ವಿಸ್ಮಯ ಕುಟುಂಬಕ್ಕೆ 4 ಲಕ್ಷ ರೂ. ಚೆಕ್‌ ಹಸ್ತಾಂತರ

Call us

Call us

ಕುಂದಾಪುರ: ಮಾರಣಕಟ್ಟೆಯಲ್ಲಿ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿ ಸಾವನ್ನಪ್ಪಿದ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ವಿಸ್ಮಯಾಳ ಪೋಷಕರಿಗೆ ಪ್ರಕೃತಿ ವಿಕೋಪ ಅನುದಾನದಡಿ ರೂ. 4 ಲಕ್ಷ ಮೊತ್ತದ ಚೆಕ್‌ನ್ನು ಜು. 18ರಂದು ಮಾರಣಕಟ್ಟೆಯ ಸನ್ಯಾಸಿಬೆಟ್ಟುವಿನ ನೊಂದ ಕುಟುಂಬದ ಮನೆಯಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಿತರಿಸಿದರು.
ಈ ಸಂದರ್ಭ ಕುಂದಾಪುರ ತಹಶೀಲ್ದಾರೆ ಗಾಯತ್ರಿ ನಾಯಕ್‌, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಮಡಿವಾಳ, ತಾ. ಪಂ. ಸದಸ್ಯ ಎಚ್‌. ಮಂಜಯ್ಯ ಶೆಟ್ಟಿ, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಪಿಗೆಯಡಿ ಸಂಜೀವ ಶೆಟ್ಟಿ, ತಾ. ಪಂ. ಮಾಜಿ ಸದಸ್ಯೆ ಮೂಕಾಂಬು ಶೆಟ್ಟಿ, ಚಿತ್ತೂರು ಗ್ರಾ. ಪಂ. ಉಪಾಧ್ಯಕ್ಷ ಅಣ್ಣಪ್ಪ ನಾಯಕ್‌, ಉಪತಹಶೀಲ್ದಾರ ಕೊರಗು ಬಿಲ್ಲವ, ಆರ್‌.ಐ. ಅಶೋಕ್‌, ಕಾಂಗ್ರೆಸ್‌ ಮುಖಂಡ ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಚಿತ್ತೂರು ಗ್ರಾ. ಪಂ. ಸದಸ್ಯರು, ಕೆಂಚನೂರು ಸುಬ್ಬಣ್ಣ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಚಂದ್ರ ದೇವಾಡಿಗ, ಮಾಜಿ ಶಿಕ್ಷಕ ಪ್ರಭಾಕರ ಶೆಟ್ಟಿ, ವಂಡ್ಸೆ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಧಿಧೀರ್‌ ಶೆಟ್ಟಿ, ವಂಡ್ಸೆ ಗ್ರಾ. ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಿಸ್ಮಯಾಳ ತಂದೆ ಶೇಖರ ದೇವಾಡಿಗ ಹಾಗೂ ತಾಯಿ ಜಲಜಾ ದೇವಾಡಿಗ ಅವರಿಗೆ ಕೇವಲ ಒಂದೇ ವಾರದಲ್ಲಿ ರಾಜ್ಯ ಸರಕಾರದಿಂದ ರೂ. 4 ಲಕ್ಷ ಹಣ ಒದಗಿಸಿಕೊಟ್ಟ ಶಾಸಕ ಗೋಪಾಲ ಪೂಜಾರಿ ಅವರ ಪ್ರಯತ್ನ ಹಾಗೂ ಬಡ ಕುಟುಂಬದ ಮೇಲಿನ ಕಾಳಜಿ ಬಗ್ಗೆ ಚಿತ್ತೂರು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply