ಕಾಮಿ೯ಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ‘ಶಾಸಕರ ಕಚೇರಿ ಚಲೋ’ ಹೋರಾಟ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಮಿ೯ಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 4ರ ಬಜೆಟ್ ಪೂರ್ವ ನಡೆಯುವ ಕಾಮಿ೯ಕರ ವಿಧಾನ ಸೌಧ ಚಲೋ ಹೋರಾಟದ ಅಂಗವಾಗಿ ಬೈಂದೂರು ತಾಲ್ಲೂಕು ಸಿಐಟಿಯು ನೇತೃತ್ವದಲ್ಲಿ ಕಾಮಿ೯ಕರು ಮೆರವಣಿಗೆಯ ಮೂಲಕ ಬೈಂದೂರು ಶಾಸಕರ ಕಚೇರಿ ಚಲೋ ಹೋರಾಟ ನಡೆಸಿದರು.

Call us

Click Here

ಬೈಂದೂರು ಸಿಐಟಿಯು ಕಚೇರಿಯಿಂದ ಕಾಮಿ೯ಕರ ಪಾದಯಾತ್ರೆಯನ್ನು ಉದ್ಘಾಟಿಸಿದ ಸಿಐಟಿಯು ಉಡುಪಿ ಜಿಲ್ಲಾ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡಿ,ಮಾಚ್೯4ರಂದು ಎಲ್ಲಾ ವಿಭಾಗದ ಕಾಮಿ೯ಕರು ‘ಬಜೆಟ್ ಅಧಿವೇಶನ ಚಲೋ’ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಸಲ್ಲಿಸಿ, ಈ ವಷ೯ದ ಬಜೆಟ್ ಅನುದಾನದ ಮೂಲಕ ಹಲವು ಬೇಡಿಕೆಗಳನ್ನು ಈಡೆರಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ಬೈಂದೂರು ತಾಲೂಕು ಕೇಂದ್ರಕ್ಕೆ ಮಿನಿ ವಿಧಾನ ಸೌಧ, ಕಾಮಿ೯ಕ ನಿರೀಕ್ಷಕರ ಕಚೇರಿ, ಬೈಂದೂರು ತಾಲೂಕಿನಾದ್ಯಂತ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ ,ಸರಕಾರದ ಎಲ್ಲಾ 24 ಇಲಾಖೆಗಳನ್ನು ತೆರೆಯಬೇಕು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ ಏರಿಸುವುದು, ಸ್ಕೀಮ್ ನೌಕರರಾದ ಅಕ್ಷರ ದಾಸೋಹ, ಅಂಗನವಾಡಿ, ಆಶಾ, ಪಂಚಾಯತ್ ನೌಕರರರಿಗೆ ವೇತನ ಹೆಚ್ಚಳ, ಕಟ್ಟಡ ಕಾಮಿ೯ಕರಿಗೆ ಕರೊನಾ ಪರಿಹಾರ, ಮದುವೆ, ಪಿಂಚಣಿ, ಮರಣ ಪರಿಹಾರಕ್ಕೆ ಅಜಿ೯ ಹಾಕುವ ಕಾಲ ಮಿತಿ ರದ್ಧತಿಗೆ, ಮನೆ ಕಟ್ಟಲು ರೂಪಾಯಿ 3 ಲಕ್ಷ ಸಹಾಯಧನ ಕೊಡಬೇಕು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಸಂಪುಣ೯ಗೊಳಿಸಬೇಕು ಇತ್ಯಾದಿ ಸ್ಥಳೀಯ ಬೇಡಿಕೆ ಸಹಿತ ರಾಜ್ಯ ಮಟ್ಟದ 30 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕ ಮಹಿಮ್ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದಭ೯ದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾಮಿ೯ಕ ಮುಖಂಡರಾದ ವೆಂಕಟೇಶ್ ಕೋಣಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ್ ತೊಂಡೆಮಕ್ಕಿ, ಉದಯ ಗಾಣಿಗ ಮೊಗೇರಿ, ರಾಜೀವ ಪಡುಕೋಣೆ, ವಿಜಯ ಕೊಯಾನಗರ, ಅಮ್ಮಯ್ಯ ಪೂಜಾರಿ ಬಿಜೂರು, ಸಿಂಗಾರಿ ನಾವುಂದ, ಜಯಶ್ರೀ ಪಡುವರಿ, ರಾಮ ಕಂಬದಕೋಣೆ, ಮಂಜು ಪಡವರಿ, ರಾಜು ದೇವಾಡಿಗ ಅರೆಹೊಳೆ, ನಾಗರತ್ನ ನಾಡ ಮೊದಲಾದವರು ಇದ್ದರು,

Leave a Reply