ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.28ರ ಭಾನುವಾರ 40 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಈ ಪೈಕಿ 18 ಪುರುಷರು, 15 ಮಹಿಳೆಯರು ಹಾಗೂ 7 ಮಕ್ಕಳಿಗೆ ಪಾಸಿಟಿವ್ ದೃಢವಾಗಿದೆ.
ಒಟ್ಟು ಪ್ರಕರಣಗಳಲ್ಲಿ 6 ಮಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ, 15 ಮಂದಿ ಮುಂಬೈನಿಂದ, ಇಬ್ಬರು ಬೆಂಗಳೂರು, ಓರ್ವ ಬಾಗಲಕೋಟೆಯಿಂದ ಹಿಂದಿರುಗಿದವರಾಗಿದ್ದಾರೆ. ಓರ್ವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸೇರಿದಂತೆ 16 ಪ್ರಕರಣ ಪಾಥಮಿಕ ಸಂಪರ್ಕದಿಂದ ಬಂದಿದೆ.
ಇಂದು 132ನೆಗೆಟಿವ್:
ಈ ತನಕ ಒಟ್ಟು 14,233ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,788ನೆಗೆಟಿವ್, 1,179ಪಾಸಿಟಿವ್ ಬಂದಿದ್ದು, 266 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 132ನೆಗೆಟಿವ್, 40ಪಾಸಿಟಿವ್ ಬಂದಿದೆ.
126 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,179 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1051 ಮಂದಿ ಬಿಡುಗಡೆಯಾಗಿದ್ದು, 126 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.