ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್‌ :ಸಿದ್ದಾಪುರ ಘಟಕ ಉದ್ಘಾಟನೆ

Call us

Call us

Call us

ಅಮಾಸೆಬೈಲು: ಸಮಾಜದ ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು. ಯುವ ಜನತೆ ಉತ್ತಮ ಧ್ಯೇಯೋದ್ದೇಶದೊಂದಿಗೆ ಸಂಘಟನೆ ಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕು.

Call us

Click Here

ಸಂಘಟನೆಗಳು ಸಮಾಜದ ಅಭಿವೃದ್ಧಿಯಾ ಗಲು ಮುಖ್ಯವಾಗಿ ಕಾರ್ಯನಿರ್ವಹಿಸಬೇಕು. ಸಂಘಟನೆಗಳು ಬಲಗೊಂಡಾಗ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಎಸ್‌. ಸಚ್ಚಿದಾನಂದ ಚಾತ್ರ ಅವರು ಹೇಳಿದರು.

ಅವರು ಸಿದ್ದಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್‌ ಸಿದ್ದಾಪುರ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ತಾಲೂಕು ವಿಶ್ವಕರ್ಮ ಕಾರ್ಪೆಂಟರ್ ಯೂನಿಯನ್‌ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಹೋರಾಡ ಬೇಕು. ಕಾರ್ಪೆಂಟರ್ ಕೆಲಸದಲ್ಲಿ ವಿಶ್ವಕರ್ಮರು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿ ದ್ದಾರೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಸಂಘಟನೆಯಾಗಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಕೊಲ್ಲೂರು ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ, ಸಿದ್ದಾಪುರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಯೂನಿಯನ್‌ನ ತಾಲೂಕು ಉಪಾಧ್ಯಕ್ಷ ದಿನಕರ ಆಚಾರ್ಯ ಕಂಡ್ಲೂರು, ಸಿದ್ದಾಪುರ ಘಟಕದ ಗೌರಾವಾಧ್ಯಕ್ಷ ಚಂದ್ರಯ್ಯ ಆಚಾರ್ಯ ಜನ್ಸಾಲೆ, ಜಯರಾಮ ಆಚಾರ್ಯ ರಥಬೀದಿ ಮೊದಲಾದವರು ಉಪಸ್ಥಿತರಿದರು.

Click here

Click here

Click here

Click Here

Call us

Call us

ಸಿದ್ದಾಪುರ ಘಟಕದ ಅಧ್ಯಕ್ಷ ಉದಯ ಆಚಾರ್ಯ ಜನ್ಸಾಲೆ ಸ್ವಾಗತಿಸಿದರು. ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ವಿ. ವೆಂಕಟೇಶ್‌ ಆಚಾರ್ಯ ಗೋಪಾಡಿ ಪ್ರಾಸ್ತಾವಿಕವಾಗಿ ಮಾತುಗಳ ನ್ನಾಡಿದರು. ಸಿದ್ದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಆಚಾರ್ಯ ಆಜ್ರಿ ವಂದಿಸಿದರು.

Leave a Reply