ಮುಂಬಯಿ: ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬಂಟ ಕ್ರೀಡಾಪಟು, ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕ್ರೀಡಾ ಕಾರ್ಯಾಧ್ಯಕ್ಷೆ ಸುಚರಿತಾ ಶೆಟ್ಟಿ ಕರೇಲಿಯಾ ಅವರು ಅಕ್ಟೋಬರ್ 3ರಿಂದ 7ರ ವರೆಗೆ ಆಸ್ಟ್ರೇಲಿಯಾದಲ್ಲಿ ಜರಗಲಿರುವ ಆಸ್ಟ್ರೇಲಿಯನ್ ಮಾಸ್ಟರ್ ಆ್ಯತ್ಲೆಟಿಕ್ ಮೀಟ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಚಿನ್ನದ ಪದಕಗಳನ್ನು ಪಡೆದಿರುವ ಅವರು ಕಳೆದ ಮೇ 7ರಿಂದ 9ರ ವರೆಗೆ ಮರೀನ್‌ಡ್ರೈವ್‌ನ ಮುಂಬಯಿ ವಿ.ವಿ.ಯ ಮೈದಾನದಲ್ಲಿ ನಡೆದ ನ್ಯಾಷನಲ್ ಮರ್ಕಂಟೈಲ್ ಕಾರ್ಪೊರೇಟ್ ಮಾಸ್ಟರ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಚಾಂಪಿಯನ್‌ಶಿಪ್ -2015ರಲ್ಲಿ ಭಾಗವಹಿಸಿರುವುದಲ್ಲದೆ 100 ಮೀ. ಓಟದಲ್ಲಿ ದ್ವಿತೀಯ, ಶಾಟ್‌ಪುಟ್‌ನಲ್ಲಿ ಪ್ರಥಮ, ಡಿಸ್ಕಸ್ ತ್ರೋನಲ್ಲಿ ಪ್ರಥಮ, ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ










