ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ : ರೂ 47.5 ಲಕ್ಷ ಲಾಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ.160 ಕೋಟಿ ವ್ಯವಹಾರ ನಡೆಸಿ ರೂ 47.56 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.11 ಲಾಭಾಂಶ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Click Here

ಶುಕ್ರವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 18 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದೆ. ನೂತನವಾಗಿ ತೆರೆದ ಶಿರೂರು, ತೆಕ್ಕಟ್ಟೆ ಶಾಖೆಗಳು ಉತ್ತಮ ಪ್ರಗತಿಯಲ್ಲಿದೆ. ಕುಂದಾಪುರ ಶಾಖೆ ಸ್ವಂತ ನಿವೇಶನ, ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.

ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕುಷ್ಟ ಬಿಲ್ಲವ ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು. ಉನ್ನತ ಶಿಕ್ಷಣ ಪಡೆಯುತ್ತಿರುವ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿರ್ದೇಶಕರಾದ ಕೆ. ಶಂಕರ ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್. ಅಣ್ಣಪ್ಪ ಬಿಲ್ಲವ, ಜಯಸೂರ್ಯ ಪೂಜಾರಿ, ಕಲ್ಪನಾ ಬಿ. ಪೂಜಾರಿ, ಎಂ. ಪುಟ್ಟ ಬಿಲ್ಲವ, ಶೇಖರ ಪೂಜಾರಿ, ಯು. ಕೇಶವ ಪೂಜಾರಿ, ಉದಯ ಜಿ. ಪೂಜಾರಿ ಇದ್ದರು.

  

Leave a Reply