ಕಡಲ ಅಲೆಗಳ ರುದ್ರ ನರ್ತನ: ಮನೆ, ದೋಣಿಗೆ ಹಾನಿ. ಬೈಂದೂರು ಶಾಸಕರ ಭೇಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ’ತೌಕ್ತೇ ಚಂಡಮಾರುತದ ಪರಿಣಾಮ ಶನಿವಾರ ಬಿರುಸಿನ ಗಾಳಿ ಮಳೆ ಮತ್ತು ಪ್ರಬಲ ಕಡಲ್ಕೊರೆತ ಮುಂದುವರೆದಿದೆ. ಚಂಡಮಾರುತ ಪ್ರಭಾವ ಈ ಭಾಗದ ಕರಾವಳಿ ತೀರದುದ್ದಕ್ಕೂ ತಟ್ಟಿದೆ. ಕಡಲ ಅಲೆಗಳ ರುದ್ರನರ್ತನ ಮನೆ, ಮೀನುಗಾರಿಕಾ ದೋಣಿಗಳಿಗೆ ಅಪಾರ ಹಾನಿ ಉಂಟು ಮಾಡಿದೆ.

Call us

Click Here

ಹೊಸಾಡು ಗ್ರಾಮದ ಕಂಚುಗೋಡು ಪರಿಸರದಲ್ಲಿ ಕಡಲ್ಕೊರೆತದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಕಂಚುಗೋಡು ಶ್ರೀ ರಾಮ ಮಂದಿರದ ಸಮೀಪದ ನಿವಾಸಿ ಕೊಲ್ಲೂರು ಸಂಜೀವ ಖಾರ್ವಿ ಮನೆಯ ವಠಾರದಲ್ಲಿದ್ದ ಸುಮಾರು 15ಕ್ಕೂ ಮಿಕ್ಕಿ ತೆಂಗಿನ ಮರಗಳು ಉರುಳಿ ಬಿದ್ದು ಸಮುದ್ರ ಪಾಲಾಗಿದ್ದು, ಇವರ ವಾಸ್ತವ್ಯದ ಮನೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ. ಇದೇ ಪರಿಸರದಲ್ಲಿ ಕಡಲ ತೀರದ ಸನಿಹದಲ್ಲಿರುವ ಸುಮಾರು 10 ಕ್ಕೂ ಮಿಕ್ಕಿ ಮೀನುಗಾರರ ಮನೆಗಳು ಕಡಲ್ಕೊರೆತದ ಭೀತಿ ಎದುರಿಸುತ್ತಿದೆ. ತೀರದಲ್ಲಿ ನಿಲ್ಲಿಸಿದ್ದ ಎರಡು ದೋಣಿಗಳಿಗೂ ಹಾನಿಯಾಗಿದೆ.

ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆhttps://kundapraa.com/?p=48195 .

ಗಂಗೊಳ್ಳಿ ಗ್ರಾಮದ ಬೇಲಿಕೇರಿ, ಮಲ್ಯರಬೆಟ್ಟು, ಖಾರ್ವಿಕೇರಿ, ಲೈಟ್ಹೌಸ್, ಸಾಂತಯ್ಯನಕೇರಿ ಪ್ರದೇಶಗಳಲ್ಲಿ ಕಡಲ ಆರ್ಭಟ ಹೆಚ್ಚಾಗಿದ್ದು, ಕಡಲಿನ ರಕ್ಕಸ ಅಲೆಗಳು ಒಂದರ ಮೇಲೊಂದರಂತೆ ತೀರಕ್ಕೆ ಅಪ್ಪಳಿಸುತ್ತಿದೆ. ಕಡಲ ಕೊರೆತ ತಡೆಯಲು ನಿರ್ಮಿಸಲಾಗಿರುವ ತಡೆಗೋಡೆಯನ್ನು ದಾಟಿ ಸಮುದ್ರದ ನೀರು ತೀರ ಪ್ರದೇಶಗಳಲ್ಲಿನ ಮನೆಗಳತ್ತ ಮುನ್ನುಗ್ಗುತ್ತಿದೆ. ತೀರದಲ್ಲಿ ನಿಲ್ಲಿಸಲಾಗಿದ್ದ ದೋಣಿಗಳನ್ನು ಮೀನುಗಾರರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ತೀರದಲ್ಲಿ ಮೀನುಗಾರರು ನಿರ್ಮಿಸಿಕೊಂಡಿರುವ ಶೆಡ್ಗಳು ಕಡಲ ಪಾಲಾಗಿದ್ದು, ಬಲೆ ಮತ್ತಿತರ ಸಲಕರಣೆಗಳು ಕಡಲ ಒಡಲು ಸೇರಿಕೊಂಡಿದೆ.

Click here

Click here

Click here

Click Here

Call us

Call us

ಗುಜ್ಜಾಡಿ ಗ್ರಾಮದ ಬೆಣ್ಗೆರೆ ಪರಿಸರದಲ್ಲಿ ಕೂಡ ಕಡಲಿನ ಅಬ್ಬರ ಜೋರಾಗಿದ್ದು, ಸುಮಾರು 8-9 ಮನೆಗಳು ಅಪಾಯದಂಚಿನಲ್ಲಿದೆ. ಕಡಲ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ಮೀನುಗಾರರು ಮೀನುಗಾರಿಕಾ ದೋಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ಚಂಡಮಾರುತದ ಪರಿಣಾಮ ಕಡಲು ರಕ್ಕಸ ಅಲೆಗಳು ಏಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.

ಕಡಲ್ಕೊರೆತ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಶೀಲ್ದಾರ್ ಆನಂದಪ್ಪ ನಾಯ್ಕ್, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ವಂಡ್ಸೆ ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಸ್ಥಳೀಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ.

► ಮರವಂತೆ: ಏರುಗತಿಯಲ್ಲಿ ಸಾಗಿದ ಅಲೆಗಳ ಆರ್ಭಟ. ಆತಂಕದಲ್ಲಿ ಮೀನುಗಾರರುhttps://kundapraa.com/?p=48188 .

* ಚಂಡಮಾರುತ ಪರಿಣಾಮ ಗಂಗೊಳ್ಳಿಯಿಂದ ಶಿರೂರು ತನಕ ಕಡಲ ತೀರದಲ್ಲಿ ಕಡಲ್ಕೊರೆತ, ಕಡಲಿನ ಅಲೆಗಳ ಅಬ್ಬರಕ್ಕೆ ವ್ಯಾಪಕ ಹಾನಿ ಉಂಟಾಗಿದೆ. ಕಡಲ ತೀರದ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಚಂಡಮಾರುತದಿಂದ ಆದ ಹಾನಿ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಮಾಹಿತಿ ನೀಡಿ ತುರ್ತು ಕ್ರಮಗಳ ಮತ್ತು ಪರಿಹಾರದ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು – ಬಿ. ಎಂ. ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು.

 

Leave a Reply