ಎ.ಎಸ್.ಎನ್. ಹೆಬ್ಬಾರ್. ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ರಾಯ್ ’ಸೋನಾರ್ ಕೆಲ್ಲಾ’ (ಚಿನ್ನದ ಕೋಟೆ) ಎಂಬ ಜನಪ್ರಿಯ ಚಿತ್ರ ನಿರ್ಮಿಸಿದ್ದರು. ಅದರಲ್ಲಿ ಮುಕುಲ್ ಎಂಬ ಹುಡುಗನ ಪಾತ್ರ ಇದೆ. ಈತ ಹಿಂದಿನ ಜನ್ಮದ ನೆನಪಿದ್ದವ. ಅವನ ನೆನಪಿನಲ್ಲಿ ’ಚಿನ್ನದ ಕೋಟೆ’ ಕಾಡುತ್ತಿತ್ತು. ಅವನ ವೈದ್ಯ (ಮಾನಸಿಕ ತಜ್ಞ) ಆ ಕೋಟೆ ಉಂಟಾ ನೋಡಲು ಹುಡುಗನನ್ನು ಆತ ಹೇಳಿದಂತೆ ರಾಜಸ್ಥಾನಕ್ಕೆ ಕರಕೊಂಡು ಹೋಗುತ್ತಾನೆ. ಇದರ ಸುಳಿವರಿತ ದುಷ್ಟರು ಈ ವೈದ್ಯನನ್ನು ’ಕೆಟ್ಟ ಮನುಷ್ಯ, ತೊಲಗು’ ಎಂದು ಬೆಟ್ಟದಿಂದ ತಳ್ಳುತ್ತಾರೆ. ಅವರಲ್ಲೊಬ್ಬ ತಾನೇ ವೈದ್ಯನೆಂದು ನಟಿಸುತ್ತಾನೆ. ಮುಕುಲ್ ತನ್ನ ವೈದ್ಯ ಎಲ್ಲಿ ಎಂದು ಕೇಳಿದಾಗ ಆತ ’ದುಷ್ಟ ವೈದ್ಯ, ಆತನನ್ನು ತೊಲಗಿಸಿದೆ’ ಎನ್ನುತ್ತಾನೆ. ’ನಿನಗೆ ಚಿನ್ನದ ಕೋಟೆ ಕಾಣುತ್ತಿದೆಯಾ ಮುಕುಲ್? ಎಂದು ಕೇಳುತ್ತಾನೆ. ’ದುಷ್ಟನೇ – ತೊಲಗು’ ಇದೇ ಕತೆಯನ್ನು ನೆನಪಿಸಿ ವ್ಯಂಗ್ಯಚಿತ್ರಕಾರನೊಬ್ಬ ಮಮತಾಬ್ಯಾನರ್ಜಿ ಮೇಲೆ ಚಿತ್ರ ಬರೆದುಬಿಟ್ಟ. ಮಮತಾ ದೀದಿ ದಿನೇಶ್ ತ್ರಿವೇದಿ ಎಂಬ ರೈಲ್ವೆ ಮಂತ್ರಿಯನ್ನು ಕಿತ್ತುಹಾಕಿ, ಅವನ ಬದಲಿಗೆ ಮುಕುಲ್ ರಾಯ್‌ನನ್ನು ಮಂತ್ರಿ…
Author: ಮಾಧ್ಯಮದ ಮಧ್ಯದಿಂದ
ಎಎಸ್‌ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ – ಮಾಧ್ಯಮದ ಮಧ್ಯದಿಂದ | ಕುಟುಕು ಕಾರ್ಯಾಚರಣೆ (STING OPERATION) ಯಿಂದ ಭ್ರಷ್ಠರಿಗೆ ಗುಟುಕು ನೀರು ಕುಡಿಸುವ ಹೊಸ ಉಪಕ್ರಮ ಮಾಧ್ಯಮದ ಕ್ರಾಂತಿಕಾರಕ ಸೃಷ್ಟಿ. ಭಾರತೀಯ ಜನತಾಪಕ್ಷದ ಅಧ್ಯಕ್ಷ ಬಂಗಾರು