ಉಡುಪಿ: ಯೋಗ ತರಬೇತುದಾರರ ಸೇವೆ – ಅರ್ಜಿ ಆಹ್ವಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಷ್ಟಿಯ ಆರೋಗ್ಯ ಅಭಿಯಾನದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅದರ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಸಿಕ ಕನಿಷ್ಟ 20 ಯೋಗ ಶಿಬಿರಗಳನ್ನು ಆಯೋಜಿಸಲು, ಮಾಸಿಕ 5000 ರೂ. ಗೌರವಧನ ಆಧಾರದಲ್ಲಿ ಅರ್ಹ ಯೋಗ ತರಬೇತುದಾರರ ಸೇವೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Call us

Click Here

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ, ವಿದ್ಯಾರ್ಹತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿವರ, ಯೋಗ ತರಬೇತಿಯ ವಿವರ ಮತ್ತು ಇತ್ಯಾದಿ ಮಾಹಿತಿಯನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಕಚೇರಿ, ಅಜ್ಜರಕಾಡು, ಉಡುಪಿ ಇವರಿಂದ ಪಡೆದು, ಸೆಪ್ಟಂಬರ್ 30 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply