ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿ ನರೇಂದ್ರ ಕುಮಾರ್ ಕೋಟ

Call us

Call us

Call us

Call us

ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ-ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು 2020-21ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದು ಆರ್ಹತೆಗೆ ಸಂದ ಪ್ರಶಸ್ತಿಯೇ ಸರಿ.

Call us

Click Here

ಕೋಟ ಎಂದ ಕ್ಷಣ ಎಲ್ಲರ ನೆನಪಿನಲ್ಲಿ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತ, ಕೋಟ ವೈಕುಂಠ, ಕೋಟ ಲಕ್ಷ್ಮೀ ನಾರಾಯಣ ಕಾರಂತ, ಕೋಟ ಶ್ರೀನಿವಾಸ ಪೂಜಾರಿ ಅವರ ಸಾಲಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿ ಸಾಹಿತ್ಯಿಕ – ಸಾಂಸ್ಕೃತಿಕ – ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆಯ ಶಿಖರವನ್ನು ಏರಿರುವ ಕೋಟ ನರೇಂದ್ರ ಕುಮಾರ್ ಅವರ ಹೆಸರು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಹೊಸತನದ ತುಡಿತ:
ವಿದ್ಯಾರ್ಥಿ ಜೀವನದಿಂದಲೇ ಎಲ್ಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನರೇಂದ್ರ ಕುಮಾರ್ ಅವರು ವೃತ್ತಿ ಜೀವನವನ್ನು ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಬಾಲಕಿಯರ ಫ್ರೌಡಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸುತ್ತಾರೆ. ಶಾಲಾ ಅವಧಿಯಲ್ಲಿ ಪಠ್ಯೇತರ ಶಿಕ್ಷಣವನ್ನು ಬೋಧಿಸಿ ಉಳಿದ ಸಮಯವನ್ನು ಮಕ್ಕಳ ಭೌದ್ದಿಕ ವಿಕಸನಕ್ಕೆ ಸಹಕಾರಿ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಕ್ಕಳಿಗೆ ಪ್ರೇರೇಪಿಸುತ್ತಾರೆ. ಈ ಉದ್ದೇಶದಿಂದ ಅವರು ಸಮಾನ ಮನಸ್ಕರ ಸ್ನೇಹಿತರ ತಂಡ ಕಟ್ಟಿ ಉಸಿರು ಕೋಟ ಎನ್ನುವ ಒಂದು ಸಂಸ್ಥೆ ನಿರ್ಮಿಸಿ ಬೇಸಿಗೆ ಶಿಬಿರವನ್ನು ವಿವಿಧ ಕಡೆಗಳಲ್ಲಿ ಆಯೋಜಿಸಿ ಶಾಲಾ ಶಿಕ್ಷಣ ಒಂದೇ ಮಕ್ಕಳ ಬೆಳೆವಣಿಗೆಗೆ ಸಹಕಾರಿಯಾಗದೇ ಅವರಲ್ಲಿನ ಪ್ರತಿಭೆಗಳು ಅನಾವರಣಗೊಳ್ಳಲು ಸೂಕ್ತವಾದ ಒಂದು ವೇದಿಕೆ ಕಲ್ಪಿಸಬೇಕು ಎನ್ನುವ ಸದುದ್ದೇಶದಿಂದ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಸಂಘಟಿಸಿದರು. ಈ ಶಿಬಿರದಲ್ಲಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳು, ಆಟೋಟ ಸ್ವರ್ಧೆ, ರಂಗ ಚಟುವಟಿಕೆ, ನಾಯಕತ್ವ, ಹೀಗೆ ಹತ್ತು ಹಲವಾರು ವಿಷಯಗಳನ್ನು ಮಕ್ಕಳಲ್ಲಿ ಆಸಕ್ತಿ ಬೆಳೆಸಿ ಅವರಲ್ಲಿ ಹುದುಗಿಕೊಂಡಿರುವ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟರು. ಅಲ್ಲದೇ ಮಕ್ಕಳ ಉಪಯೋಗಕ್ಕಾಗಿ ಯುಟ್ಯೂಬ್ ಚಾನೆಲ್ ಒಂದನ್ನು ನಿರ್ಮಿಸಿ ಮಕ್ಕಳಿಗಾಗಿ ಉಪಯುಕ್ತವಾದ ಪರೀಕ್ಷೆಗೆ ಸಿದ್ದತೆ, ಆನ್ ಲೈನ್ ಪರೀಕ್ಷಾ ಬಗ್ಗೆ ಮಾಹಿತಿ, ಬದುಕಿನ ಸವಾಲುಗಳು ಇನ್ನಿತರ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿಯೇ ಆನ್ ಲೈನ್ ಪರೀಕ್ಷೆ ಸಿದ್ಧತೆಗಾಗಿ ಶೈಕ್ಷಣಿಕ ಮಾಲಿಕೆ ಆರಂಭಿಸಿದರು.

