ಆಳ್ವಾಸ್‌ನಲ್ಲಿ ರೋಗ ನಿರೋಧಕ ಔಷಧ ಆಟಿ ಕಷಾಯ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಆಟಿ ಅಮವಾಸ್ಯೆಯ ಪಾರಂಪರಿಕ ರೋಗ ನಿರೋಧಕ ಔಷಧ ಆಟಿ ಕಷಾಯ ವಿತರಣಾ ಕಾರ್ಯಕ್ರಮ ನಡೆಯಿತು.

Call us

Click Here

ಮೂಡುಬಿದಿರೆಯ ಶ್ರೀರಾಮ್ ಮೆಡಿಕಲ್ಸ್‌ನ ಮಾಲಕ ನವೀನ್ ಟಿ. ಎಸ್ ದೀಪ ಬೆಳಗಿಸಿ ಕಷಾಯ ಕುಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು 3,000 ಜನರಿಗೆ ಕಷಾಯ ತಯಾರಿಸಿ ವಿತರಿಸಲಾಯಿತು.

ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ., ದ್ರವ್ಯಗುಣ ವಿಜ್ಞಾನ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಪದ್ಯಾಣ, ದ್ರವ್ಯಗುಣ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ವೈದ್ಯರು, ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply