ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಭಾರತದ ರಾಯಭಾರಿ, ಘನತೆವೆತ್ತ ಡಾ. ದೀಪಕ್ ಮಿತ್ತಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಸಂಯೋಜಕ ಅಧಿಕಾರಿ ಎಸ್. ಝ್ಹೇವಿಯರ್ ಧನರಾಜ್ ಅವರ ನೇತ್ರತ್ವದಲ್ಲಿ ಭಾರತೀಯ ಸಾಂಸ್ಕ್ರತಿಕ ಕೇಂದ್ರ ( ಐಸಿಸಿ) ಕತಾರ್ನ ನೂತನ ನಿರ್ವಹಣಾ ಸಮಿತಿಯ ಮೊದಲ ಪರಿಚಯಾತ್ಮಕ ಸಭೆ ನಡೆಯಿತು.
ಎಲ್ಲಾ ನಿರ್ವಹಣಾ ಸಮಿತಿಯ ಸದಸ್ಯರನ್ನು ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್ ಪರಿಚಯಿಸಿದರು. ಪ್ರತಿಯೊಬ್ಬ ಸದಸ್ಯರ, ತಮ್ಮ ಹಿನ್ನೆಲೆ, ಪಾತ್ರ ಮತ್ತು ಪ್ರಸ್ತುತ ಐಸಿಸಿ 2021-22ರ ಅವಧಿಯಲ್ಲಿ ನಿಗದಿಪಡಿಸಿದ ಹೊಣೆಗಾರಿಕೆಯನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದರು. ಡಾ.ದೀಪಕ್ ಮಿತ್ತಲ್ ಪರಿಚಯಾತ್ಮಕ ಭಾಷಣ ಮಾಡಿದರು, ಸಮಿತಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು.
ಈ ಸಂದರ್ಭದಲ್ಲಿ 15 ಆಗಸ್ಟ್ 2022ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವತ್ತ ಭಾರತವನ್ನು ಪ್ರತಿನಿಧಿಸಲು ತಂಡವು ಸಂಪೂರ್ಣ ಉತ್ಸುಕವಾಗಿದೆ, ಮುಂದಿನ 75 ವಾರಗಳವರೆಗೆ ವಾರಕ್ಕೊಮ್ಮೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯಿಂದ ನಿರ್ಧರಿಸಲಾಯಿತು . ಐಸಿಸಿ ಉಪಾಧ್ಯಕ್ಷ, ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯಲ್ಲಿ ಭಾಗವಹಿಸಿದ್ದರು.