ಅವರ ಆಸಕ್ತಿ ಕ್ಷೇತ್ರದಲ್ಲಿ ನಿರೂಪಣೆ ಕೂಡಾ ಒಂದು. ತನ್ನದೇ ಆದ ವಿಶಿಷ್ಟ ಛಾಪು, ಮೃದು ಧ್ವನಿಯೊಂದಿಗೆ ಕೇಳುಗರನ್ನು ತನ್ನತ್ತ ಆಕರ್ಷಿಸಬಲ್ಲ ಶೈಲಿಯಲ್ಲಿ ನಿರೂಪಿಸಿ ಎಲ್ಲರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ. ಅಲ್ಲದೇ ಹಲವಾರು ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಎದುರಿಗಿನ ಪೇಕ್ಷಕರ ಮನಸ್ಥಿತಿ ಹೇಗೆ ಇದೆ ಎಂದು ತಿಳಿದು ಎಷ್ಟು ಬೇಕೋ ಅಷ್ಟು ಮಾತಾಡಿ ಅವರ ಮನಸ್ಸಿಗೆ ಮುಟ್ಟುವಂತೆ ಮಾತನಾಡುವ ಶೈಲಿ ಎಲ್ಲರಿಗೂ ಅಚ್ಚು-ಮೆಚ್ಚು ಅದಕ್ಕಾಗಿ ಉಡುಪಿ ಭಾಗದಲ್ಲಿ ಇವರೊಬ್ಬರು ಸಂಪನ್ಮೂಲ ವ್ಯಕ್ತಿ.

ತೆರೆಯ ಹಿಂದಿನ ಕೈ:
ನರೇಂದ್ರರವರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಏನಾದರೂ ಹೊಸತನ ಅನ್ವೇಷಣೆ ಮಾಡುವ ಚಿಂತಕರು ತನ್ನ ಮಾತಿನ ಶೈಲಿಯಲ್ಲಿ ಎಲ್ಲರನ್ನು ಸೆಳೆಯುವ ಇವರು ಹಲವಾರು ಟಿ.ವಿ ಸಂದರ್ಶನದಲ್ಲಿ ಎಲೆ ಮರೆ ಕಾಯಿಯಂತಿರುವ ಸಾಧಕರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡಿದ್ದಾರೆ. ಅವರು ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಒಟ್ಟು 30 ಕ್ಕೂ ಮಿಕ್ಕಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ ಇದರಲ್ಲಿ ಸವಿ ಸವಿ ನೆನಪು 230, ಚಿಂತನ ದೀವಿಗೆ -45, ಸಿಬ್ಲು-34, ಕಾರಂತ ಮಹಾಸಾಗರ-34 ಬದುಕಿನ ಚುಕ್ಕಿಗಳು-19, ಹೃದಯದ ಹಾಡು-35 ಹಾಡೊಮ್ಮೆ ಹಾಡಬೇಕು ಇಂತಹದೇ ಹಲವಾರು ಸಂಚಿಕೆ ಕಾರ್ಯಕ್ರಮಗಳು ಸಮರ್ಥವಾಗಿ ನಡೆಸಿ ಪೇಕ್ಷಕರ ಮನಗೆದ್ದು ಇವಾಗಲೂ ಎಲ್ಲರ ಬಾಯಲ್ಲಿ ಮಾತಾಗಿದೆ.

