ಉಡುಪಿ ಜಿಲ್ಲೆಯಲ್ಲಿ ಗುರುವಾರ 905 ಕೋವಿಡ್ ಪಾಸಿಟಿವ್, 3 ಸಾವು, 753 ಮಂದಿ ಗುಣಮುಖ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಗುರುವಾರ 905 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 3 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 420, ಕುಂದಾಪುರ, ಬೈಂದೂರು ತಾಲೂಕಿನ 246, ಕಾರ್ಕಳ, ಹೆಬ್ರಿ ತಾಲೂಕಿನ 233 ಮಂದಿಗೆ ಹಾಗೂ ಹೊರ ಜಿಲ್ಲೆಯ 6 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

Call us

Click Here

ಒಟ್ಟು 905 ಪ್ರಕರಣಗಳಲ್ಲಿ 30 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 875 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ.

► ಉಡುಪಿ ಜಿಲ್ಲೆಯ ಬ್ಯಾಂಕುಗಳ ಕೆಲಸದ ಸಮಯ ಬದಲಿಸಲು ಆದೇಶ  – https://kundapraa.com/?p=48719 .

ಇಂದು ಉಡುಪಿಯ 69 ವರ್ಷದ ವೃದ್ಧೆ, 70 ವರ್ಷದ ವೃದ್ಧ, ಕುಂದಾಪುರದ 78 ವರ್ಷದ ವೃದ್ಧ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 753 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6015 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3648 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಇಂದು 5236 ಮಂದಿಗೆ ಮೊದಲನೇ ಡೋಸ್, 904 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್ ಮಾಡಲಾಗಿದೆ. ಇಲ್ಲಿಯ ತನಕ ಒಟ್ಟು 2,25,543 ಮಂದಿಗೆ ಮೊದಲ ಡೋಸ್ ಹಾಗೂ 75,461 ಮಂದಿಗೆ ಎರಡನೇ ಡೋಸ್ ವಾಕ್ಸಿನ್ ನೀಡಲಾಗಿದೆ.

ಸೂಚನೆ: ಕುಂದಾಪುರ & ಬೈಂದೂರು ತಾಲೂಕನ್ನು ಸೇರಿಸಿ ಕುಂದಾಪುರ ಎಂದೂ, ಉಡುಪಿ, ಬ್ರಹ್ಮಾವರ, ಕಾಪು ಸೇರಿಸಿ ಉಡುಪಿ ಎಂದೂ, ಕಾರ್ಕಳ & ಹೆಬ್ರಿ ತಾಲೂಕನ್ನು ಸೇರಿಸಿ ಕಾರ್ಕಳ ಎಂದು ಆರೋಗ್ಯ ಇಲಾಖೆ ಪರಿಗಣಿಸಿದೆ.

Click here

Click here

Click here

Click Here

Call us

Call us

► ಉಡುಪಿ – ದ.ಕ ಜಿಲ್ಲೆಯ ಪಡಿತರದಾರರಿಗೆ ಸ್ಥಳೀಯ ಕೆಂಪು ಕುಚ್ಚಲಕ್ಕಿ ಸರಬರಾಜು: ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ – ಸಚಿವ ಕೋಟ ಶ್ರೀನಿವಾಸ ಪೂಜಾರಿ https://kundapraa.com/?p=48716 .

Leave a Reply