಜಿಗೂ ಸಿಕ್ಕಿಸಿ ಮಾಡಿದ ನೃತ್ಯ ಪ್ರಚಂಡ ಚಪ್ಪಾಳೆ ಗಿಟ್ಟಿಸಿತ್ತು. ಹೀಗೆ ಸುಮಾರು ಒಂದು ತಾಸಿನ ಥಾಯೀ ಅಂಗನೆಯರ ರಾಸಕ್ರೀಡೆ ಕಂಡು ಆನಂದಿಸಿ ಜನಸ್ತೋಮ ಹೊರಬಂದಾಗ ಅವರಿಗೆಲ್ಲಾ ಪಟ್ಟಾಯಕ್ಕೆ ಬಂದದ್ದು ಸಾರ್ಥಕ ಎನ್ನಿಸಿರಬೇಕು. ಆಗಲೇ ಮತ್ತೆ ನರ್ತಕಿಯರು ಭವನದ ಹೊರಗಿನ ಅಂಗಣದಲ್ಲಿದ್ದುಬಿಟ್ಟಿದ್ದರು. ಮತ್ತೆ ಅವರಿಗೆ ಮುತ್ತಿಗೆ, ಅವರೊಂದಿಗೆ ನಿಂತು, ಮೈ ಮುಟ್ಟಿ ಚಿತ್ರ ತೆಗೆಸಿಕೊಳ್ಳುವವರ ನೂಕು ನುಗ್ಗಲು, ಉತ್ಸಾಹ. ನೃತ್ಯಗಾತಿಯರಿಗೆ ಕೈ ತುಂಬಾ ಸಂಪಾದನೆ.

    ಧಾರಾ ಹೊರಹಾಕಿದ ಸತ್ಯ !
    ಎಲ್ಲ ಮುಗಿಸಿ, ಭಾರತೀಯ ಹೋಟೇಲೊಂದರಲ್ಲಿ ಊಟಕ್ಕೆಂದು ಬಸ್ಸ್ನಲ್ಲಿ ಕುಳಿತು ಹೊರಟಾಗ ಧಾರಾ ಹೇಳಿದ್ದು ಕೇಳಿ ಆಘಾತವಾಯಿತು. ‘ಹೇಗಿದ್ದಾರೆ ಸುಂದರಿಯರು?’ ಎಂದಾಕೆ ಕೇಳಿದಾಗ, ‘ಸುಪರ್ ! ಲವ್ಲೀ !’ ಎಂದೆಲ್ಲಾ ಉದ್ಗಾರಗಳು ಬಂದುವು. ‘ಆದರೆ ಒಂದು ಸತ್ಯ ಹೇಳುತ್ತೇನೆ, ಅವರ್ಯಾರೂ ಹೆಣ್ಣುಗಳಲ್ಲ’ ಎಂದು ಧಾರಾ ಉಸುರಿದಾಗ, ಇಡೀ ಬಸ್ನಲ್ಲಿದ್ದವರಿಗೆಲ್ಲಾ ಉಸಿರೇ ನಿಂತು ಹೋದ ಹಾಗೆ -ಬಸ್ಸಿಡೀ ನಿಶ್ಯಬ್ಧ ! ಮೌನವಾಗಿ ಅವಳ ಮಾತು ಕೇಳಿದರು. ‘ಅವರೆಲ್ಲಾ ಲೇಡಿ ಬಾಯ್ಸ್ !’ ಎಂದಾಕೆ ಘೋಷಿಸಿದಾಗ ನಮ್ಮ ಹುಡುಗರಿಗೆ ನಂಬಲಿಕ್ಕೇ ಆಗಲಿಲ್ಲ. ದುಡ್ಡು ಕೊಟ್ಟು, ಹತ್ತಿರ ನಿಂತು, ಮೈ ಮುಟ್ಟಿ ಫೋಟೋ ತೆಗೆಸಿಕೊಂಡ ರಸಿಕರಿಗಂತೂ ತಾವು ಈ ರೀತಿಯೂ ಬೇಸ್ತು ಹೋಗುವುದೇ ಎಂಬ ಆತಂಕ!

