ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಾರ್ವಜನಿಕರು, ಖಾಸಗಿ ಲ್ಯಾಬ್’ಗಳಲ್ಲಿ ನೀಡಿರುವ ತಮ್ಮ ಕೋವಿಡ್-19 ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಗೆ ಆಗಮಿಸಿದ ನಂತರ ಅವರ ವರದಿಯು ಪಾಸಿಟಿವ್ ಆಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಹೊರರಾಜ್ಯದಿಂದ ಬರುವ ವ್ಯಕ್ತಿಗಳು ತಮ್ಮ ಕೋವಿಡ್ 19 ಪರೀಕ್ಷಾ ವರದಿ ಬಂದ ನಂತರವೇ ಜಿಲ್ಲೆಗೆ ಬರಬೇಕು, ಖಾಸಗಿ ಲ್ಯಾಬ್ ಗಳೂ ಸಹ ಅಂತಹ ವ್ಯಕ್ತಿಗಳ ವರದಿಯನು ಸಂಬAದಪಟ್ಟ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದೇ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಬಸ್ ಗಳ ವಿರುದ್ದ ಪ್ರಕರಣ ದಾಖಲಿಸದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನೋಟೀಶ್ ನೀಡುವಂತೆ ಸೂಚಿಸಿದರು.
ಎಲ್ಲಾ ತಹಸೀಳ್ದಾರ್ ಗಳು ಬಸ್ ಗಳಲ್ಲಿ ನಿಗಧಿತ ಸಂಖ್ಯೆಗಿAತ ಹೆಚ್ಚಿನ ಪ್ರಯಾಣಿಕರದ್ದಲ್ಲಿ , ಹೆಚ್ಚುವರಿ ಪ್ರಯಾಣಿಕರನ್ನು ಕೆಳಗಿಳಿಸಿ, ಬಸ್ ನ ಚಾಲಕ ಮತ್ತು ಕಂಡಕ್ಟರ್ ವಿರುದ್ದ ಪ್ರಕರಣ ದಾಖಲಿಸುವಂತೆ ಹಾಗೂ ಹೆಚ್ಚವರಿ ಪ್ರಯಾಣಿಕರಿಗೆ ಆರ್.ಟಿ.ಓ ಮೂಲಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಖಾಸಗಿ ಬಸ್ ಮಾಲೀಕರಿಗೆ ಮತ್ತು ಆರ್.ಟಿ.ಓ ಅಧಿಕಾರಿಗಳಿಗೆ ಈ ಹಿಂದೆಯೇ ಸಭೆ ನೆಡೆಸಿ, ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಗೆ ಸೂಚನೆ ನೀಡಿದ್ದರೂ , ಸಹ ಇನನೂ ಇದರ ಉಲ್ಲಂಘನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಇದನ್ನೂ ಓದಿ:
► ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಸೋಮವಾರ 40 ಪಾಸಿಟಿವ್ ದೃಢ – https://kundapraa.com/?p=39310 .
Janru sumne thirgodanna control madoke enadru krama thagolli sir .. Agatya vasthugala karidi timing kadme madsi controlge barabahudu