ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ) ಆಟೋಮೊಬೈಲ್ ಕೌಶಲ್ಯಾಧಾರಿತ ವಿಷಯದಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಶೇ.100 ಅಂಕಗಳಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವಿಷ್ಣು ಪ್ರಸಾದ್, ವಿನೀತ್ ಪೂಜಾರಿ, ಕಾರ್ತಿಕ್ ಆಚಾರ್ಯ, ಶ್ರೇಯಸ್ ಶೇಟ್ ಆಟೋಮೊಬೈಲ್ ವಿಷಯದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳು.
ಪ್ರಸಕ್ತ ಸಾಲಿನಲ್ಲಿ.ಎಸ್.ಕ್ಯೂ.ಎಫ್ ಯೋಜನೆಯಡಿ ಆಟೋಮೊಬೈಲ್ ವಿಷಯದಲ್ಲಿ ರಾಜ್ಯದಲ್ಲಿ 510 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಕುಂದಾಪುರ ಸರಕಾರಿ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ಸೇರಿದ್ದಾರೆ.
ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಭುಜಂಗ ಶೆಟ್ಟಿ, ಉಪಪ್ರಾಂಶುಪಾಲ ಮೋಹನ ರಾವ್ ಎಂ.ಜೆ, ಆಟೋಮೊಬೈಲ್ ತರಬೇತುದಾರ ಅರುಣ್ ಶೆಟ್ಟಿ ಉಳ್ತೂರು ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.