ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಗುರುವಾರ 349 ಪಾಸಿಟಿವ್, 1336 ನೆಗೆಟಿವ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.20ರ ಗುರುವಾರ 349 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 100, ಉಡುಪಿ ತಾಲೂಕಿನ 162 ಹಾಗೂ ಕಾರ್ಕಳ ತಾಲೂಕಿನ 76ಮಂದಿಗೆ ಪಾಸಿಟಿವ್ ಬಂದಿದೆ. 11 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

Call us

Click Here

ಒಟ್ಟು ಪ್ರಕರಣಗಳಲ್ಲಿ 159 ಸಿಂಥಮೇಟಿವ್ ಹಾಗೂ 190 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 192 ಪುರುಷರು, 157 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 130, ILI 137, ಸಾರಿ 12 ಪ್ರಕರಣವಿದ್ದು, 63 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 6 ಮಂದಿ ಅಂತರ್ಜಿಲ್ಲಾ, ಓರ್ವ ವ್ಯಕ್ತಿ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ಇಂದು 184 ಮಂದಿ ಆಸ್ಪತ್ರೆಯಿಂದ ಹಾಗೂ 176 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕಾರ್ಕಳದ 56 ವರ್ಷದ ಮಹಿಳೆ ಹಾಗೂ ಉಡುಪಿಯ 69 ವರ್ಷದ ಮಹಿಳೆ ಇಂದು ಮೃತರಾಗಿದ್ದು, ಕೋವಿಡ್ ಪಾಸಿಟಿವ್ ದೃಢವಾಗಿದೆ.

1,336ನೆಗೆಟಿವ್:
ಈ ತನಕ ಒಟ್ಟು 61251 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 50768 ನೆಗೆಟಿವ್, 9390 ಪಾಸಿಟಿವ್ ಬಂದಿದ್ದು, 1093 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1336 ನೆಗೆಟಿವ್, 349 ಪಾಸಿಟಿವ್ ಬಂದಿದೆ.

2,818 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 9390 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 6492 ಮಂದಿ ಬಿಡುಗಡೆಯಾಗಿದ್ದು, ಒಟ್ಟು 2818 ಸಕ್ರಿಯ ಪ್ರಕರಣಗಳಲ್ಲಿ 1249 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 1569 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 80 ಮಂದಿ ಮೃತಪಟ್ಟಿದ್ದಾರೆ.

Click here

Click here

Click here

Click Here

Call us

Call us

 

Leave a Reply