ಕುಂದನಾಡಿನ ಮನೆ ಮಗಳಂತಾದ ಸ್ಪೇನ್ ದೇಶದ ಯುವತಿ ತೆರೆಸಾ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ‘ಈ ಊರ್ ಚಂದ, ಈ ಊರ ಜನು ಚಂದ, ಈ ಊರ ಭಾಷೆ ಚಂದ, ನಾನಿಲ್ಲೇ ಇದ್ದುಬಿಡಲೆ ಅಂತ ಅನಿಸುತ್ತಿದೆ’ ಹಿಂಗೆ ಕುಂದಾಪುರದವರೇ ನಾಚುವಂತೆ ಕುಂದಾಪ್ರ ಕನ್ನಡದಲ್ಲಿ ಮನಬಿಚ್ಚಿ ಮಾತಾಡ್ತಾ ಹಳ್ಳಿಯ ಬದುಕಿನೊಂದಿಗೆ ಬೆರೆತುಹೋಗಿದ್ದಾರೆ ಸ್ಪೇನ್ ದೇಶದಿಂದ ಬಂದ ಯುವತಿ ತೆರೆಸಾ.

Call us

Click Here

ದಕ್ಷಿಣ ಭಾರತ ಪ್ರವಾಸಕ್ಕೆಂದು ಮುಂಬೈಗೆ ಬಂದಿದ್ದ ತೆರೆಸಾ ಅವರು ಲಾಕ್‌ಡೌನ್ ಕಾರಣದಿಂದ ಸ್ಪೇಯ್ನ್ ದೇಶಕ್ಕೆ ಹಿಂದಿರುಗಲಾರದೇ ತನ್ನ ಅಣ್ಣ ಕಾರ್ಲೂಸ್ ಅವರ ಆಪ್ತ ಗೆಳೆಯ ಬೈಂದೂರು ತಾಲೂಕಿನ ಹೇರಂಜಾಲಿನ ಕೃಷ್ಣ ಪೂಜಾರಿ ಅವರೊಂದಿಗೆ ನಾಲ್ಕು ತಿಂಗಳ ಹಿಂದೆ ಬೈಂದೂರು ತಾಲೂಕಿನ ಹೆರಂಜಾಲಿಗೆ ಬಂದು, ಅವರು ಆ ಮನೆಯ ಮಗಳಾಗಿ ಹೋಗಿದ್ದಾರೆ. ಕೃಷ್ಣ ಪೂಜಾರಿ ಅವರ ತಂದೆ-ತಾಯಿ, ಸಹೋದರ-ಸಹೋದರಿಯರೊಂದಿಗೆ ಮನೆ ಮಂದಿಯಂತೆ  ಹಳ್ಳಿ ಸೊಗಡಿನೊಂದಿಗೆ ಬೆರೆತುಹೋಗಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

ತೆರೆಸಾ ಅವರು ಈಗ ಮನೆಮಂದಿಯ ಜತೆ ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಬ್ಬರ ಹೊತ್ತು ಗದ್ದೆಗೆ, ತೋಟಕ್ಕೆ ಹಾಕುತ್ತಾರೆ. ಕೃಷ್ಣ ಪೂಜಾರರ ತಾಯಿ ಚಿಕ್ಕಮ್ಮ ಪೂಜಾರಿ ಅವರಿಂದ ರಂಗೋಲಿ ಹಾಕಲು, ದನದ ಹಾಲು ಕರೆಯಲು, ಮಡಲು ನೇಯಲು ಕಲಿತಿದ್ದಾರೆ. ಊರಿನ ಜನ ಮಾತನಾಡುವ ಕುಂದಾಪ್ರ ಕನ್ನಡದ ಹಲವು ಪದಗಳನ್ನು ಆಡಲು, ಮಕ್ಕಳಿಂದ ಕನ್ನಡ ಅಕ್ಷರಗಳನ್ನು ಬರೆಯಲು ಕಲಿತಿದ್ದಾರೆ. ಮನೆಯಲ್ಲಿ ಮಾಡುವ ಊರತಿಂಡಿಗಳಾದ ಕೊಟ್ಟೆಕಡುಬು, ಇಡ್ಲಿ, ದೋಸೆ, ಚಿಕ್ಕನ್ ಪಲ್ಯ, ಮೀನುಸಾರು, ತರಕಾರಿ ಸಾಂಬಾರು ನನಗೆ ಇಷ್ಟವಾಗಿದೆ ಎಂದು ಹೇಳಿ ಬಾಯಿ ಚಪ್ಪರಿಸುತ್ತಾರೆ. ಮನೆಯ ಸದಸ್ಯರ ಜತೆ ಬೆರೆತು ಖುಷಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

