ಸಮನ್ವಯ ಶಿಕ್ಷಕರ ಹುದ್ದೆ: ನೇರ ಗುತ್ತಿಗೆಯಡಿಯಲ್ಲಿ ನೇಮಕಾತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ ಶೈಕ್ಷಣಿಕ ವಲಯಗಳಲ್ಲಿ ತಲಾ 2 ರಂತೆ ಪ್ರೌಢಶಾಲಾ ಗ್ರೇಡ್ 2 ಶ್ರೇಣಿಯ ಮತ್ತು ಉಡುಪಿ ವಲಯದಲ್ಲಿ 1 ಹುದ್ದೆ ಒಟ್ಟು 9 ಹುದ್ದೆಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಶ್ರೇಣಿಯ ತಲಾ 1 ರಂತೆ ಬೈಂದೂರು ಮತ್ತು ಉಡುಪಿ ಶೈಕ್ಷಣಿಕ ವಲಯಗಳಲ್ಲಿ ಒಟ್ಟು 2 ಹುದ್ದೆಗಳನ್ನು ಬಾಹ್ಯ ಸಂಪನ್ಮೂಲದಿಂದ ನೇರಗುತ್ತಿಗೆ ಆಧಾರದಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕ (ಬಿ.ಐ.ಇ.ಆರ್.ಟಿ) ರನ್ನು ನೇಮಕಮಾಡಿಕೊಳ್ಳುವರೇ ಅರ್ಜಿಯನ್ನು ಆಹ್ವಾನಿಸಲಾಗಿದೆ.

Call us

Click Here

ಪ್ರೌಢಶಾಲಾ ವಿಭಾಗಕ್ಕೆ ರೆಗ್ಯುಲರ್ ಬಿ.ಇಡಿ ಜೊತೆಗೆ ವಿಶೇಷ ಬಿ.ಇಡಿ ಹಾಗೂ ಪ್ರಾಥಮಿಕ ವಿಭಾಗಕ್ಕೆ ವಿಶೇಷ ಡಿ.ಇಡಿ ತರಬೇತಿ ಪಡೆದ ಶಿಕ್ಷಕರು ಆರ್‌ಸಿಐ ನೋಂದಣಿ ಮಾಡಿದವರು, ಮಾರ್ಚ್ 5 ರ ಮಧ್ಯಾಹ್ನ 1.30 ರ ಒಳಗೆ ಪೂರ್ಣ ವಿವರಗಳು ಹಾಗೂ ದಾಖಲೆಗಳೊಂದಿಗೆ ತಮ್ಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸುವಂತೆ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಸಾ. ಶಿ. ಇಲಾಖೆಯ ಉಪನಿರ್ದೇಶಕರು, ಆಡಳಿತ ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾಗಳ ಪ್ರಕಟಣೆ ತಿಳಿಸಿದೆ.

Leave a Reply