ಅತಂತ್ರವಾದ ವಂಡ್ಸೆ ಸ್ವಾವಲಂಬನಾ ಮಹಿಳೆಯರ ಹೊಲಿಗೆ ವೃತ್ತಿ – ತರಬೇತಿ ಕೇಂದ್ರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡ ವಂಡ್ಸೆ ಸ್ವಾವಲಂಬನಾ ಮಹಿಳೆಯರ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರಕ್ಕೆ ಇದೀಗ ಸಂಚಾಕಾರ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಹಳೆಯ ಸರಕಾರಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರವನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿದ್ದು, ಕಣ್ಣೊರೆಸುವ ತಂತ್ರವೆಂಬಂತೆ ಬದಲಿ ಕಟ್ಟಡ ಸೂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Call us

Click Here

ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ 2018ರಲ್ಲಿ ಮಹಿಳಾ ಸ್ವಾವಲಂಬನಾ ಕೇಂದ್ರ ಆರಂಭಿಸಲಾಗಿತ್ತು. ಈಗಾಗಲೇ ಮೂರು ಬ್ಯಾಚ್ ಮೂಲಕ 150 ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದರು. ಈ ಹಿಂದೆ ವಂಡ್ಸೆಯಲ್ಲಿ ಹೊಸ ಪಶು ಆಸ್ಪತ್ರೆ ನಿರ್ಮಾಣವಾದ ಬಳಿಕ ಜಿಲ್ಲಾ ಪಂಚಾಯತ್ ಹಳೆ ಪಶು ಆಸ್ಪತ್ರೆ ಕಟ್ಟಡವನ್ನು ವಂಡ್ಸೆ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿತ್ತು. ವಂಡ್ಸೆ ಗ್ರಾಮ ಪಂಚಾಯತ್ ಸ್ವಾವಲಂಭನಾ ಕೇಂದ್ರಕ್ಕಾಗಿ ಈ ಕಟ್ಟಡವನ್ನು ಬಿಟ್ಟುಕೊಟ್ಟಿತ್ತು. ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ಸ್ವಾವಲಂಬನಾ ಕೇಂದ್ರವನ್ನು ಉದ್ಘಾಟಿಸಿದ್ದರು.

ಆರಂಭದಲ್ಲಿ ಕುಂದಾಪುರ ಕೃಷಿ ಇಲಾಖೆ ಪ್ರಾಯೋಜಕತ್ವದಲ್ಲಿ ರುಡ್‌ಸೇಟ್ ಬ್ರಹ್ಮಾವರದ ಮೂಲಕ ಬಟ್ಟೆ ಹಾಗೂ ಪೇಪರ್ ಬ್ಯಾಗ್ ತರಬೇತಿ ಪಡೆದುಕೊಂಡಿದ್ದರು. ಕೇಂದ್ರದ ಮೂಲಕ ತರಬೇತಿ ಪಡೆದ ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ದೇವಸ್ಥಾಗಳ ಪ್ರಸಾದ ವಿತರಣೆ ಬಟ್ಟೆ ಚೀಲ ಹೊಲಿಯುವ ಕೆಲಸ ವಹಿಸಿಕೊಂಡು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು. ಕೊರೋನಾ ಸಮಯದಲ್ಲಿ ಬಟ್ಟೆಯ ಮಾಸ್ಕ್ ತಯಾರಿಸುವ ಮೂಲಕ ಕೊರೋನಾ ವಾರಿಯರ‍್ಸ್ ಆಗಿಯೂ ತೊಡಗಿಸಿಕೊಂಡಿದ್ದರು.

ಹೊಲಿಗೆ ಕೇಂದ್ರದ ಅಭಿವೃದ್ಧಿಗಾಗಿ ಇಲಾಖೆಯಿಂದ ಬಂದ ರೂ. 2 ಲಕ್ಷ ಸಹಾಯಧನವನ್ನು ಬ್ಯಾಂಕಿನಲ್ಲಿ ಭದ್ರತೆಯಾಗಿರಿಸಿರೂ. 4 ಲಕ್ಷ ಸಾಲ ತೆಗೆದು ಅದರಲ್ಲಿ ಪವರ್ ಮಿಷಿನ್, ಕಟ್ಟಿಂಗ್ ಮಿಷಿನ್ ಹಾಗೂ ಓವರ್‌ಲಾಕ್ ಮಿಷಿನ್ ಮತ್ತು ಬಟ್ಟೆ ಇತರ ಸಾಮಾಗ್ರಿಗಳನ್ನು ಖರೀದಿಸಲಾಗಿತ್ತು.

