ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು 6 ತಿಂಗಳ ಅವಧಿಗಾಗಿ ಪ್ರಯೋಗಶಾಲಾ ತಂತ್ರಜ್ಞರ (20 ಹುದ್ದೆ) ದತ್ತಾಂಶ ನಮೂದಕರ (20 ಹುದ್ದೆ) ಗಳಿಗೆ ಆಗಸ್ಟ್ 14 ರಿಂದ 17 ರ ವರೆಗೆ ನೇರ ಸಂದರ್ಶನ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಮತ್ತು ದೃಡೀಕೃತ ದಾಖಲಾತಿಗಳೊಂದಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಅಜ್ಜರಕಾಡು ಇಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.
ಪ್ರಯೋಗಶಾಲಾ ತಂತ್ರಜ್ಞ ಹುದ್ದೆಗೆ , ಡಿಎಂಎಲ್ಟಿ/ಬಿಎಂಎಲ್ಟಿ ಯವರಿಗೆ ಪ್ರಥಮ ಆದ್ಯತೆ ಅಥವಾ ಎಂ.ಎಸ್ಸಿ ನರ್ಸಿಂಗ್ /ಬಿ.ಎಸ್ಸಿ ನರ್ಸಿಂಗ್/ಜಿಎನ್ಎಂ:ಪ್ಯಾರಾ ಮೆಡಿಕಲ್ ಬೋರ್ಡ್ ನಲ್ಲಿ ನೊಂದಣಿ, ಅಥವಾ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿ ಮಾಡಿದವರು ಹಾಗೂ ದತ್ತಾಂಶ ನಮೂದಕರ ಹುದ್ದೆಗೆ ,ಯಾವುದೇ ಪದವಿ ಮತ್ತು ಡಿಸಿಎ ಡಿಪ್ಲೋಮಾ ಕಂಪ್ಯೂಟರ್ ಅಪ್ಲಿಕೇಷನ್ ಮತ್ತು 2 ವರ್ಷದ ಅನುಭವ ಹೊಂದಿದ ಬಗ್ಗೆ ಪ್ರಮಾಣ ಪತ್ರ ಹೊಂದಿದವರು ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.