ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ಡಾ. ಕರುಣಾಕರ ಕೊಟೇಗಾರ್ ನೇಮಕ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ. ಕರುಣಾಕರ ಎ. ಕೋಟೆಗಾರ್ ನೇಮಕಗೊಂಡಿದ್ದಾರೆ. ಕರ್ನಾಟಕದ ರಾಜ್ಯಪಾಲರು ಮುಂದಿನ ಮೂರು ವರ್ಷದ ಅವಧಿಗೆ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

Call us

Click Here

ಡಾ. ಕರುಣಾಕರ ಕೋಟೆಗಾರ್ ಅವರು ಎಂಐಟಿ ಮಣಿಪಾಲದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದು, ಕಳೆದು 22 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಎಸ್ಸಿ, ಎಂಸಿಎ ಪದವಿ ಪೂರ್ಣಗೊಳಿಸಿದ್ದ ಕರುಣಾಕರ್ ಅವರು 2009ರಲ್ಲಿ ಪಿಎಚ್‌ಡಿ ಪದವಿ, 2011 ಐರ್ರ‍್ಯಾಂಡ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಪಡೆದಿದ್ದಾರೆ. ಅಲ್ಲದೇ ಇವರು ಪುಲ್‌ಬ್ರೈಟ್ ಯುಎಸ್‌ಎ ಹಾಗೂ ಡಿಎಎಡಿ ಜರ್ಮನಿ ಸಂಸ್ಥೆಗಳ ಸ್ಕಾಲರ್ ಕೂಡ ಆಗಿದ್ದಾರೆ. 2012ರಲ್ಲಿ ಬೆಸ್ಟ್ ಟೀಚರ್ ಅವಾರ್ಡ್, 2013ರಲ್ಲಿ ಇಂಟಲೆಕ್ಚುವಲ್ ವೆಂಚರ‍್ಸ್‌ನಿಂದ ಇನ್ವೆಂಕ್ಷನ್ ಅವಾರ್ಡ್, 2014ರಲ್ಲಿ ಬೆಸ್ಟ್ ಪೇಪರ್ ಅವಾರ್ಡ್ ಪಡೆದಿದ್ದಾರೆ.

ಈವರೆಗೆ 50ಕ್ಕೂ ಹೆಚ್ಚು ಭಾರಿ ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ರಿಸರ್ಚ್ ಪೇಪರ್ ಪ್ರಕಟಿಸಿದ್ದಾರೆ. ಹತ್ತಾರು ವಿಷಯದ ಬಗ್ಗೆ ದೇಶ-ವಿದೇಶಗಳಲ್ಲಿ ವಿಷಯ ಮಂಡನೆ ಮಾಡಿದ್ದಾರೆ. ಇತ್ತಿಚಿಗೆ ಇವರ ಸಂಶೋಧನಾ ಕೆಲಸವೊಂದು ಯು.ಎಸ್. ಪೇಟೆಂಟ್ ಪಡೆದುಕೊಂಡಿದೆ. ಇವರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿಎಚ್‌ಡಿ ಪೂರ್ಣಗೊಳಿಸಿದ್ದು, ಏಳು ಮಂದಿಗೆ ಪ್ರಸ್ತುತ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಜರ್ಮನಿಯ ಸಾರ್ಲ್ಯಾಂಡ್ ಯುನಿವರ್ಸಿಟಿ ಹಾಗೂ ಲಿಬ್ನಿಟ್ಜ್ ಯುನಿವರ್ಸಿಟಿ ರಿಸರ್ಚ್ ಕೊಲ್ಯಾಬರೇಷನ್ ಹೊಂದಿರುವ ಕರುಣಾಕರ್ ಅವರು, ಮಾಹೆಯ ಡೆಪ್ಯೂಟಿ ಡೈರಕ್ಟರ್ (ಇಂಟರ್‌ನ್ಯಾಷನಲ್ ಕೊಲ್ಯಾಬರೇಷನ್) ಆಗಿಯೂ 2013ರಿಂದ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಐಇಇಇ ಸಂಸ್ಥೆಯ ಹಿರಿಯ ಸದಸ್ಯರಾಗಿರುವ ಇವರು ಪ್ರಸ್ತುತ ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಫಾರ್ ದಿ ಎಕ್ಸ್‌ಚೆಂಜ್ ಆಫ್ ಸ್ಟುಡೆಂಟ್ ಫಾರ್ ಟೆಕ್ನಿಕಲ್ ಎಕ್ಸ್‌ಪೀರಿಯನ್ಸ್ (ಐ.ಎ.ಇ.ಎಸ್.ಟಿ.ಇ) ಇದರ ಕಾರ್ಯದರ್ಶಿಯಾಗಿ, ಐ.ಎ.ಇ.ಎಸ್.ಟಿ.ಇ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click here

Click here

Click Here

Call us

Call us

ದಿ. ಅಣ್ಣಪ್ಪ ಕೋಟೆಗಾರ್ ಹಾಗೂ ಸುಶೀಲಾ ದಂಪತಿಗಳ ಪುತ್ರರಾದ ಕರುಣಾಕರ ಅವರು ಮೂಲತಃ ಬೈಂದೂರು ತಾಲೂಕು ಪಡುವರಿಯವರಾಗಿದ್ದು, ಪ್ರಸ್ತುತ ಉಡುಪಿಯ ಇಂದ್ರಾಳಿಯಲ್ಲಿ ನೆಲೆಸಿದ್ದಾರೆ. ಇವರ ಮಡದಿ ಡಾ. ಅನಿತಾ ಅವರು ಎಂಐಟಿಯ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Dr. Karunakar A Kotegar nominated as a syndicate member of Mangalore university. He is presently working as Professor and Head of the Department, Computer Applications in MIT Manipal

 

Leave a Reply