Click here

Click here

Click here

Click Here

Call us

Call us

ನೆಮ್ಮದಿ ಕೇಂದ್ರ ಆರಂಭಿಸುವ ಸಬೂಬು:
ಸ್ವಾವಲಂಬನಾ ಕೇಂದ್ರವನ್ನು ತೆರವುಗೊಳಿಸಿ ಅಲ್ಲಿ ನೆಮ್ಮದಿ ಕೇಂದ್ರ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಸ್ವಾವಲಂಬನಾ ಕೇಂದ್ರ ನಡೆಸಲು ಬೇರೊಂದು ಸರಕಾರಿ ಕಟ್ಟವನ್ನೂ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಸೂಚಿಸಿರುವ ಮತ್ತೊಂದು ಕಟ್ಟಡದಲ್ಲಿ ನಾಡ ಕಛೇರಿ ಮೀಸಲಿರಿಸಲಾಗಿದೆ. ತಾತ್ಕಾಲಿಕವಾಗಿ ಸ್ವಾವಲಂಬನಾ ಕೇಂದ್ರ ಸ್ಥಳಾಂತರಿಸಿ, ನೆಲೆಯಿಲ್ಲದಂತೆ ಮಾಡುವ ಹುನ್ನಾರವೂ ಅಡಗಿದೆ ಎನ್ನಲಾಗುತ್ತಿದೆ.

ರಾತ್ರೋರಾತ್ರಿ ಸ್ಥಳಾಂತರಿಸಿದ ಅಧಿಕಾರಿಗಳು:
ಮಹಿಳಾ ಸ್ವಾವಲಂಬನಾ ಕೇಂದ್ರವನ್ನು ಪೊಲೀಸ್ ರಕ್ಷಣೆಯೊಂದಿಗೆ ರಾತ್ರಿಯ ವೇಳೆಗೆ ಸ್ಥಳಾಂತರಿಸಿರುವ ಹಿಂದೆ ರಾಜಕೀಯ ವೈಷಮ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಲ್ಲಾ ಪಂಚಾಯತ್ ಸಿಇಓ ಅವರ ಆದೇಶವಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಪಿಡಿಓ ಶುಕ್ರವಾರ ಕೇಂದ್ರವನ್ನು ತೆರವುಗೊಳಿಸಲು ಬಂದಿದ್ದರು. ಆದರೆ ಅಲ್ಲಿನ ಮಹಿಳೆಯರು ಪ್ರತಿಭಟಿಸಿದ ಬಳಿಕ ಹಿಂದಕ್ಕೆ ತೆರಳು ಮತ್ತೆ ಮಧ್ಯಾಹ್ನವೂ ತೆರವುಗೊಳಿಸುವ ವಿಫಲಯತ್ನ ನಡೆಸಿದ್ದರು. ಬಳಿಕ ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಕೇಳಿಕೊಂಡ ಬಳಿಕ ಒಪ್ಪಿ ತೆರಳಿದ್ದ ಅಧಿಕಾರಿಗಳು ರಾತ್ರಿ ವೇಳೆಯಲ್ಲಿ ಬಂದು ಕಟ್ಟಡದಲ್ಲಿದ್ದ ಮೆಷಿನ್‌ಗಳನ್ನು ತೆರವುಗೊಳಿಸಿದ್ದಾರೆ. ಪಂಚಾಯತ್‌ರಾಜ್ ಕಾನೂನಿನಂತೆ ಸೂರ್ಯಾಸ್ತದ ನಂತರ ಯಾವುದೇ ಕಟ್ಟಡ ತೆರಳುಕಾರ್ಯ ಮಾಡುವಂತಿಲ್ಲ ಎಂಬ ಅಂಶ ದಾಖಲಾಗಿದ್ದರೂ, ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಘಟನೆಯ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಕುಂದಾಪ್ರ ಡಾಟ್ ಕಾಂ, ಗ್ರಾಪಂ ದೂರವಾಣಿ ಹಾಗೂ ಪಿಡಿಓ ಅವರ ಮೊಬೈಲ್ ಸಂಖ್ಯೆ ಸಂಪರ್ಕಿಸಲಾಗಿತ್ತು ಆದರೆ ನಾಟ್‌ರಿಚೆಬಲ್ ಆಗಿದ್ದವು.

ಒಟ್ಟಿನಲ್ಲಿ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಕನಸು ಹೊತ್ತು ದುಡಿಯುತ್ತಿರುವ ಮಹಿಳೆಯರಿಗೆ ಸೂಕ್ತ ನೆಲೆ ನೀಡದುರುವುದಕ್ಕೆ ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾಗಿದೆ.

  • ಸಂಸ್ಥೆಯ ಏಳಿಗೆಯನ್ನು ಸಹಿಸದ ಕೆಲವರು ಈ ಹಿಂದಿನಿಂದಲೂ ನಮಗೆ ಕಿರಿಕಿರಿ ಮಾಡುತ್ತಿದ್ದರು. ಸಂಸ್ಥೆಯನ್ನು ಮುಚ್ಚುವಂತೆ ಅಧಿಕಾರಿಗಳ ಮುಖಾಂತರ ಒತ್ತಡ ಹೇರುತ್ತಿದ್ದರು. ೧೦೦ ಜನ ಮಹಿಳೆಯರ ಜೀವನೋಪಾಯವಾಗಿದ್ದ ವೃತ್ತಿಗೆ ಅಡ್ಡಿಯುಂಟು ಮಾಡಿ ಅನ್ಯಾಯವೆಸಗಿದ್ದಾರೆ. ಪ್ರಧಾನಮಂತ್ರಿಗಳು ಆತ್ಮನಿರ್ಭರ ಭಾರತದ ಮೂಲಕ ಸ್ವ-ಉದ್ಯೋಗವನ್ನು ಬಲಪಡಿಸುವ ಯೋಜನೆ ಹಾಕಿಕೊಂಡಿದ್ದರೆ ಇಲ್ಲಿ ಮಾತ್ರ ಸ್ವ-ಉದ್ಯೋಗ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. – ಮಹಾಲಕ್ಷ್ಮೀ, ಮೇಲ್ವಿಚಾರಕಿ, ಸ್ವಾವಲಂಬನಾ ಕೇಂದ್ರ, ವಂಡ್ಸೆ

 

  • ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡುವ ಅವಕಾಶ ಕಡಿಮೆಯಿದ್ದು, ವಂಡ್ಸೆ ಗ್ರಾಮ ಪಂಚಾಯಿತಿ ಸ್ವಾವಲಂಬನಾ ಕೇಂದ್ರ ಆರಂಭಿಸಿ ಹೊಲಿಗೆ ತರಬೇತಿ ನೀಡಲು ಆರಂಭಿಸಿತು. ಇದರಿಂದ ನೂರಾರು ಮಹಿಳೆಯರಿಗೆ ಉಪಯೋಗವಾಗಿದೆ. ನೆಮ್ಮದಿಕೇಂದ್ರ ಆರಂಭಿಸುವ ನೆಪ ಹೇಳಿ ಸ್ವಾವಲಂಬನಾ ಕೇಂದ್ರ ಸ್ಥಳಾಂತರಿಸುವ ಹಿಂದೆ ರಾಜಕೀಯ ಷಡ್ಯಂತ್ರವಿದೆ. ವಂಡ್ಸೆಯ ಎಸ್‌ಎಲ್‌ಆರ್‌ಎಂ ಘಟಕ, ಸ್ವಾವಲಂಬನಾ ಕೇಂದ್ರ ಹಾಗೂ ಶಾಲೆ ಪಂಚಾಯತಿಗೆ ಕೀರ್ತಿ ತಂದುಕೊಟ್ಟಿದ್ದವು. ಇಲ್ಲಿ ರಾಜಕೀಯ ಮರೆತು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿತ್ತು. ಇದರಲ್ಲಿಯೂ ನ್ಯೂನ್ಯತೆ ಹುಡುಕುತ್ತಿರುವುದು ದುರದೃಷ್ಟಕರ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಅವರೇ ಮುಂದೆ ಉತ್ತರಿಸುತ್ತಾರೆ. – ಉದಯಕುಮಾರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರು, ಗ್ರಾಮ ಪಂಚಾಯತ್ ವಂಡ್ಸೆ
          ಉಡುಪಿ ಡಿಸಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವಾವಲಂಬನಾ ಕೇಂದ್ರ ಉದ್ಘಾಟಿಸಿದ ಸಂದರ್ಭ


                                                                 ಸ್ವಾವಲಂಬನಾ ಕೇಂದ್ರವನ್ನು ಸ್ಥಳಾಂತರಿಸುತ್ತಿರುವುದು

ಕೊರೋನಾ ಆತಂಕದ ಸಂದರ್ಭದಲ್ಲಿ ಬಟ್ಟೆಯ ಮಾಸ್ಕ್ ತಯಾರಿಸಿ ಮೆಚ್ಚುಗೆ ಗಳಿಸಿದ್ದ ಸ್ವಾವಲಂಬನಾ ಕೇಂದ್ರದ ಮಹಿಳೆಯರು

Leave a Reply