ಕುಂದಾಪುರ: ತಾಲೂಕಿನ ತ್ರಾಸಿ ಮೂಲದ ಭಾವನಾ ದೇವಾಡಿಗ ಅವರ ನೃತ್ಯ ಸಂಸ್ಥೆ ಭಾವನಾಸ್ ಡ್ಯಾನ್ಸ್ ಸ್ಟುಡಿಯೋ ಇದರ ಮೂರನೇ ಶಾಖೆಯನ್ನು ಪುಣೆಯ ವಿಶ್ರಾಂತ್ ವಾಡಿಯಲ್ಲಿನ ಕನಕ ಧಾರ ಕಟ್ಟಡದ ನಾಲ್ಕನೆಯ ಮಹಡಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಭಾವನಾ ಕುಟುಂಬದ ಕಿರಿಯ ಸದಸ್ಯರಾದ ಮಾ| ಆಶಿಷ್ ಮತ್ತು ಮಾ| ಅರ್ನವ್ ಈ ಹೊಸ ಶಾಖೆಯನ್ನು ಉಧ್ಘಾಟಿಸಿದರು. ಡಾನ್ಸ್ ಸ್ಟುಡಿಯೋದ ಇನ್ನೆರಡು ಸಂಸ್ಥೆ ಪುಣೆಯ ಅಂಬಾನಗರಿ ಹಾಗೂ ಧಾನೋರಿಯಲ್ಲಿದ್ದು ಮುನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ.
ಪುಣೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ನೆಲೆಸಿರುವ ರಾಮ್ ದೇವಾಡಿಗ ಮತ್ತು ಭಾವನಾ ದೇವಾಡಿಗ ದಂಪತಿಗಳು ತಮ್ಮ ಉದ್ಯೋಗದ ಬಿಡುವಿನ ವೇಳೆಯಲ್ಲಿ ಇಲ್ಲಿನ ಅಂಬಾನಗರಿಯಲ್ಲಿ ನೃತ್ಯ ತರಗತಿಯನ್ನು ಸಣ್ಣ ರೀತಿಯಲ್ಲಿ ಪ್ರಾರಂಬಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಇದೇ ನೃತ್ಯ ಶಾಲೆಯನ್ನು ಮೇಲ್ದರ್ಜೆಗೇರಿಸಿ ಭಾವನಾ’ಸ್ ಡ್ಯಾನ್ಸ್ ಸ್ಟೂಡಿಯೋ ಎನ್ನುವ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಭಾವನಾ ರವರ ಕುಟುಂಬಸ್ಥರಲ್ಲದೆ ಪುಣೆ ದೇವಾಡಿಗ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.