ಕತಾರ್: ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಗೌರವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್:
ಭಾರತೀಯ ಸಮುದಾಯ ಹಿತೈಷಿ ವೇದಿಕೆಯ (ಐ.ಸಿ.ಬಿ.ಎಫ್ – ಇಂಡಿಯನ್ ಕಮ್ಯುನಿಟಿ ಬೆನಿವೊಲೆಂಟ್ ಫೋರಂ) ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಒಂದೇ ಭಾರತ್ ಮಿಷನ್ ಅಡಿಯಲ್ಲಿ ಕತಾರಿನಿಂದ ಭಾರತಕ್ಕೆ ವಿಶೇಷ ವಿಮಾನ ಸೇವೆ ಕಲ್ಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು.

Call us

Click Here

ಕತಾರ್ ನಲ್ಲಿ ಕರೋನಾ ಪರಿಣಾಮವಾಗಿ ಬಹಳ ಜನ ನಿರಾಶ್ರಿತರಾಗಿದ್ದ ಸಮಯದಲ್ಲ್ಲಿ ಅನ್ನಾಹಾರ, ಊಟದ ಅವಶ್ಯಕತೆಯನ್ನು ಪೂರ್ಣಗೊಳಿಸಿ ದಿನನಿತ್ಯ ಸುಮಾರು 100-200 ಜನರಿಗೆ ತರಕಾರಿ ಅಥವ ಅನ್ನ ನೀರುಗಳನ್ನು ಸ್ವತಃ ತಮ್ಮ ವಾಹನದಲ್ಲಿ ಸರಬರಾಜು ಮಾಡುವ ಮೂಲಕ ಕತಾರ್ ನಲ್ಲಿ ಕೋವಿಡ್ ನಿಂದ ಅಸುನೀಗಿದ ಪಾರ್ಥಿವ ಶರೀರಗಳನ್ನು ಭಾರತದಲ್ಲಿನ ಸ್ವಗೃಹಕ್ಕೆ ತಲುಪಿಸುವ ಕಾರ್ಯ ಮಾಡಿದರು.

ಅವರ ಸೇವೆಯನ್ನು ಗುರುತಿಸಿ ಕತಾರ್ನ ಭಾರತೀಯ ರಾಯಭಾರಿ ಕಾರ್ಯಾಲಯದ ಪ್ರಥಮ ಕಾರ್ಯದರ್ಶಿ (ಕಾರ್ಮಿಕ ಹಾಗು ಸಮುದಾಯ ಕಲ್ಯಾಣ ವಿಭಾಗ) ಎಸ್. ಆರ್.ಎಚ್. ಫಾಹ್ಮಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಕಾರ್ಯಕ್ರಮ ಸಂಘಟಿತ ಭಾರತೀಯ ಸಮುದಾಯ ಕೇಂದ್ರದ (ಐ.ಐ.ಸಿ.ಸಿ – ಇಂಟಿಗ್ರೇಟೆಡ್ ಇಂಡಿಯನ್ ಕಮ್ಯೂನಿಟಿ ಸೆಂಟರ್) ಕಂಜಾನಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಕತಾರ್ ಭಾರತೀಯ ದೂತಾವಾಸನ ಸೋನಾ ಸೋಮನ್ಶ್ರೀ, ಭಾರತೀಯ ದೂತಾವಾಸ ಧೀರಜ್ ಕುಮಾರ್, ಐ.ಸಿ.ಸಿ ಆಡಳಿತ ಸಮಿತಿ ಅಧ್ಯಕ್ಷರಾದ ಬಾಬೂರಾಜನ್, ಐ.ಸಿ.ಬಿ.ಎಫ್ ಆಡಳಿತ ಸಮಿತಿ ಅಧ್ಯಕ್ಷರಾದ ಜಿಯಾದ್ ಉಸ್ಮಾನ್, ಐ.ಸಿ.ಬಿ.ಎಫ್ ಆಡಳಿತ ಸಮಿತಿ ಉಪಾಧ್ಯಕ್ಷರಾದ ವಿನೋದ್ ನಾಯರ್, ಐ.ಸಿ.ಬಿ.ಎಫ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಸಬಿಥ್ ಸಹೀರ್, ಐ.ಸಿ.ಬಿ.ಎಫ್ ಮಾಜಿ ಪ್ರಧಾನ ಕಾರ್ಯದರ್ಶಿ, ಅವಿನಾಶ್ ಗಾಯಕ್ವಾಡ್, ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply