ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಶಂಕರ ಆಚಾರ್ಯರ ಮಗ ನಂದೀಶ್ (13) ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು. ಹೆಚ್ಚಿನ ಚಿಕಿತ್ಸೆಗೆ ಸಹೃದಯಿಗಳ ನೆರವಿನ ಅಗತ್ಯವಿದೆ.
ಪ್ರಸ್ತುತ ಯನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ತಿಳಿಸಿದಂತೆ ಕಿಡ್ನಿ ಮರುಜೋಡಣೆ ಆಗುವ ತನಕ ವಾರಕ್ಕೆ 3 ಡಯಾಲಿಸಿಸ್ ಮಾಡುವ ಅನಿವಾರ್ಯತೆ ಇದೆ. ಪ್ರತಿ ತಿಂಗಳು ಸುಮಾರು 15ರಿಂದ 20 ಸಾವಿರದಂತೆ ಅಂದಾಜು 20 ಲಕ್ಷ ಹಣ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನೆರವಿಗೆ ಮನವಿ: ನಂದೀಶ್ ಅವರ ತಂದೆ ಜೀವನಕ್ಕಾಗಿ ಪುಟ್ಟ ವಾಚ್ ರೀಪೆರಿ ಅಂಗಡಿ ನಡೆಸುತ್ತಿದ್ದು ಬರುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಜೀವನ ನಡೆತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಚಿಕಿತ್ಸೆಗೆ ಇಷ್ಟೊಂದು ಹಣ ಹೊಂದಿಸಲು ಸಾದ್ಯವಾಗುತ್ತಿಲ್ಲ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ಮೊರೆ ಹೋಗಿದ್ದಾರೆ.
ನಂದೀಶ್‌ಗೆ ಸಹಾಯ ಮಾಡಲಿಚ್ಚಿಸುವವರು. ಕೆನರಾ ಬ್ಯಾಂಕ್ ಬಿದ್ಕಲ್ ಕಟ್ಟೆ ಖಾತೆ ಸಂಖ್ಯೆ ನಂ: 01622210020948, ಐಎಫ್‍ಸಿ ಕೋಡ್: CNRB0010162, Phone pay or google pay 7899290869 ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9900887170, 7899290869ನ್ನು ಸಂಪರ್ಕಿಸಬಹುದು.
