ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಎಸ್‌ಒಯು ಕಲಿಕಾರ್ಥಿ ಸಹಾಯಕೇಂದ್ರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಲಿಕಾರ್ಥಿ ಸಹಾಯಕೇಂದ್ರ ಪ್ರಾರಂಭವಾಗಿದೆ.

Call us

Click Here

ಕರಾವಳಿಯ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಇದರಿಂದಾಗಿ ಸಹಾಯವಾಗಲಿದ್ದು, ಇದರ ಪ್ರಯೋಜನವನ್ನು ಅಗತ್ಯವುಳ್ಳವರು ಪಡೆದುಕೊಳ್ಳಬಹುದಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿರುವ ಏಕೈಕ ಅಧಿಕೃತ ದೂರಶಿಕ್ಷಣ ನೀಡುವ ವಿಶ್ವವಿದ್ಯಾನಿಲಯವಾಗಿದ್ದು ಅತೀ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸೆಪ್ಟಂಬರ್ 1 ರಿಂದ ಸೆಪ್ಟಂಬರ್-ಅಕ್ಟೋಬರ್ ಆವೃತ್ತಿಯ ಈ ಸಾಲಿನ ಪ್ರವೇಶಾತಿ ಆರಂಭಗೊಂಡಿದ್ದು, ದಂಡ ಶುಲ್ಕವಿಲ್ಲದೆ ಅಕ್ಟೋಬರ್ ೧೦ರ ತನಕ ಪ್ರವೇಶಾತಿಗೆ ಅವಕಾಶವಿರುತ್ತದೆ. ದಂಡ ಶುಲ್ಕ ರೂ. 100/-ರೊಂದಿಗೆ ಅಕ್ಟೋಬರ್ ೨೦ರ ವರೆಗೂ ಹಾಗೂ ದಂಡ ಶುಲ್ಕ ರೂ.200/- ರೊಂದಿಗೆ ಅಕ್ಟೋಬರ್ ೨೯ರ ವರೆಗೆ ಪ್ರವೇಶಾತಿ ಮಾಡಿಕೊಳ್ಳಬಹುದಾಗಿದೆ. ಬಿ.ಎ., ಬಿ.ಕಾಂ., ಎಂ.ಎ. ಹಾಗೂ ಎಂ.ಕಾಂ. ಅಧ್ಯಯನ ಮಾಡಬಯಸುವವರು ಸಂವೇದನಾ ಪ್ರಥಮದರ್ಜೆ ಕಾಲೇಜಿನಲ್ಲಿ (7899418506, 9449725906) ವಿಚಾರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply