ಮರವಂತೆ: ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ಶ್ರಮದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಈಚೆಗೆ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರವನ್ನು ಸ್ವಚ್ಛಗೊಳಿಸಿ ಶ್ರಮದಾನ ನಡೆಸಿದರು.

Call us

Click Here

ಸಂಘದ ಉಪಾಧ್ಯಕ್ಷ ಸತೀಶ ಪೂಜಾರಿ ಗಂಗೊಳ್ಳಿ ಅವರ ಮನೆ, ಆವರಣ ಸಮತಟ್ಟು ಮಾಡಿ ಪೈಪ್ ಅಳವಡಿಸಲು ಜೆಸಿಬಿ ಯಂತ್ರ ಒದಗಿಸಿದ್ದರು. ವಿಶ್ವನಾಥ್ ಶ್ಯಾನುಬಾಗ್ ಸಹಕರಿಸಿದರು. ಸಂಘದ ಗೌರವಾಧ್ಯಕ್ಷ ದಯಾನಂದ ಬಳೆಗಾರ್, ಅಧ್ಯಕ್ಷ ರವಿ ಮಡಿವಾಳ, ಸದಸ್ಯರಾದ ಸೋಮಯ್ಯ ಬಿಲ್ಲವ, ಯೋಗೇಶ ಆಚಾರ್ಯ, ರಾಜು ಗಾಂಧಿನಗರ, ಅಣ್ಣಪ್ಪ ಖಾರ್ವಿ, ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತಾ, ಇತರ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು. ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಅವರು ಶ್ರಮದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply