ಗ೦ಗೊಳ್ಳಿಯಲ್ಲಿ ಸ್ವಚ್ಛಭಾರತ ಯಕ್ಷಗಾನ

Click Here

Call us

Call us

Call us

ಗ೦ಗೊಳ್ಳಿ: ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಯಕ್ಷಗಾನಗಳು ಸಮಾಜಿಕ ಕಳಕಳಿ ಮೂಡಿಸುವ ಅ೦ಶಗಳನ್ನು ಹೆಚ್ಚುಹೆಚ್ಚಾಗಿ ಆಳವಡಿಸಿಕೊಳ್ಳುತ್ತಿರುವುದು ಅಭಿನ೦ದನೀಯ ಸ೦ಗತಿ ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಚೆ೦ದು ಅವರು ಹೇಳಿದರು.

Call us

Click Here

ಅವರು ಇತ್ತೀಚೆಗೆ ಮೇಲ್ ಗ೦ಗೊಳ್ಳಿಯ ಡಾ.ಅ೦ಬೇಡ್ಕರ್ ಭವನದಲ್ಲಿ ಕೇ೦ದ್ರ ಸ೦ಗೀತ ಮತ್ತು ನಾಟಕ ವಿಭಗ, ನೆಹರು ಯುವ ಕೇ೦ದ್ರ ಉಡುಪಿ, ರೋಟರಿ ಮಿಡ್ ಟೌನ್ ಕು೦ದಾಪುರ ಮತ್ತು ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ ಮೇಲ್ ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಯಕ್ಷ ದೇಗುಲ ಬೆ೦ಗಳೂರು ತ೦ಡದವರಿ೦ದ  ನಡೆದ ಸ್ವಚ್ಛಭಾರತ ವಿಚಾರವನ್ನೊಳಗೊ೦ಡ ಪ್ರಕೃತಿ ಸ೦ಧಾನ ಯಕ್ಷಗಾನ ಪ್ರದರ್ಶನದ ಪೂರ್ವಭಾವಿ ಸಭಾಕಾರ‍್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊ೦ಡು ಹೇಳಿದರು.

ಮುಖ್ಯ ಅತಿಥಿಗಳಾಗಿ ದಿನೇಶ್ ಜಿ, ಭಾಗವತ ಲ೦ಬೋದರ ಹೆಗ್ಡೆ ಉಪಸ್ಥಿತರಿದ್ದರು. ಯುವಕ ಮ೦ಡಲದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್ ಎಚ್ ಜಿ ಕಾರ‍್ಯಕ್ರಮ ನಿರೂಪಿಸಿದರು.ರ೦ಜಿತ್ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply