ಕೋಟೇಶ್ವರ: ರೋಬೋಸಾಪ್ಟ್ ಟೆಕ್ನೋಲಜೀಸ್ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿಯ ರೋಬೋಸಾಪ್ಟ್ ಟೆಕ್ನಾಲಜೀಸ್ ಸಂಸ್ಥೆಯಿಂದ ಕೋಟೇಶ್ವರದ ಸರಕಾರಿ ಪದವಿಪೂರ್ವ ಕಾಲೇಜಿಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Call us

Click Here

ಮುಖ್ಯ ಅತಿಥಿಗಳಾಗಿ ರೋಬೋಸಾಪ್ಟ್ ಟೆಕ್ನೋಲಜೀಸ್‌ನ ಶ್ರೀಕಾಂತ ಭಂಡಾರಿ ಮಾತನಾಡಿ, ಸಂಸ್ಥೆಯ ಪರಿಚಯ, ಕಾರ್ಯವೈಖರಿ ಹೇಳುತ್ತಾ 1996ರಲ್ಲಿ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ಸುಮಾರು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಸ್ಥಳೀಯವಾದ ಪ್ರತಿಭೆಗಳ ಕೊರತೆಯಿಂದ ಬೇರೆ ರಾಜ್ಯಗಳಿಂದ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅದರಂತೆಯೇ ಇಂದು ನೀಡಿದ ಕಂಪ್ಯೂಟರ್‌ನ ಮೂಲಕ ವಿಧ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿತು ಸ್ಥಳೀಯವಾಗಿ ಕೆಲಸ ಸಿಗುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡೆನ್ನಿಸ್ ಬಾಂಜಿ ವಹಿಸಿದ್ದರು. ಉಪ ಪ್ರಾಂಶುಪಾಲ ಪ್ರದೀಪ ಶೆಟ್ಟಿ, ಕಂಪ್ಯೂಟರ್ ವಿಭಾಗದ ನಿತಿನ್, ಕೋಟೇಶ್ವರ ತಾಲೂಕು ಪಂಚಾಯತ್ ಸದಸ್ಯರಾದ ರೂಪಾ ಪೈ, ರೋಬೋಸಾಪ್ಟ್ ಟೆಕ್ನಾಲಜೀಸ್‌ನ ಶರತ್ ಅಚಾರ್ಯ, ವಿಘ್ನೇಶ್ ಶೇಟ್ ಉಪಸ್ಥಿತರಿದ್ದರು.

Leave a Reply