ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ: ಸರ್ವಸದಸ್ಯರ ಸಾಮಾನ್ಯ ಸಭೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ನಿ. ಮುಳ್ಳಿಕಟ್ಟೆ ಹೊಸಾಡು ಇದರ 5ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ಮುಳ್ಳಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

Call us

Click Here

ಮುಖ್ಯ ಕಾರ್ಯನಿರ್ವಹಣಾಕಾಧಿಕಾರಿ ಭಾಸ್ಕರ ಬಿಲ್ಲವ, ಸಂಸ್ಥೆಯು ರೂ. 12,98,25,081 ಠೇವಣಿ ಸಂಗ್ರಹ, ರೂ10,23,76,291 ಸಾಲ ವಿತರಿಸಲಾಗಿದೆ. ರೂ.4,61,00,862 ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಹೊಂದಿದ್ದು, ರೂ 6,48,447 ಮೌಲ್ಯದ ಚರಾಸಿಯನ್ನ್ಥು ಹೊಂದಿರುತ್ತದೆ. ಸಂಘದಲ್ಲಿ ಕಾಯ್ದಿರಿಸಿದ ನಿಧಿಗಳು 1,22,35,917 ಇರುತ್ತದೆ ಸದ್ರಿ ಆರ್ಥಿಕ ವರ್ಷದಲ್ಲಿ ರೂ. 56 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ್ದು ರೂ7,92,000 ಲಾಭ ಗಳಿಸಿರುತ್ತದೆ ಎಂದು ವರದಿ ಮಂಡಿಸಿದರು.

ಸಂಘದ ಅಧ್ಯಕ್ಷರು ಸಂಘವು ಆರ್ಥಿಕ ವ್ಯವಹಾರ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡಿರುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಸದಸ್ಯರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡಿ 6 ಜನ ಸದಸ್ಯರ ಮದುವೆ 3 ಮನೆ ಪ್ರವೇಶಕ್ಕೆ ಸಹಕರಿಸಿದ್ದೇವೆ ಮತ್ತು ಮಹಾಸಭೆಯಲ್ಲಿ ಸಂಘದ ಸದಸ್ಯರ 1 ರಿಂದ 10 ನೇ ತರಗತಿಯ ವರೆಗೆ ವ್ಯಾಸಾಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ ಪ್ರತಿ ವರ್ಷ ಮಾಡುತ್ತಾ ಬಂದಿರುತ್ತೇವೆ ಅದರಂತೆ ಈ ವರ್ಷವು 796 ಮಕ್ಕಳಿಗೆ ವಿದ್ಯಾಭ್ಯಾಸ ಪರಿಕರಗಳನ್ನು ನೀಡುತ್ತಿದ್ದೇವೆ ಎಂದರು.

ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಪ್ರಭಾವತಿ, ಶಕೀಲಾ, ಪ್ರೇಮ ಪೂಜಾರಿ, ಮಾಲತಿ, ಚಂದ್ರಾವತಿ, ಮಂಜುಳ, ಮೂಕಾಂಬು ತೆಗ್ಗರ್ಸೆ, ನಾಗರತ್ನ ಹೆಮ್ಮಾಡಿ ಮತ್ತು ಸಿಬ್ಬಂದಿಗಳಾದ ರೇಖಾ, ಪ್ರತಿಭಾ, ಗಿರೀಶ, ಮಂಜುನಾಥ ಉಪಸ್ಥಿತರಿದ್ದರು. ಬೇಬಿ ಕೊಠಾರಿ ಸ್ವಾಗತಿಸಿದರು.

Click here

Click here

Click here

Click Here

Call us

Call us

Leave a Reply