    Click here

    Click here

    Click here

    Call us

    Call us

    ಲೇಡಿಬಾಯ್ಸ್ ಎಂಬ ಸುಂದರಿಯರು
    ‘ಈ ಥಾಲ್ಯಾಂಡಿನಲ್ಲಿ 2 ಲಕ್ಷಕ್ಕೂ ಮಿಕ್ಕಿ ಇಂತಹ ಲೇಡೀ ಬಾಯ್ಸ್ ಇದ್ದಾರೆ’ ಎಂದಾಕೆ ತಿಳಿಸಿದಾಗ ಎಲ್ಲರಿಗೂ ಇನ್ನೊಂದು ಶಾಕ್ ! ‘ಹುಟ್ಟುವಾಗ ಹಾಗಿರುವುದಿಲ್ಲ. ಹುಡುಗರಾಗಿರುತ್ತಾರೆ. ಆದರೆ ಕೆಲವರು ಹಾರ್ಮೋನು ಚಿಕಿತ್ಸೆಯಿಂದ ಸ್ತನಗಳನ್ನು ಪಡೆದುಕೊಳ್ಳುತ್ತಾರೆ, ಕೆಲವರು ಶಸ್ತ್ರಕ್ರಿಯೆ ಮಾಡಿಸಿಕೊಂಡು ಲೇಡಿ ಬಾಯ್ಸ್ ಆಗುತ್ತಾರೆ. ಆದರೆ ನಿಜವಾಗಿ ಇವರೆಲ್ಲಾ ಹುಡುಗರು – ಹುಡುಗಿಯರಲ್ಲ’ ಎಂದಾಕೆ ವಿವರಿಸಿದಳು.

    ಹಿಂದಿನ ಜನ್ಮದ ಪಾಪ….
    ‘ಹಿಂದಿನ ಜನ್ಮದಲ್ಲಿ ಅವರು ಮಾಡಿದ ಪಾಪಕ್ಕಾಗಿ ಈ ಜನ್ಮದಲ್ಲಿ ಅವರೆಲ್ಲ ಲೇಡಿಬಾಯ್ಸ್ ಆಗುತ್ತಾರೆ ಎಂತ ಇಲ್ಲಿನ ನಂಬಿಕೆ’ ಎಂದು ಧಾರಾ ದನಿಗೂಡಿಸಿದಳು. ‘ಅದು ಹೇಗೆ ?’ ಎಂದು ಕೇಳಿದರೆ, ‘ಹಿಂದಿನ ಜನ್ಮದಲ್ಲಿ ಹೆಣ್ಣುಗಳನ್ನು ಕಾಡಿಸಿ, ಪೀಡಿಸಿ, ಹಿಂಸೆ ಕೊಟ್ಟ ಪಾಪ ಮಾಡಿದ ಕಾರಣ ಅವರೆಲ್ಲಾ ಲೇಡಿಬಾಯ್ಸ್ ಆಗಿ, ಈಗ ಅದೇ ರೀತಿಯ ಹಿಂಸೆ ಅನುಭವಿಸಬೇಕಾಗಿದೆ ಎಂದು ಇಲ್ಲಿನ ಜನ ನಂಬಿದ್ದಾರೆ’ ಎಂದಳು. ‘ಹೇಗಿದ್ದಾರೆ ಈ ಲೇಡಿಬಾಯ್ಸ್?’ ಎಂದಾಕೆ ನಗುತಾ ಕೇಳಿದಾಗ ಬಸ್ಸಿನಲ್ಲಿದ್ದವರಾರಿಗೂ ಕೊಡಲು ಉತ್ತರವೇ ಇರಲಿಲ್ಲ !