ಲಕ್ಷ್ಮಣರನ್ನೇ ಈ ‘ಕುಟುಕು ಕಾರ್ಯಾಚರಣೆ’ ಗಾದಿಯಿಂದ ಕೆಳಕ್ಕೆ ಉರುಳಿಸಿತ್ತು. ನೋಟಿನ ಬಂಡಲುಗಳನ್ನೇ ಈ ಬಂಗಾರು ಲಕ್ಷ್ಮಣ ಲಗುಬಗೆಯಿಂದ ಸ್ವೀಕರಿಸಿ ಒಳಗಿಟ್ಟುಕೊಳ್ಳುವ ದೃಶ್ಯವನ್ನು ಮಾಧ್ಯಮಗಳು ಮತ್ತೆ ಮತ್ತೆ ಪ್ರದರ್ಶಿಸಿದಾಗ, ಪದತ್ಯಾಗ ಬಂಗಾರುಗೆ ಅನಿವಾರ್ಯ ಕ್ರಿಯೆಯಾಗಿ ಬಿಟ್ಟಿತ್ತು. ಅದೇ ರೀತಿ ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ಕುರಿತೇ ಲಂಚ ಪಡೆಯುತ್ತಿದ್ದ ಸಂಸತ್ ಸದಸ್ಯರನ್ನೂ ಈ ಕುಟುಕು ಕಾರ್ಯಾಚರಣೆ ಬಯಲಿಗೆಳೆದು ದೇಶವಿಡೀ ರಂಪರಾಮಾಯಣವಾಗಿ ಬಿಟ್ಟಿತ್ತು. ಮಾಧ್ಯಮದ ಈ ಹೊಸ ಅಸ್ತ್ರ ಅಧಿಕಾರಸ್ಥರೆಲ್ಲ ಬೆದರಿ ಬೆಚ್ಚುವ ಬ್ರಹ್ಮಾಸ್ತ್ರವೇ ಆಗಿ ಬಿಟ್ಟಿತ್ತು. ಅಪರೂಪಕ್ಕೆ ಒಮ್ಮೊಮ್ಮೆ ಹೀಗೆ ‘ಕುಟುಕು ಕಾರ್ಯಾಚರಣೆ’ ಸುದ್ದಿ ಬಂದಾಗ ಟಿ.ವಿ.ಗಳವರ ಬ್ರೇಕಿಂಗ್ ನ್ಯೂಸ್‌ಗೇ ಹಬ್ಬವೋ ಹಬ್ಬ! ವಿಶಾಲ್ ಇನಾಂದಾರ್ ಎಂಬವರು ಚಲನಚಿತ್ರ ನಿರ್ದೇಶಕರು. ಕುಟುಕು ಕಾರ್ಯಾಚರಣೆಗಳ…
ಎ.ಎಸ್.ಎನ್. ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ. ಆಕೆಯ ಗಲ್ಲಗಳಲ್ಲಿ ಗುಲಾಬಿಯ ಬಣ್ಣವಿತ್ತು, ಮಾತಿನಲ್ಲಿ ಮಾರ್ದವತೆ ಇತ್ತು. ಆಕೆಯ ಕವಿತೆಗಳಲ್ಲಿ ಹೃದಯದ ಕರೆ ಇತ್ತು, ಕಲ್ಪನೆ ಇತ್ತು, ಕನಸಿತ್ತು. ಆಕೆಯ ಹೆಸರು ಮಧುಮಿತಾ ಶುಕ್ಲ. ಹುಟ್ಟೂರು ಉತ್ತರ ಪ್ರದೇಶದ ಲಖೀಂಪುರ. ಇದ್ದದ್ದು ರಾಜಧಾನಿ ಲಕ್ನೋದಲ್ಲಿ. ಕವಯಿತ್ರಿ ಹುಡುಗಿ ತುಂಬಾ ಮಾತುಗಾರ್ತಿ, ಸ್ಫುರದ್ರೂಪಿ. ರಾಜಕೀಯ ಪಕ್ಷಗಳ ಸಭೆಗಳಲ್ಲೂ ಈಕೆಯ ಭಾಷಣಗಳೆಂದರೆ ಆಹ್ಲಾದಕರ, ಪ್ರಚೋದಕ, ಕ್ರಾಂತಿಕಾರಕ. ತಂದೆ ಕಾಲವಾದ ನಂತರ ಕುಟುಂಬದ ಹೊಣೆ ಈ ಹದಿಹರೆಯದ ಹುಡುಗಿಯ ಎಳೆ ಹೆಗಲುಗಳ ಮೇಲೆ. ಆಗ, 1999ರ ಸಮಯ. ಉತ್ತರಪ್ರದೇಶದಲ್ಲಿ ಮಾಯಾವತಿ ಆಡಳಿತ. ಆಕೆಗೆ ವಿಧಾನ ಸಭೆಯಲ್ಲಿ ತನ್ನ ಶಕ್ತಿ ಪರೀಕ್ಷೆಯ ಸಂದರ್ಭ ನೆರವಾದ ಒಬ್ಬ ಶಾಸಕ ಗೋರಖ್‌ಪುರದ ಲೋಕತಾಂತ್ರಿಕ ಕಾಂಗ್ರೆಸ್ಸಿನ ರೌಡಿ ಹರಿಶಂಕರ ತಿವಾರಿ ಗ್ಯಾಂಗಿನ ಕ್ರಿಮಿನಲ್ ರಾಜಕಾರಣಿಗಳ ಗುಂಪಿಗೆ ಸೇರಿದ ಭುಜಬಲ ಪರಾಕ್ರಮಿ ಅಮರಮಣಿ ತ್ರಿಪಾಠಿ. ಈ ಅಮರಮಣಿ ಅಂತಿಂಥವನಲ್ಲ. ಪೋಲೀಸ್ ಠಾಣೆಯಲ್ಲಿ ‘ಎ’ ವರ್ಗದ ರೌಡಿ ಶೀಟ್ ಹೊಂದಿದವ. ಅವನ ಮೇಲೆ…
ಎ.ಎಸ್.ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಲಂಗು, ಲಗಾಮು ಇದೆಯೇ? ಭಾರತದ ಸಂವಿಧಾನವೇ ತನ್ನ 19ನೇಯ ವಿಧಿಯಡಿಯಲ್ಲಿ ಮೂಲಭೂತ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು ಎಂದು ಘೋಷಿಸಿದೆ – ಸಂರಕ್ಷಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಬರೇ ಪುಸ್ತಕ ಬರೆಯುವುದು, ನಾಟಕ ರಚಿಸುವುದು, ಕವಿತೆ ಹಾಡುವುದು, ಭಾಷಣ ಮಾಡುವುದು ಮಾತ್ರವಲ್ಲ – ಪತ್ರಿಕಾ ಸ್ವಾತಂತ್ರ್ಯ ಸಹ ಅದರಲ್ಲಿ ಸೇರಿರುತ್ತದೆ. ಆದರೆ ಈ ಸ್ವಾತಂತ್ರ್ಯಕ್ಕಿದೆಯೇ ಕಡಿವಾಣ? ಉಂಟು ಎನ್ನುತ್ತದೆ ಕಾನೂನು, ನ್ಯಾಯಾಲಯ. ಸರ್ವೋಚ್ಚ ನ್ಯಾಯಾಲಯ ಸಹ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಸಾಮಾನ್ಯ ಹಕ್ಕು ಆಗಿದ್ದು, ಸಂಸತ್ತು, ವಿಧಾನಸಭೆಯಂತಹ ಸದನಗಳ ಹಕ್ಕುಚ್ಯುತಿ ಸಂದರ್ಭಗಳಲ್ಲಿ ಅವುಗಳ ವಿಶೇಷ ಹಕ್ಕುಗಳ ಎದುರು ಅಭಿವ್ಯಕ್ತಿ ಸ್ವಾತಂತ್ರ್ಯ ತಲೆತಗ್ಗಿಸಬೇಕಾಗುತ್ತದೆ ಎಂದಿದ್ದಾರೆ. ಅಲ್ಲ, ಎಂದವರಿಗೆ ಛೀಮಾರಿ – ನ್ಯಾಯಾಲಯದಿಂದಲ್ಲ – ತಾನೇ ನ್ಯಾಯಾಲಯವಾಗಿ ಕುಳಿತ ಸಂಸತ್ತಿನಿಂದ. ಭಾರತದ ಸಾಂವಿಧಾನಿಕ, ಸಾಂಸದಿಕ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಹೀಗೆ ಸಂಸತ್ತಿನ ಹಕ್ಕು ಬಾಧ್ಯತೆಗೂ, ಅಭಿವ್ಯಕ್ತಿ ಸ್ವಾತಂತ್ರ್ಯ (ಪತ್ರಿಕಾ ಸ್ವಾತಂತ್ರ್ಯ)ಕ್ಕೂ…
ಎ.ಎಸ್.ಎನ್ ಹೆಬ್ಬಾರ್. ಕುಂದಾಪ್ರ ಡಾಟ್ ಕಾಂ ಅಂಕಣ. ಮಾಧ್ಯಮದ ಗುರಿ, ಉದ್ದೇಶ, ನೀತಿ, ನಿಯಮಗಳೇನು? ಸಾಮಾಜಿಕ ಸ್ವಾಸ್ಥ್ಯ, ಹಿತ ಬಿಟ್ಟು ಮಾಧ್ಯಮ ಇರಲಾದೀತೇ? ಪ್ರಬಲವಾದ ಮಾಧ್ಯಮ ಇರುವುದರಿಂದಲೇ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಉಳಿದಿದೆ, ಮೌಲ್ಯಗಳು ಉಳಿದಿವೆ, ಅನ್ಯಾಯಗಳಿಗೆ ಕಡಿವಾಣ ಹಾಕಲಾಗಿದೆ ಎಂದಾದರೆ ನಿಜವಾಗಿಯೂ ಮಾಧ್ಯಮಗಳು ಸಮಾಜದ ರಕ್ಷಣೆಗಾಗಿ ಇದೆಯೇ ಹೊರತು ಸಮಾಜಕ್ಕೆ ವಿಮುಖಿಯಾಗಿ ಅಲ್ಲ. ಹೀಗೆ ಸಮಾಜಮುಖಿಯಾಗಬೇಕಾಗಿದ್ದ ಮಾಧ್ಯಮ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಷ್ಟೋ ಬಾರಿ ಸಮಾಜ ವಿಮುಖಿಯಾದ ಕಾರ್ಯ ನಡೆಸಿಬಿಡುತ್ತವೆ. ಇದರಿಂದಾಗುವ ಅನಾಹುತ ಅಪಾರ. ಕೆಲವೊಮ್ಮೆ ಇಂತಹ ಕೆಲಸಗಳು ವ್ಯಕ್ತಿಗಳ ಜೀವಕ್ಕೇ ಎರವಾಗಬಹುದು. ಹಾಗಾಗಿ ಮಾಧ್ಯಮಕ್ಕೆ ಹೆಜ್ಜೆ ಹೆಜ್ಜೆಗೂ ಎಚ್ಚರ ಅಗತ್ಯ. ಉದಾಹರಣೆಗೆ ಒಂದೂರಿನಲ್ಲಿ ಭೀಕರ ಕೊಲೆಗಳಾಗುತ್ತವೆ. ಪೋಲೀಸರು ಬಂದಿರುತ್ತಾರೆ. ಪೋಲೀಸು ನಾಯಿಗಳನ್ನು ಕರೆಸಲಾಗುತ್ತದೆ. ಬೆರಳಚ್ಚು ತಜ್ಞರು ಆಗಮಿಸುತ್ತಾರೆ. ಹಿರಿಯ ಪೋಲೀಸ್ ಅಧಿಕಾರಿಗಳು ತನಿಖೆಗಾಗಿ ಊರಲ್ಲೇ ಮೊಕ್ಕಾಂ ಹೂಡಿರುತ್ತಾರೆ. ಇಷ್ಟೆಲ್ಲ ಇದ್ದರೂ ಕೊಲೆಗಾರರು ಒಂದಿನಿತೂ ಸುಳಿವು ಇಡದೇ ಪರಾರಿಯಾಗಿರುತ್ತಾರೆ. ಪೋಲೀಸರು ರಾತ್ರಿ – ಹಗಲು ನಿದ್ರೆಬಿಟ್ಟು ಸುಳಿವಿನ ಜಾಡು ಹಿಡಿದು ಕೊಲೆಯ ರಹಸ್ಯ…
