ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಶುಕ್ರವಾರ 245 ಪಾಸಿಟಿವ್, 1148 ನೆಗೆಟಿವ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.07ರ ಶುಕ್ರವಾರ 245 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 92, ಉಡುಪಿ ತಾಲೂಕಿನ 125 ಹಾಗೂ ಕಾರ್ಕಳ ತಾಲೂಕಿನ 25 ಮಂದಿಗೆ ಪಾಸಿಟಿವ್ ಬಂದಿದೆ. 3 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

Call us

Click Here

ಒಟ್ಟು ಪ್ರಕರಣಗಳಲ್ಲಿ 70 ಸಿಂಥಮೇಟಿವ್ ಹಾಗೂ 175 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 125 ಪುರುಷರು, 120 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 57 ಮಂದಿ ಆಸ್ಪತ್ರೆಯಿಂದ ಹಾಗೂ 44 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ತಾಲೂಕಿನ 75, 70 ಹಾಗೂ 65 ವರ್ಷದ ವ್ಯಕ್ತಿಗಳು, ಉಡುಪಿ ತಾಲೂಕಿನ 78 ವರ್ಷದ ವ್ಯಕ್ತಿ ಹಾಗೂ ಕಾರ್ಕಳ ತಾಲೂಕಿನ 49 ವರ್ಷದ ವ್ಯಕ್ತಿ ಸೇರಿ ಒಟ್ಟು ಇಂದು 5 ಮಂದಿ ಮೃತಪಟ್ಟಿದ್ದಾರೆ.

1148 ನೆಗೆಟಿವ್:
ಈ ತನಕ ಒಟ್ಟು 41411 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 34603 ನೆಗೆಟಿವ್, 5605 ಪಾಸಿಟಿವ್ ಬಂದಿದ್ದು, 1203 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1148 ನೆಗೆಟಿವ್, 245 ಪಾಸಿಟಿವ್ ಬಂದಿದೆ. ಒಟ್ಟು 1144 ಮಂದಿ ಹೋಮ್ ಐಸೋಲೇಶನ್ ಹಾಗೂ 1148 ಮಂದಿ ಆಸ್ಪತ್ರೆ ಐಸೋಲೇಶನಿನಲ್ಲಿದ್ದಾರೆ.

2292 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 5605 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 3258 ಮಂದಿ ಬಿಡುಗಡೆಯಾಗಿದ್ದು, 2292 ಮಂದಿ ಕೊರೋನಾ ಸೋಂಕಿತರು ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಹಾಗೂ ಹೋಮ್ ಐಸೋಲೇಶನ್ ಮೂಲಕ ನಿಗಾದಲ್ಲಿದ್ದಾರೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 55 ಮಂದಿ ಮೃತಪಟ್ಟಿದ್ದಾರೆ.

Leave a Reply