ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಚಿಕನ್ಸಾಲ್ ರಸ್ತೆ ವಾರ್ಡಿನ 58 ವರ್ಷದ ವ್ಯಕ್ತಿ ಹಾಗೂ 50 ವರ್ಷದ ಅವರ ಪತ್ನಿಗೆ ಕೋವಿಡ್ ಪಾಸಿಟಿವ್ ಇರುವುದು ಬುಧವಾರ ದೃಢಪಟ್ಟಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿಗಳ ಸಂಬಂಧಿಕರೊಬ್ಬರು ಇತ್ತೀಚೆಗಷ್ಟೇ ಬೆಂಗಳೂರಿನಿಂದ ಬಂದಿದ್ದರು. ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆ ಮನೆಯಲ್ಲಿದ್ದ ನಾಲ್ವರನ್ನು ಕ್ವಾರಂಟೈನ್ ಮಾಡಿ, ಅವರ ಗಂಟಲ ದ್ರವದ ವರದಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ದಂಪತಿಯ ವರದಿ ಪಾಸಿಟಿವ್ ಬಂದಿದ್ದು, ಉಳಿದ ಇಬ್ಬರದು ನೆಗೆಟಿವ್ ಬಂದಿದೆ. ಸದ್ಯ ಮನೆಯನ್ನು ಸೀಲ್ಡೌನ್ ಮಾಡಿ, ದಂಪತಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.