ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಹೆಸರಲ್ಲಿ ಠೇವಣಿ ಇಡುವ ಶಿಕ್ಷಕಿ ರೇಖಾ ಪ್ರಭಾಕರ್

Click Here

Call us

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು, ಹಳೆ ವಿದ್ಯಾರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಊರಿನ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯೊಂದಿಗೆ ಸಮವಸ್ತ್ರ, ನೋಟ್ ಪುಸ್ತಕ, ಮೂಲಭೂತ ಸೌಕರ್ಯ, ವಾಹನ ವ್ಯವಸ್ಥೆ, ದತ್ತು ಸ್ವೀಕಾರದಂತಹ ಮಹತ್ವದ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತಮ್ಮ ದುಡಿಮೆ ಹಣದಲ್ಲಿಯೇ ಶಾಲೆಗೆ ಸೇರುವ ಮಕ್ಕಳ ಹೆಸರಿನಲ್ಲಿ ಹಣ ರೇವಣಿ ಇಡುವ ಮೂಲಕ ಹಾಜರಾತಿ ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

Call us

Click Here

ಈ ವಿನೂತನ ‘ಬಾಂಡ್’ ಯೋಜನೆ ಅಳವಡಿಸಿಕೊಂಡವರು ಕುಂದಾಪುರ ತಾಲೂಕು ಶಂಕರನಾರಾಯಣ ರೇಖಾ ಪ್ರಭಾಕರ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ರೇಖಾ ಪ್ರಭಾಕರ ಅವರ ಕಾರ್ಯದಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ.

ರೇಖಾ 2010ರಲ್ಲಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರಿಕೊಂಡ ಸಂದರ್ಭದಲ್ಲಿ ಶಾಲೆಯಲ್ಲಿ 1 ರಿಂದ 7 ತರಗತಿ ಓದುವ ಮಕ್ಕಳ ಸಂಖ್ಯೆ ಕೇವಲ 20. ಹೊಸದಾಗಿ ಸೇರುವ ಹುಡುಗರು ಪ್ರತಿವರ್ಷ 3 ರಿಂದ 3. ರೇಖಾ ಮಕ್ಕಳ ಶಾಲೆಗೆ ಕರೆತರಲು ನಾನಾ ಪ್ರಯತ್ನ ಮಾಡಿದರು, ಪಾಲಕರ ಊರ ಹಿರಿಯರ ಭೇಟಿಯಾಗಿ ಮನ ಒಲಿಸುವ ಪ್ರಯತ್ನ ಕೂಡಾ ವಿಫಲವಾಯಿತು. ಆವಾಗ ಸಿಕ್ಕದ ಹೊಸ ಸೂತ್ರ ಠೇವಣಿ ಯೋಜನೆ. ಅದಕ್ಕೆ ಪ್ರತಿಫಲವೆಂಬಂತೆ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಏರಿಕೆ ಕಂಡಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಠೇವಣಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ:
2013-14ರಲ್ಲಿ ಠೇವಣಿ ಯೋಜನೆ ಪ್ರಾರಂಭಿಸಿದರು. 1ನೇ ತರಗತಿಗೆ ಶಾಲೆಗೆ ಸೇರುವ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ. ಠೇವಣಿ ಇಡುವುದು. ಆ ಮಗು ಹತ್ತನೇ ತರಗತಿ ಮುಗಿಸಿದ ತಕ್ಷಣ ಬಡ್ಡಿ ಸಮೇತ ಹಣ ದೊರಕುವಂತೆ ಮಾಡಿದ ವ್ಯವಸ್ಥೆಯೇ ಠೇವಣಿ ಯೋಜನೆ. ಹೊಸ ಪ್ರಯತ್ನದ ಫಲ ಪ್ರಸಕ್ತ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ 83! ಈ ಶಾಲಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರ ಮನೆಗಳೇ ಇರುವುದು ಈ ಯೋಜನೆಯ ಯಶಸ್ಸಿಗೂ ಕಾರಣವಾಯಿತು. ಠೇವಣಿಗಾಗಿ ಯಾರನ್ನೂ ಅಂಗಲಾಚದೇ ತಮ್ಮ ಸ್ವಂತ ಹಣ ಬಳಸಿಕೊಂಡಿದ್ದಾರೆ. ಇದಕ್ಕೆ ಬಳಸಿವ ಹಣ ಎಷ್ಟು ಅಂತ ಕೇಳಿದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುತ್ತಾರೆ ರೇಖಾ. ಪತ್ನಿಯ ಪ್ರಯತ್ನಕ್ಕೆ ಬೆಂಬಲವಾಗಿ ನಿಂತವರು ಕುಂದಾಪುರ ಅರಣ್ಣ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪತಿ ಪ್ರಭಾಕರ್ ಕುಲಾಲ್. ಕುಂದಾಪ್ರ ಡಾಟ್ ಕಾಂ ಸುದ್ದಿ.

ನಾನು ಮತ್ತು ನನ್ನ ಪತಿ ಬಡತನದಲ್ಲೆ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ತುಂಬ ನೆರವಾಗಿದೆ ಅದರ ಪರಿಣಾಮ ನಮ್ಮಿಬ್ಬರಿಗೆ ಸರ್ಕಾರಿ ನೌಕರಿ ಸಿಕ್ಕಿದೆ, ಅದಕ್ಕೆ ನಾವೂ ನಮ್ಮ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೇವೆ. ಸಮಾಜದ ಋಣ ಹೀಗಾದರೂ ಸ್ವಲ್ಪ ತೀರಿಸುವ ಅವಕಾಶ ಸಿಕ್ಕದೆ. – ರೇಖಾ ಪ್ರಭಾಕರ, ಡಿಪಾಜಿಟ್ ಯೋಜನೆ ಜಾರಿಗೆ ತಂದ ಶಿಕ್ಷಕಿ

Click here

Click here

Click here

Click Here

Call us

Call us

Leave a Reply