ಆಲೂರು ಚಿತ್ರಕೂಟ ಆಯುರ್ವೇದ ಸಂಸ್ಥೆಯಿಂದ ‘ಶಿಶು ಪೋಷಕ್’ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಬೈಂದೂರು ತಾಲೂಕಿನಾದ್ಯಂತ ‘ಶಿಶು ಪೋಷಕ್’ ಶಿಶುವಿನ ಆಹಾರವನ್ನು ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪಿಸಲಾಯಿತು.

Call us

Click Here

ಚಿತ್ರಕೂಟದ ಮುಖ್ಯಸ್ಥ ಡಾ ರಾಜೇಶ್ ಬಾಯಾರಿಯವರ ನೇತೃತ್ವದಲ್ಲಿ ಮರವಂತೆ, ಬೈಂದೂರು, ನಾಡ, ಆಲೂರು, ಚಿತ್ತೂರು, ಮಾರಣಕಟ್ಟೆಯ ಆಸುಪಾಸಿನ ಮಕ್ಕಳಿಗೆ ಶಿಶುವಿನ ಮಾನಸಿಕ ಹಾಗು ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವಂತ ಶಿಶು ಆಹಾರವಾದ ಶಿಶುಪೋಷಕ್ ಆಹಾರವನ್ನು ವಿತರಿಸಲಾಯಿತು.

ಏನಿದು ಶಿಶು ಪೋಷಕ್?
ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿರುವ ಈ ಉತ್ಪನ್ನವು ಮಕ್ಕಳ ಆರೋಗ್ಯದಾಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಶು ಪೋಷಕ್ ಉತ್ಪನ್ನವು ಉತ್ತಮ ಗುಣಮಟ್ಟದ ಆಯ್ದ ಧಾನ್ಯಗಳಿಂದ ಸ್ವಚ್ಛ ಹಾಗು ಆರೋಗ್ಯಕರ ಪ್ರದೇಶಗಳಲ್ಲಿ ತಯಾರಿಸಲಾಗುತ್ತಿದೆ. ಶಿಶು ಪೋಷಕ್ 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡುವ ಅಹಾರವಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ, ಸಂರಕ್ಷಕಗಳನ್ನು ಒಳಗೊಂಡಿಲ್ಲ. ಇದರಲ್ಲಿ ಬಳಸುವ ಏಕದಳ, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರುವುದು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಟ್ಟು ಪ್ರಮಾಣೀಕರಿಸಲಾಗಿದ್ದು ಯಾವುದೇ ಪೋಷಕಾಂಶಗಳನ್ನು ಪ್ರತ್ಯೇಕವಾಗಿ ಸೇರಿಸಿಲ್ಲ. ರಾಗಿ ರಿಚ್, ಬನಾನಾ ರಿಚ್, ರೈಸ್ ರಿಚ್ ಹೀಗೆ 3 ವಿಧಗಳಲ್ಲಿ ಮಕ್ಕಳಿಗೆ ರುಚಿಕರವಾದ ಆರೋಗ್ಯದಾಯಕವಾದ “ಶಿಶು ಪೋಷಕ್” ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ಉತ್ಪನ್ನಗಳಲ್ಲಿ ಬ್ರಾಹ್ಮಿ ಯಥೇಚ್ಚವಾಗಿ ಇರುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

 

Click here

Click here

Click here

Click Here

Call us

Call us

Leave a Reply