    ನಡೆದ ಒಂದು ಘಟನೆ
    ಸ್ವಿಝರ್ಲ್ಯಾಂಡಿನ ಒಬ್ಬ ಪ್ರವಾಸಿ ಥಾಲ್ಯಾಂಡಿಗೆ ಬಂದ. ಓರ್ವ ನೃತ್ಯಗಾತಿಯನ್ನು ಕಂಡ. ಮೋಹಿಸಿದ, ಪ್ರೀತಿಸಿದ. ‘ನಿನ್ನನ್ನು ಮದುವೆಯಾಗುತ್ತೇನೆ’ ಎಂದ. ಆಕೆಯನ್ನು ಥಾಲ್ಯಾಂಡಿನ ಒಂದು ಹಳ್ಳಿಗೆ ಕರೆದೊಯ್ದ. ಅಲ್ಲಿ ಹೋಗಿ ನೋಡುವಾಗ ಹೊರಗಿನಿಂದ ಸುಂದರ ಕನ್ಯೆಯಾಗಿ ಕಂಡ ಆಕೆ, ಒಳಗಿನಿಂದ ಗಂಡು ಆಗಿದ್ದು ಕಂಡು ಕದಲಿ ಹೋದ. ಆಕೆಯ ಪಾಸ್ಪೋಟರ್ನಲ್ಲಿ ಆಕೆಯ ಹೆಸರು ‘ಮಿಸ್ಟರ್’ ಎಂದು ಬರೆದದ್ದನ್ನು ಓದಿದಾಗ ಗೋಳೇ ಎಂದು ಅತ್ತೇ ಬಿಟ್ಟ ! ಇದು ಅದೆಷ್ಟೋ ಪ್ರವಾಸಿಗಳಿಗೆ ಇಂತಹ ಲೇಡಿಬಾಯ್ಸ್ಗಳೊಂದಿಗೆ ಆಗಿರುವ ಅನುಭವ.

    Like this:

    Like Loading...

    Related

    ASN Hebbar
    Share. Facebook Twitter Pinterest LinkedIn Tumblr Telegram Email
    ಮಾಧ್ಯಮದ ಮಧ್ಯದಿಂದ
    • Website
    • Facebook

    ಐರೋಡಿ ಶಂಕರನಾರಾಯಣ (ಎ.ಎಸ್.ಎನ್) ಹೆಬ್ಬಾರ್ ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಸಾಹಿತಿ, ಪತ್ರಕರ್ತ, ವಾಗ್ಮಿ, ಅಂಕಣಕಾರಕಾಗಿ, ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮಾನಸದಲ್ಲಿ ಗುರುತಿಸಿಕೊಂಡವರು. ವಯಸ್ಸು 75 ದಾಟಿದರೂ ಸದಾ ಲವಲವಿಕೆಯಿಂದಿರುವ ಹೆಬ್ಬಾರರದ್ದು ಹಾಸ್ಯ ಪ್ರವೃತ್ತಿಯಳ್ಳ ವ್ಯಕ್ತಿತ್ವ. ಸ್ನೇಹಜೀವಿ. ಹತ್ತಾರು ದೇಶ ಸುತ್ತಿದ ಅನುಭವ ಇರುವ ಹೆಬ್ಬಾರರಿಗೆ ಈವರೆಗೆ ಸಂದಿರುವ ಪ್ರಶಸ್ತಿ, ಗೌರವಗಳು ಅನೇಕ. ಪತ್ನಿ ಸುಧಾರೊಂದಿಗೆ ಕುಂದಾಪುರದ "ನುಡಿ"ಯಲ್ಲಿ ವಾಸಿಸುತ್ತಿರುವ ಹೆಬ್ಬಾರರಿಗೆ ಮೂರು ಮಕ್ಕಳು ಹಾಗೂ ಆರು ಮೊಮ್ಮಕ್ಕಳು. ಅವರ ಸುರ್ದೀಘ 50 ವರ್ಷಗಳ ಪತ್ರಿಕಾ ವೃತ್ತಿ, ವಕೀಲಿ ವೃತ್ತಿಯ ಅನುಭವಗಳು, ಪ್ರವಾಸ ಕಥನಗಳು ಕುಂದಾಪ್ರ ಡಾಟ್ ಕಾಂ ನ 'ಮಾಧ್ಯಮದ ಮಧ್ಯದಿಂದ' ಅಂಕಣದಲ್ಲಿ ಮೂಡಿಬರುತ್ತಿದೆ.

    Related Posts

    ಹೌಸ್ ಆಫ್ ಕಾಮನ್ಸ್‌ನಿಂದ ಹೈದ್ರಾಬಾದ್ ತನಕ ಹಕ್ಕುಚ್ಯುತಿ ಹೋರಾಟ

    12/05/2018

    ಜೋಕು ಮಾಡಿದರೆ ಜೋಕೆ !

    18/02/2018

    ಕುಟುಕು ಕಾರ್ಯಾಚರಣೆ ಎಂಬ ಬ್ರಹ್ಮಾಸ್ತ್ರ

    14/10/2017

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d