ಎ. ಎಸ್. ಎನ್. ಹೆಬ್ಬಾರ್ ಹಾಸ್ಯ ಇಲ್ಲದೇ ಬದುಕೇ ಇಲ್ಲ. ಜೀವನದಲ್ಲಿ ಹಾಸ್ಯ ಹಾಸುಹೊಕ್ಕಾಗಿರಬೇಕು. ಆಗ ಮಾತ್ರ ಆರೋಗ್ಯಪೂರ್ಣ ಬದುಕು ಅನುಭವಿಸಲು ಸಾಧ್ಯ. ಹಾಸ್ಯದ ಪರಾಕಾಷ್ಠೆಗೆ ಅಮೇರಿಕಾದಲ್ಲೊಂದು ಕಥೆ ಇದೆ. ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ಮತ್ತು ಅವರ ಪತ್ನಿ ನಾಟಕಗೃಹವೊಂದರಲ್ಲಿ ನಾಟಕ ವೀಕ್ಷಿಸುತ್ತಿದ್ದರು. ಅದೇ ಹೊತ್ತಿಗೆ ಲಿಂಕನ್‌ರ ಕೊಲೆ ನಡೆಯಿತು. ಆ ನಂತರದ ದಿನಗಳಲ್ಲಿ ಮೂಡಿಬಂದ ಕಡು ಹಾಸ್ಯ ಇದು. ಒಬ್ಬಾತ ಲಿಂಕನ್ ಹೆಂಡತಿ ಹತ್ತಿರ ಕೇಳಿದನಂತೆ – ‘ಅದೆಲ್ಲ ಇರಲಿ, ಆ ದಿನ ನಾಟಕ ಹೇಗಿತ್ತು?’ ಎಂತ. ಅಮೇರಿಕಾದ ಜನ ಹಾಸ್ಯಪ್ರಿಯರು. ಈ ಹಾಸ್ಯವನ್ನೂ ಸಹಿಸಿಕೊಂಡರು. ಆದರೆ ಇದೇ ಹಾಸ್ಯ ನಮ್ಮ ದೇಶದಲ್ಲಿ ಆಳುವವರ ಬಗ್ಗೆ ಬರೆದರೆ, ಹೇಳಿದರೆ ನಡೆದೀತೇ? ಇತ್ತೀಚೆಗಿನ ಘಟನೆಗಳು ಗಾಬರಿ ಹುಟ್ಟಿಸುತ್ತವೆ. ತುರ್ತು ಪರಿಸ್ಥಿತಿಯ ನೆನಪು ತರುತ್ತವೆ. ದೇವರನ್ನೂ ಲೆಕ್ಕಿಸಲಿಲ್ಲ… ಹಾಸ್ಯ ಇಂದು ನಿನ್ನೆಯದಲ್ಲ. ತೆನಾಲಿ ರಾಮಕೃಷ್ಣನಿಗೆ ದೇವಿ ಪ್ರತ್ಯಕ್ಷಳಾಗಿ, ‘ಬೇಕಾದ ವರ ಕೇಳು’ ಎಂದಾಗ ರಾಮಕೃಷ್ಣ ಪಕಪಕ ನಕ್ಕುಬಿಟ್ಟನಂತೆ. ‘ಯಾಕೆ ನಗುತ್ತೀ?’ ಎಂದು…
ಎ.ಎಸ್.ಎನ್. ಹೆಬ್ಬಾರ್ ಥಾಲ್ಯಾಂಡಿನ ಸುಂದರ ಕಡಲ ತೀರದ ಪುಟ್ಟ ನಗರ ಪಟ್ಟಾಯ. ಪ್ರವಾಸಿಗಳ ಪಾಲಿಗೆ ಅದು ಒಂದು ಸ್ವರ್ಗ. ‘ಇಲ್ಲಿಲ್ಲದುದಿಲ್ಲ’. ಒಂದು ಲೆಕ್ಕದಲ್ಲಿ ಪಟ್ಟಾಯ ಒಂದು ಇಂದ್ರನಗರಿ. ಇಲ್ಲಿರುವ ಅಪ್ಸರೆಯರನ್ನು ನೋಡಲು ಎರಡು ಕಣ್ಣು ಸಾಲದು. ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಂತಹ ಚೆಲುವೆಯರನ್ನು ಮೀರಿಸುವ ಹಾಲುಗಲ್ಲದ, ಕೆಂಪು ತುಟಿಗಳ, ನೀಳ ಕೇಶದ, ಸುಂದರ ಶ್ವೇತ ದಂತಪಂಕ್ತಿಯ ಲಲನೆಯರು ಅರೆಬೆತ್ತಲಾಗಿ ತಿರುಗುತ್ತಿರುವುದೇ ಪಟ್ಟಾಯದಲ್ಲಿ. ಸಂಜೆಯಾಯಿತೆಂದರೆ ಪಟ್ಟಾಯ ಕಣ್ಣಿಗೆ ಹಬ್ಬ ನೀಡುತ್ತದೆ. ಎಲ್ಲಿ ಕಂಡರಲ್ಲಿ ಬಣ್ಣ ಬಣ್ಣದ ಬೆಳಕು – ದಾರಿಯುದ್ದಕ್ಕೂ ಬಿಸಿ ಬಿಸಿ ತಿಂಡಿ ತಿನಿಸು ಮಾಡುತ್ತಾ, ಮಾರುತ್ತಾ ಇರುವ ತಾತ್ಕಾಲಿಕ, ಸಂಚಾರಿ ಖಾನಾವಳಿಗಳು. ರಸ್ತೆಬದಿಯಲ್ಲಿ ಚಿತ್ರವಿಚಿತ್ರ ಬೊಂಬೆಗಳನ್ನು, ಆಟಿಕೆಗಳನ್ನು, ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಮಂದಿ. ಚಪ್ಪಾಳೆ ತಟ್ಟಿದರೆ ಸಾಕು, ಚಲಿಸುವ ಗೊಂಬೆಗಳೂ ಅಲ್ಲಿದ್ದುವು. ಕೆಲವು ಗೊಂಬೆಗಳು ಚಪ್ಪಾಳೆ ತಟ್ಟಿದೊಡನೆ ‘ಉದ್ರೇಕಗೊಳ್ಳುತ್ತಿರುವ’ ಮೋಜಿನವುಗಳು. ಬಾರ್ಗಳು, ನರ್ತನಶಾಲೆಗಳ ಸಾಲು. ಜತೆಯಲ್ಲಿ ಬಾಗಿಲಲ್ಲಿ ನಿಂತು ಮಿನಿ ಚಡ್ಡಿ, ಟಾಪ್ಲೆಸ್ ಅಂಗಿ ಹಾಕಿ ಕೈ ಮಾಡಿ ಕರೆಯುವ…
ಈ ಲೇಡಿಬಾಯ್ಸ್ ಯಾಕಾಗುತ್ತಾರೆ, ಹೇಗಾಗುತ್ತಾರೆ ? ಕಾಮಕ್ರೀಡೆಯನ್ನೇ ಮಾರಾಟದ ಸರಕಾಗಿಸಿಕೊಂಡು ಪ್ರವಾಸಿಗಳ ಸ್ವರ್ಗ ಥಾಲ್ಯಾಂಡ್ನ ಲೇಡಿಬಾಯ್ಸ್ಗಳ ಕಥೆಎನ್ನಿಸಿದ ಥಾಲ್ಯಾಂಡಿನಲ್ಲಿ ಇವರ ವ್ಯಾಪಾರ ಏನು, ಹೇಗೆ? ಇವರ ಆಮೋದ – ಪ್ರಮೋದಗಳು ಹೇಗಿರುತ್ತವೆ? ಲೇಡಿಬಾಯ್ಸ್ ಮತ್ತು ನಿಜವಾದ ಥಾಯೀ ತರುಣಿಯರನ್ನು ಗುರುತಿಸುವ ಬಗೆ ಹೇಗೆ? ಥಾಲ್ಯಾಂಡ್ಗೆ ಹೋದವರು ಲೇಡಿಬಾಯ್ಸ್ಗಳನ್ನು ಕಾಣದೇ ಹಿಂದೆ ಬಂದರೆ ಅದು ದಂಡ ಎಂದು ಹೇಳುತ್ತಾರೆ. ಆದರೆ ಲೇಡೀಸೋ, ಬಾಯ್ಸೋ ಎಂದು ಪತ್ತೆ ಹಚ್ಚುವುದೇ ವಿದೇಶೀಯರಿಗೆ ಕಷ್ಟಸಾಧ್ಯ. ಅದರಿಂದಾಗಿಯೇ ಈ ಲೇಡಿಬಾಯ್ಸ್ಗಳಿಗೆ ಜೀವನ ನಿರ್ವಹಣೆ ಸುಗಮವಾಗಿದೆ. ಯಾವುದೇ ಅಂಗಡಿ, ಬಾರ್, ನರ್ತನ ಶಾಲೆ, ಹೋಟೇಲು, ಮಾಲ್ ನೋಡಿ, ಅಲ್ಲಿರುವವರೆಲ್ಲಾ ಲೇಡಿಬಾಯ್ಸ್. ಇಂತಹ ಉದ್ಯೋಗಕ್ಕೆ ಅವರು ಹೇಳಿ ಮಾಡಿಸಿದವರು. ಯಾಕೆ ಹೀಗೆ ? ಯಾಕೆ ಈ ಹುಡುಗರೆಲ್ಲಾ ಹುಡುಗಿಯರಾಗಲು ಯತ್ನಿಸುತ್ತಾರೆ? ಥಾಲ್ಯಾಂಡ್ನಲ್ಲಿ ಕಾಮವೇ ಮಾರಾಟದ ಸರಕು. ಕಾಮ ವ್ಯಾಪಾರವೇ ಹಣ ಗಳಿಸುವ ಭಾರೀ ವ್ಯವಹಾರ. ಹಾಗಾಗಿಯೇ ಅದರತ್ತ ಅಲ್ಲಿನ ಹುಡುಗರ ದೃಷ್ಟಿ. ಆದರೆ ಥಾಯೀ ಜನ ಈ ಪ್ರಶ್ನೆಗೆ ನೀಡುವ ಉತ್ತರ…
ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಪ್ರವಾಸೀ ಸಂಸ್ಥೆ ಪರವಾಗಿ ಬರಮಾಡಿಕೊಂಡವಳೇ ಥಾಯೀ ಚೆಲುವೆ ಧಾರಾ. ‘ಸಾವಾತಿಕಾ’ ಎನ್ನುತ್ತಾ, ಎರಡೂ ಕೈ ಮುಗಿದು, ‘ನಮಸ್ತೇ’ ಎಂದು ಹೇಳಿ ನಾವು ಭಾರತೀಯರೆಲ್ಲರ ಒಲುಮೆ ಗಿಟ್ಟಿಸಿಕೊಂಡಳು. ‘ನೀವು ಭಾರತೀಯರು ವಿಚಿತ್ರ ಮಂದಿ’ ಎಂದು ಆಕೆ ಹೇಳಿದಾಗ ನಾವು ಹುಬ್ಬೇರಿಸಿ, ‘ಯಾಕೆ?’ ಎಂದು ಕೇಳಿದೆವು. ‘ನಿಮಗೆ ಭಾರತೀಯವಾದ ತಿಂಡಿ ಸಿಗುವಲ್ಲಿಗೆ ಕರಕೊಂಡು ಹೋಗ್ತೇನೆ, ಆದೀತಾ? ಎಂದು ಆಕೆ ಕೇಳಿದಾಗ ನಾವು ತಲೆಯಾಡಿಸಿದೆವು. ಆಕೆ ಆಗ ಗಹಗಹಿಸಿ ನಕ್ಕು ‘ಇದಕ್ಕೇ ಅಂದದ್ದು, ನೀವು ವಿಚಿತ್ರ ಮಂದಿ ಎಂತ’ ಎಂದು ಹೇಳಿ, ‘ನಾವೆಲ್ಲಾ ‘ಹೌದು’ ಎನ್ನಬೇಕಾದರೆ ತಲೆಯನ್ನು ಮೇಲಿಂದ ಕೆಳಗೆ ಅಲುಗಾಡಿಸುತ್ತೇವೆ. ‘ಅಲ್ಲ’ ಅಥವಾ ‘ಬೇಡ’ ಎನ್ನಬೇಕಾದರೆ ತಲೆಯನ್ನು ಅಡ್ಡಡ್ಡ ಅಲ್ಲಾಡಿಸುತ್ತೇವೆ. ಎಲ್ಲಾ ಕಡೆ ಹೀಗಿದೆ. ಹೌದಾ?’ ಎಂದಳು. ‘ಹೌದು’ ಎಂದೆವು. ‘ನೀವು ಹಾಗಲ್ಲಪ್ಪ – ಅಲ್ಲ ಎನ್ನುವಾಗಲೂ ಅಡ್ಡಡ್ಡ ತಲೆಯಾಡಿಸುತ್ತೀರಿ, ಹೌದು ಎನ್ನುವಾಗಲೂ ಅಡ್ಡಡ್ಡ ತಲೆಯಾಡಿಸುತ್ತೀರಿ. ನಿಮ್ಮದು ವಿಚಿತ್ರ ಅಲ್ಲವೇ?’ ಎಂದಾಕೆ ಕೇಳಿದಾಗ ಆಕೆ ಹೇಳುತ್ತಿರುವುದು ಹೌದೆನ್ನಿಸಿ ಈಗ…
ಥಾಲ್ಯಾಂಡ್ನ ರಾಜಧಾನಿ ಬ್ಯಾಂಕಾಕ್ಗೆ ವಿಮಾನದಲ್ಲಿ ಬಂದಿಳಿಯುವುದೇ ‘ಸುವರ್ಣಭೂಮಿ’ ವಿಮಾನನಿಲ್ದಾಣಕ್ಕೆ. ಥಾಲ್ಯಾಂಡ್ನ್ನು ನಿಜವಾಗಿಯೂ ‘ಸುವರ್ಣಭೂಮಿ’ಯಾಗಿಸಲು ಅಲ್ಲಿನ ಜನ ನಿರ್ಧರಿಸಿದ್ದಾರೋ ಎಂಬಂತೆ ಅಲ್ಲಿನ ಜನರ ನಡೆ – ನುಡಿ – ಕಾರ್ಯ ನಡೆದಿದೆ. ಅತ್ಯಂತ ಸಂಯಮಶೀಲ, ವಿನಯಶಾಲಿ, ನಗುಮುಖದ ಈ ಜನರಿಂದಾಗಿಯೇ ಆ ನಾಡಿಗೆ ಲ್ಯಾಂಡ್ ಆಫ್ ಸ್ಮೈಲ್ಸ್ (ಮುಗುಳ್ನಗೆಯ ನಾಡು) ಎಂಬ ಹೆಸರು ಬಂದಿದೆಯೇನೋ. ನಾವೆಲ್ಲೂ ಅಲ್ಲಿ ಬೈದಾಟ, ಕೂಗಾಟ, ಚೀರಾಟ ಮತ್ತು ಜಗಳಾಟ ಕಂಡೇ ಇರಲಿಲ್ಲ. ಬಸ್ಸಿನ ಹಾನರ್್ಗಳಿಲ್ಲ, ಎಂತಹ ಸಂದರ್ಭದಲ್ಲೂ ತಾಳ್ಮೆಯ ಮೂತರ್ಿಯಂತಿದ್ದ ಚಾಲಕರುಗಳು ಅತ್ಯಂತ ಸಪೂರ ಗಲ್ಲಿಯಲ್ಲೂ ಎರಡೆರಡು ಭಾರೀ ಬಸ್ಸುಗಳನ್ನು ನಿರಾತಂಕವಾಗಿ ಎದುರುಬದುರಾಗಿ ಸುಲಲಿತವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಮುಕ್ತ ಮುಕ್ತ ದೇಶ ಅದು ಥಾಯಿ ಏರ್ವೇಸ್ ಇರಲಿ, ಬ್ಯಾಂಕಾಕ್ ಏರ್ವೇಸ್ ಇರಲಿ ‘ಸಾವಾತಿಕಾ’ ಎಂಬ ಸ್ವಾಗತದ ನುಡಿಯನ್ನು ರಾಗಮಯವಾಗಿ ಉಲಿಯುತ್ತಾವೆ ಸುಂದರಾಂಗಿಯರಾದ ಗಗನಸಖಿಯರು. ವಿಮಾನ ಇಳಿಯುವಾಗಲೂ ಅದೇ ಮೋಹಕ ರಾಗದ ವಿದಾಯದ ನುಡಿ. ಮೇ 3ರಂದು ಹೀಗೆ ‘ಸುವರ್ಣಭೂಮಿ’ಯಲ್ಲಿಳಿದು, ಥಾಲ್ಯಾಂಡ್ ಪ್ರವೇಶಿಸಲು ನಿಲ್ದಾಣದಿಂದ ನಿಷ್ಕ್ರಮಿಸಲೆಂದಿರುವಾಗ ವಿಮಾನ ನಿಲ್ದಾಣದೊಳಗೇನೇ…
