ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬೆಂಗಳೂರಿನಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹೋಟೆಲ್ ಗ್ರೀನ್ ಗಾರ್ಡೆನೀಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ ಮಹೇಂದ್ರ ಭಟ್ ಮಾತನಾಡಿ ಶಾಲಾ ಅಭಿವೃಧ್ಧಿ ನಮ್ಮೇಲ್ಲಾ ಹಳೆ ವಿದ್ಯಾರ್ಥಿಗಳ ಹೊಣೆಯಾಗಿದೆ ಎನ್ನುತ್ತಾ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್. ದೇವಾಡಿಗ ವಹಿಸಿ ಶಾಲಾ ಶತಮಾನೋತ್ಸವ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತ ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದರು.
ವೇದಿಕೆಯಲ್ಲಿ ಹಳೆವಿದ್ಯಾರ್ಥಿಗಳಾದ ಉದ್ಯಮಿ ಶ್ರೀಧರ ಶೆಟ್ಟಿ, ಗಿರೀಶ್ ಬೈಂದೂರು ಹಳೆವಿದ್ಯಾರ್ಥಿ ಸಂಘದ ಖಜಾಂಚಿ ಜಯಾನಂದ ಹೋಬಳಿದಾರ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಚರಣ ಬೈಂದೂರು ಸ್ಟಾಗತಿಸಿದರು. ಶಾಲಾ ಪದವೀಧರ ಮುಖ್ಯೋಪಾದ್ಯಾಯ ಜನಾರ್ಧನ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.