ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೊನಾ ಹರಡುವಿಕೆಯ ಅಪಾಯದ ಬಗೆಗೆ ಮತ್ತು ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗ್ರಾಮೀಣ ಜನರು ಎಚ್ಚೆತ್ತಿದ್ದಾರೆ ಎನ್ನುವುದಕ್ಕೆ ಮರವಂತೆಯಲ್ಲಿ ಬುಧವಾರ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಶಿರೂರು ಚೆಕ್‌ಪೋಸ್ಟ್ ಬಳಿಯ ತಪಾಸಣಾ ಕೇಂದ್ರದ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಹೊರ ರಾಜ್ಯದಿಂದ ಬಂದು ಮನೆ ಸೇರಲು ಯತ್ನಿಸಿದ ಮರವಂತೆ ನಡುಬೆಟ್ಟು ಪ್ರದೇಶದ ವ್ಯಕ್ತಿಯನ್ನು ಮನೆಯವರು ಮತ್ತು ನೆರೆಹೊರೆಯವರು ಸೇರಿ ಕ್ವಾರಂಟೈನ್‌ಗೆ ಕಳುಹಿಸುವ ಮೂಲಕ ಎಚ್ಚರ ಪ್ರದರ್ಶಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಹಾರಾಷ್ಟ್ರದ ನಾಸಿಕದಲ್ಲಿ ವೃತ್ತಿ ನಡೆಸುತ್ತಿದ್ದ ಆತ ವಾಹನಗಳನ್ನು ಬದಲಿಸುತ್ತ ಜಿಲ್ಲೆಯ ಉತ್ತರ ಗಡಿಯ ಶಿರೂರು ಚೆಕ್‌ಪೋಸ್ಟ್‌ಗಿಂತ ಹಿಂದೆಯೇ ಇಳಿದುಕೊಂಡಿದ್ದಾನೆ. ಸ್ನೇಹಿತನಿಗೆ ಕರೆಮಾಡಿ ಬೈಕ್ ತರಿಸಿಕೊಂಡು ಚೆಕ್‌ಪೋಸ್ಟ್‌ನ ತಪಾಸಣೆಗೆ ಒಳಗಾಗದೆ ಅವನ ಜತೆ ಮನೆಗೆ ಬಂದಿದ್ದಾನೆ. ಹೊರರಾಜ್ಯದಿಂದ ನೇರವಾಗಿ ಊರಿಗೆ ಹಿಂತಿರುಗಲು ಅವಕಾಶ ಇಲ್ಲ ಎನ್ನುವುದನ್ನು ಅರಿತಿರುವ ಮನೆಯವರು ಮತ್ತು ಅಕ್ಕಪಕ್ಕದವರು ಅವನನ್ನು ಮತ್ತು ಅವನ ಗಂಟುಮೂಟೆಗಳನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಅವನು ಹಾಗೆ ಬಂದಿರುವ ವಿಷಯವನ್ನು ಅವರು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತಿಳಿಸಿದರು. ತಕ್ಷಣ ಕಾರ್ಯೋನ್ಮುಖರಾದ ವೈದ್ಯರು ಅವನನ್ನು ಕುಂದಾಪುರಕ್ಕೆ ಕಳುಹಿಸಿ, ಪ್ರಾಥಮಿಕ ಪರೀಕ್ಷೆಯ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು ಎಂದು ತಿಳಿದುಬಂದಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .
► ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 27 ಕೊರೋನಾ ಪಾಸಿಟಿವ್ – https://kundapraa.com/?p=37743 .
► ಉಡುಪಿ ಜಿಲ್ಲೆಯಲ್ಲಿಂದು 6 ಕೊರೋನಾ ಪಾಸಿಟಿವ್. ಒಟ್ಟು 17ಕ್ಕೆ ಏರಿಕೆ – https://kundapraa.com/?p=37716 .
► ಸರಕಾರಿ ಕ್ವಾರಂಟೈನ್ ಕೇಂದ್ರಕ್ಕೆ ನೋಡೆಲ್ ಅಧಿಕಾರಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ – https://kundapraa.com/?p=37710 .
► ಕರ್ನಾಟಕದ ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕೆ ನಿಷೇಧ – https://kundapraa.com/?p=37707 .
► ಉಡುಪಿ: ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ ಯುವತಿಗೆ ಕೊರೋನಾ ಪಾಸಿಟಿವ್ – https://kundapraa.com/?p=37700 .