ಸಾಹಿತ್ಯಿಕ, ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ಪ್ರಸನ್ನತೆ ಪಡೆಯುವ ಮರವಂತೆ ಪ್ರಕಾಶ ಪಡಿಯಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ.
ಅರ್ಹತೆ ಇರಲಿ, ಇಲ್ಲದಿರಲಿ ಹುದ್ದೆಗಳಿಗೆ ಹಾತೊರೆಯುವ ಮಂದಿಯ ನಡುವೆ ಸತ್ಕಾರ್ಯಗಳ ಪರಿಚಾರಿಕೆಯಲ್ಲಿ ಪ್ರಸನ್ನತೆ ಪಡೆಯುವ ಮರವಂತೆ ಪ್ರಕಾಶ ಪಡಿಯಾರ್ ಅವರದು ಅಪರೂಪಕ್ಕೆ ಕಾಣಸಿಗುವ ವಿಭಿನ್ನ ವ್ಯಕ್ತಿತ್ವ.

Call us

Click Here

ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸೇವಾ ಕಾರ್ಯಗಳು ಸಮಾಜಮುಖಿ ಕೆಲಸಗಳು ನಡೆಯುವಲ್ಲಿ ಹಾಜರಾಗುವ ಅವರು ಹೊಣೆಗಾರಿಕೆಯನ್ನು ಬೇಡಿ ಪಡೆದು ಅದರ ಯಶಸ್ವಿ ನಿರ್ವಹಣೆಯಲ್ಲಿ ಆತ್ಮಸಂತೃಪ್ತಿ ಪಡೆಯುತ್ತಾರೆ.

ಹದಿನೆಂಟನೆಯ ವಯಸ್ಸಿನಲ್ಲಿಯೇ ಕಲಿತ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗುವುದರೊಂದಿಗೆ ಅವರ ಸೇವಾ ಕಾರ್ಯ ಆರಂಭವಾಗುತ್ತದೆ. ತಮ್ಮ ಇಪ್ಪತ್ತನೆಯ ಹರೆಯದಲ್ಲಿ ಮರವಂತೆಯಲ್ಲಿ ಎಸ್. ಜನಾರ್ದನ ಗೆಳೆಯರೊಂದಿಗೆ ಸೇರಿ ಹುಟ್ಟುಹಾಕಿದ ಸೇವಾ ಸಾಂಸ್ಕೃತಿಕ ವೇದಿಕೆ ’ಸಾಧನಾ’ದ ಸದಸ್ಯತ್ವ ಸ್ವೀಕರಿಸಿ ಅದರ ವೈವಿಧ್ಯಮಯ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಮುಂದೊಂದು ದಿನ ಅದರ ಒಂದು ಸಾಲಿನ ಅಧ್ಯಕ್ಷರಾಗಿ ಫಲಪ್ರದ ಕಾರ್ಯಕ್ರಮಗಳನ್ನು ಆಯೋಜಿಸಿದರು. ಮರವಂತೆಯಲ್ಲಿ ಕುಂದಾಪುರದ ಸೇವಾ ಸಂಗಮ ಆರಂಭಿಸಿದ ಶಿಶುಮಂದಿರದ ಕಾರ್ಯದರ್ಶಿಯಾಗಿ ಕೆಲಕಾಲ ಅದನ್ನು ಮುನ್ನಡೆಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಮರವಂತೆಯಲ್ಲಿ ಗ್ರಾಮೀಣ ರೋಟರಿ ದಳ ಆರಂಭಿಸಿದಾಗ ಅದರ ಮೊದಲ ಅಧ್ಯಕ್ಷ ಪದವಿ ಅವರಿಗೆ ಒಲಿದು ಬಂತು.

ಸಾಹಿತ್ಯಪರ ಕಾರ್ಯಗಳೆಂದರೆ ಪಡಿಯಾರರಿಗೆ ಅತೀವ ಆಸಕ್ತಿ. ಸಂಕಿರಣಗಳು, ಗೋಷ್ಠಿಗಳು, ಸಮ್ಮೇಳನಗಳು ನಡೆಯುಲ್ಲಿ ಅವರು ಯಾವುದಾದರೊಂದು ವಿಭಾಗದ ಹೊಣೆಗಾರ, ಮುಂಚೂಣಿಯ ಕಾರ್ಯಕರ್ತ, ದಣಿವರಿಯದೆ ದುಡಿಯುವ ಸ್ವಯಂಸೇವಕ. ಯಾವುದೂ ಅಲ್ಲವಾದರೆ ಮುಂದಿನ ಸಾಲಿನ ಆಸಕ್ತ ಶ್ರೋತೃ. ೧೯೯೫ರಲ್ಲಿ ಮರವಂತೆಯಲ್ಲಿ ಜರಗಿದ ಎರಡು ದಿನಗಳ ಕುಂದಾಪುರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಲ್ಲಿ ಅವರೂ ಒಬ್ಬರು. ಅಂಬಾತನಯ ಮುದ್ರಾಡಿಯವರ ಅಧ್ಯಕ್ಷತೆಯ ಅವಧಿಯ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ದುಡಿದಿದ್ದರು. ಖ್ಯಾತ ಸಾಹಿತಿ ಕು.ಗೋ ಪ್ರಾಯೋಜಿತ ’ನಡುಮನೆ’ ಎಂಬ ಮನೆ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲೂ ನಡೆಸಿರುವುದಲ್ಲದೆ, ಬೇರೆ ಹಲವೆಡೆ ನಡೆಯಲು ಪ್ರೇರಕರಾದವರು ಪಡಿಯಾರರು. ಅವರೊಬ್ಬ ಹವ್ಯಾಸಿ ಪತ್ರಿಕಾ ವರದಿಗಾರರು ಮತ್ತು ಬರಹಗಾರರು. ಒಂದಷ್ಟು ಕಾಲ ಪತ್ರಿಕಾ ವಿತರಕರಾಗಿಯೂ ದುಡಿದಿದ್ದಾರೆ.

ಆಕಾಶವಾಣಿ ಅವರ ಆಸಕ್ತಿಯ ಇನ್ನೊಂದು ಕ್ಷೇತ್ರ. ಮಂಗಳೂರು ಕೇಂದ್ರದೊಂದಿಗೆ ನಿಕಟ ಬಾಂಧವ್ಯ ಹೊಂದಿ, ಅದರ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪ್ರಕಾಶ್, ಅದರ ಗ್ರಾಮೀಣ ಕಾರ್ಯಕ್ರಮಗಳನ್ನು ಸಂಘಟಿಸಲು ನೆರವಾಗುತ್ತಿದ್ದಾರೆ. ಅದರ ಕಾರ್ಯಕ್ರಮಗಳ ಪ್ರಚಾರದಲ್ಲೂ ನಿರತರು. ಸ್ಥಗಿತಗೊಂಡಿರುವ ಬ್ರಹ್ಮಾವರ ಆಕಾಶವಾಣಿ ಕೇಂದ್ರವನ್ನು ಮರುಸ್ಥಾಪಿಸುವ ಹೋರಾಟದಲ್ಲಿ ಅವರು ತಮ್ಮನ್ನು ಅಷ್ಟು ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮರವಂತೆ ಶಾಲೆಯ ಅಭಿವೃದ್ಧಿ ಸಮಿತಿಯಲ್ಲಿ ಕೆಲಕಾಲ ಸದಸ್ಯರಾಗಿದ್ದುದಲ್ಲದೆ, ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Click here

Click here

Click here

Click Here

Call us

Call us

ತೊಂದರೆಗೆ ಸಿಲುಕಿದವರಿಗೆ ಶಕ್ತ್ಯಾನುಸಾರ ಸಹಾಯ ಒದಗಿಸುವಲ್ಲೂ ಪಡಿಯಾರರು ಮುಂದಿರುತ್ತಾರೆ. ಪುಸ್ತಕ ಪ್ರಕಟಣೆಗೆ, ಅನಾಥಾಶ್ರಮಗಳ ನಿರ್ವಹಣೆಗೆ ದೇಣಿಗೆ ನೀಡುತ್ತಿರುತ್ತಾರೆ. ಅವರ ಕಾರ್ಯಕ್ಷೇತ್ರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವ್ಯಾಪಿಸಿದ್ದರೂ, ಹುಟ್ಟೂರನ್ನು ಮರೆತಿಲ್ಲ. ಮರವಂತೆಯ ಅಭಿವೃದ್ಧಿ ಕಾರ್ಯಗಳ ವಿಚಾರ, ಯೋಜನೆಗಳಲ್ಲಿ ತೊಡಗುತ್ತಾರೆ; ಉಪಯುಕ್ತ ಸಲಹೆ, ಮಾರ್ಗದರ್ಶನ ನೀಡುತ್ತಿರುತ್ತಾರೆ.

ಐವತ್ತೆಂಟು ವರ್ಷಗಳನ್ನು ಈಗಷ್ಟೇ ಮುಗಿಸಿರುವ ಪ್ರಕಾಶ ಪಡಿಯಾರ್ ತಮ್ಮ ಲವಲವಿಕೆಯ ಕಾರಣದಿಂದ ಮಾನಸಿಕವಾಗಿ ಇನ್ನೂ ತರುಣರು. ಸಾಧಿಸಿದ್ದು ಕಡಿಮೆ, ಸಾಧಿಸಲಿರುವುದು ಅಗಾಧ ಎಂಬ ಭಾವನೆಯ ಅವರನ್ನು ಮತ್ತಷ್ಟು ಸಮಾಜಮುಖಿಯಾಗಿಸಿದೆ.

  • ಕೆ. ಪುಂಡಲೀಕ ನಾಯಕ್, ಖಂಬದಕೋಣೆ

Leave a Reply