ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 766 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 4 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 285, ಕುಂದಾಪುರ, ಬೈಂದೂರು ತಾಲೂಕಿನ 293, ಕಾರ್ಕಳ, ಹೆಬ್ರಿ ತಾಲೂಕಿನ 186 ಮಂದಿಗೆ ಹಾಗೂ ಹೊರ ಜಿಲ್ಲೆಯ 2 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.
ಒಟ್ಟು 766 ಪ್ರಕರಣಗಳಲ್ಲಿ 17 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 749 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ.
ಇಂದು ಉಡುಪಿಯ 62 ವರ್ಷದ ವೃದ್ಧೆ, 57 ವರ್ಷದ ಮಹಿಳೆ, 40 ವರ್ಷದ ಮಹಿಳೆ, ಕುಂದಾಪುರದ 51 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 835 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 5942 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3396 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಜಿಲ್ಲೆಯಲ್ಲಿ ಇಂದು 6335 ಮಂದಿಗೆ ಮೊದಲನೇ ಡೋಸ್, 3162 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್ ಮಾಡಲಾಗಿದೆ. ಇಲ್ಲಿಯ ತನಕ ಒಟ್ಟು 2,31,878 ಮಂದಿಗೆ ಮೊದಲ ಡೋಸ್ ಹಾಗೂ 78,623 ಮಂದಿಗೆ ಎರಡನೇ ಡೋಸ್ ವಾಕ್ಸಿನ್ ನೀಡಲಾಗಿದೆ.
ಸೂಚನೆ: ಕುಂದಾಪುರ & ಬೈಂದೂರು ತಾಲೂಕನ್ನು ಸೇರಿಸಿ ಕುಂದಾಪುರ ಎಂದೂ, ಉಡುಪಿ, ಬ್ರಹ್ಮಾವರ, ಕಾಪು ಸೇರಿಸಿ ಉಡುಪಿ ಎಂದೂ, ಕಾರ್ಕಳ & ಹೆಬ್ರಿ ತಾಲೂಕನ್ನು ಸೇರಿಸಿ ಕಾರ್ಕಳ ಎಂದು ಆರೋಗ್ಯ ಇಲಾಖೆ ಪರಿಗಣಿಸಿದೆ.