‘ಹ್ವಾಯ್ ಹೇಂಗಿದ್ರಿ’ ಅಂತ ಹೊಸಬರನ್ನು ಕಂಡೊಡನೆ ಮುಖವಿಡೀ ನಗೆಯಾಗುವ ತೆರೆಸಾ ಕುಂದಾಪ್ರ ಕನ್ನಡದಲ್ಲಿ ಮಾತಿಗೆ ಯತ್ನಿಸುತ್ತಾರೆ. ಈ ಭಾಷೆ ಹೇಗಿದೆ ಎಂದು ಪ್ರಶ್ನಿಸಿದರೆ ‘ಕುಂದಾಪ್ರ ಭಾಸಿ ಚೆಂದ್ ಗೋಂಪಿ’ ಎಂದು ಸ್ಪೇನಿಶ್ ದಾಟಿಯಲ್ಲಿ ಉತ್ತರಿಸುತ್ತಾರೆ/ಕುಂದಾಪ್ರ ಡಾಟ್ ಕಾಂ ವರದಿ/

Click here

Click here

Click here

Click Here

Call us

Call us

ಮುಂಬೈಯಲ್ಲಿ ಅಮೇರಿಕಾ ಮೂಲದ ಕಂಪನಿಯಲ್ಲಿ ನಾನು ಹಾಗೂ ತೆರೆಸಾ ಸಹೋದರ ಕಾರ್ಲೂಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಹಾಗಾಗಿ ಎಂಟು ವರ್ಷಗಳಿಂದ ಅವರ ಕುಟುಂಬ ನನಗೆ ಪರಿಚಯ. ಕಾರ್ಲೂಸ್ ಕೂಡ ಈ ಹಿಂದೆ ಹಲವು ಭಾರಿ ನಮ್ಮ ಮನೆಗೆ ಬಂದಿದ್ದರು. ಅಲ್ಲದೇ ಯಕ್ಷಗಾನವನ್ನೂ ಕಲಿತಿದ್ದರು. ನಾನು ಕಂಪೆನಿಯ ಕೆಲಸದ ನಿಮಿತ್ತ ಸ್ಪೇನ್ ದೇಶಕ್ಕೆ ತೆರಳಿದಾಗ ಕಾರ್ಲೂಸ್ ಮನೆಯಲ್ಲಿಯೇ ಉಳಿಯುತ್ತೇನೆ. ನಾಲ್ಕು ತಿಂಗಳ ಹಿಂದೆ ತೆರೆಸಾ ಸ್ವದೇಶಕ್ಕೆ ಮರಳಲಾಗದೆ ತೊಂದರೆಗೆ ಸಿಲುಕಿದ್ದರಿಂದ ನಮ್ಮಲ್ಲಿಗೆ ಬಂದಿದ್ದಾರೆ. ಅಲ್ಪಸ್ವಲ್ಪ ಕನ್ನಡ ಕಲಿತು ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸಂತಸದಿಂದ ಭಾಗಿಯಾಗುತ್ತಿರುವುದರಿಂದ ಅವರು ನಾಲ್ಕು ತಿಂಗಳಿನಿಂದ ನಮ್ಮೂರ, ನಮ್ಮ ಮನೆಯ ಹುಡುಗಿ ಆಗಿದ್ದಾರೆ’ – ಕೃಷ್ಣ ಪೂಜಾರಿ, ಹೆರಂಜಾಲು ಕುಂದಾಪ್ರ ಡಾಟ್ ಕಾಂ ವರದಿ.

ಇಲ್ಲಿನ ಭಾಷೆ, ಸಂಸ್ಕೃತಿ ಎಲ್ಲವೂ ನನಗೆ ಹಿಡಿಸಿದೆ. ಯಕ್ಷಗಾನವನ್ನು ಕಲಿತೆ ಹೋಗಬೇಕು ಎಂಬ ಬಯಸಿದ್ದೆ. ಆದರೆ ಲಾಕ್‌ಡೌನ್ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ. ಸ್ಪೆಯ್ನಗೆ ಹೋಗಬೇಕು, ಆದರೆ ಹೇರಂಜಾಲು ಖುಷಿ ನೀಡಿದೆ. ಬಿಟ್ಟು ಹೋಗಲು ಬೇಸರವಾಗುತ್ತದೆ – ತೆರೆಸಾ, ಸ್ಪೇನ್ ಯುವತಿ     ಕುಂದಾಪ್ರ ಡಾಟ್ ಕಾಂ ವರದಿ

Teresa, a young lady from Spain country who came for South India tour, now stayed in his friend Krishna Poojari’s home at Heranjalu Village (Byndoor taluk) due to lockdown. She is learning Kundapura Kannada Language and enjoying the day to day activities in the village. Now She is eager to learn Yakshagana and Loves Kundapura Kannada Language.

ಚಿತ್ರಗಳು: ಉದಯ ಪಡಿಯಾರ್

 

Leave a Reply