ನಾವುಂದ ಹಿಂದು ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದ ಹಿಂದು ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆಯು ಇಲ್ಲಿನ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಈಚೆಗೆ ನಡೆಯಿತು.

Call us

Click Here

ಸಭೆಯಲ್ಲಿ ಬೈಂದೂರು ವಲಯ ಕೃಷಿ ಅಧಿಕಾರಿ ಪರಶುರಾಮ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಪೋಷಕರು ಮಕ್ಕಳು ಓದುವ ಸಮಯದಲ್ಲಿ ಅವರೊಂದಿಗೆ ಇದ್ದು, ಅವರು ಅದರಲ್ಲಿ ಸರಿಯಾಗಿ ತೊಡಗಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಅವರು ಆಧುನಿಕ ಉಪಕರಣಗಳ ಅತಿದಾಸರಾಗದಂತೆ ನೋಡಿಕೊಳ್ಳಬೇಕು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸಗಳಲ್ಲಿ ಹಿರಿಯರಿಗೆ ಸಹಾಯ ಮಾಡಿದರೆ ಅವರಲ್ಲಿ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಬೆಳೆದು ದೊಡ್ಡವರಾದಾಗ ಕಾಯಕದ ಬದುಕಿಗೆ ಒಗ್ಗಿಕೊಳ್ಳುತ್ತಾರೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವರಾಮ ಮಧ್ಯಸ್ಥ ಸ್ವಾಗತಿಸಿ, ನಿರೂಪಿಸಿದರು. ಸದಸ್ಯ ವಿಘ್ನೇಶ್ವರ ಕೆ ವಂದಿಸಿದರು. ಸಂಘದ ಹಿರಿಯ ಸದಸ್ಯ ಶಿವರಾಮ ಶೆಟ್ಟಿ, ಕೋಶಾಧಿಕಾರಿ ನಾರಾಯಣ ಪೂಜಾರಿ, ಉಪಾಧ್ಯಕ್ಷ ಮನೋಹರ ಎನ್. ಕೆ, ಜತೆ ಕಾರ್ಯದರ್ಶಿ ರತ್ನಾಕರ ಕೆ. ಸದಸ್ಯರಾದ ಪ್ರವೀಣ್ ಎನ್, ಎನ್. ಸತ್ಯನಾರಾಯಣ, ರವಿಕುಮಾರ್, ವೆಂಕಟೇಶ್ ಇದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಮತ್ತು ಯೋಗ ಸಾಧಕಿ ನಿರೀಕ್ಷಾ ಪೂಜಾರಿ ಅರೆಹೊಳೆ ಅವರನ್ನು ಪುರಸ್ಕರಿಸಲಾಯಿತು.

Leave a Reply