Click here

Click here

Click here

Click Here

Call us

Call us

ಸಾಂಸ್ಕೃತಿಕ-ಅಪರಂಜಿ:
ಮನುಷ್ಯ ಹೇಗೆ ಸಮಯವನ್ನು ಮೀಸಲಿಡಬೇಕು ಎನ್ನುವುದಕ್ಕೆ ನರೇಂದ್ರ ಕುಮಾರ್ ಅವರು ಒಂದು ಉದಾಹರಣೆಯಾಗಿ ನಿಲ್ಲುತ್ತಾರೆ. ಶಾಲೆಯ ಶಿಕ್ಷಕ ವೃತ್ತಿ ಜೊತೆಗೆ ಎಲ್ಲವನ್ನು ಸರಿದೂಗಿಸಿ ಹೋಗಬಲ್ಲ ಚಾಣಾಕ್ಷತನ ಅವರದ್ದು. ಇಲ್ಲಿ ತನಕ ಹಲವಾರು ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಂಬಾ ಅರ್ಥಪೂರ್ಣವಾಗಿ ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕುಂದಾಪ್ರ ಕನ್ನಡದ ಕಂಪನ್ನು ಕಾರ್ಯಕ್ರಮದ ಮೂಲಕ ಎಲ್ಲರನ್ನು ಬೆರಗುಗೊಳಿಸಿದ ಕಾರ್ಯಕ್ರಮ ಕಾಂಬ. ಮೊದಲ ಬಾರಿಗೆ ಕೋಟದಲ್ಲಿ ಆಯೋಜಿಸಿ ಇದು ಕೋಟ ಪರಿಸರದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿತ್ತು. ನರೇಂದ್ರ ಕುಮಾರ್ ಅವರ ಕಾರ್ಯಕ್ರಮ ಆಯೋಜನೆಯ ಇನ್ನೊಂದು ವಿಶೇಷತೆ ಎಂದರೆ ಕಾರ್ಯಕ್ರಮಕ್ಕೆ ವಿಶಿಷ್ಠ ಶೀರ್ಷಿಕೆಯನ್ನಿಡುವುದು. ಅವರ ಎಲ್ಲ ಕಾರ್ಯಕ್ರಮ ಆಯೋಜಿಸುವಾಗ ಕಾರ್ಯಕ್ರಮಕ್ಕೆ ಸರಿ ಹೊಂದುವ ಶೀರ್ಷಿಕೆ ಇಟ್ಟು ಅದು ಸ್ವಲ್ಪ ಜನರ ಮೆದುಳಿಗೆ ಕೆಲಸ ಕೊಡುವ ಕಾರ್ಯ ಮಾಡುತ್ತಾರೆ. ನಂತರ ಕಾರ್ಯಕ್ರಮ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸುವುದು ಇವರ ನೈಪುಣ್ಯತೆ.

ಕಾರಂತ ಥೀಮ್ ಪಾರ್ಕ್‌ನ ಚಟುವಟಿಕೆಯ ಹಿಂದಿನ ರೂವಾರಿ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರ ನೆನಪಿನಲ್ಲಿ ಕೋಟದಲ್ಲಿ ನಿರ್ಮಿಸಿರುವ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ದಿನನಿತ್ಯ ಎಂಬಂತೆ ನಡೆಯುವ ಕಾರ್ಯಕ್ರಮದ ಹಿಂದಿನ ರೂವಾರಿ ನರೇಂದ್ರ ಕುಮಾರ್ ಅವರೇ. ಅವರು ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೊಸ ಹೊಸ ಆಲೋಚನೆಯಿಂದ ಪ್ರತಿ ತಿಂಗಳು ನಡೆಯುವ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಕಳೆದ ಹತ್ತು ವರ್ಷಗಳಿಂದ ಆಯೋಜಿಸುವುದರ ಜೊತೆಗೆ, ಪ್ರತಿಷ್ಠಿತ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಯೋಜನೆ ಇದರ ಪ್ರಯುಕ್ತ ಹತ್ತು ದಿನಗಳ ಕಾಲ, ತಿಂಗಳ ಕಾಲ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸಿ ಅಕ್ಟೋಬರ್ ಎಂದರೆ ಕೋಟದಲ್ಲಿ ಒಂದು ಸಾಹಿತ್ಯಿಕ-ಸಾಂಸ್ಕೃತಿಕ ಹಬ್ಬದ ವಾತಾವರಣ ನಿರ್ಮಾಣವಾಗುವುದರಲ್ಲಿ ಇವರ ಶ್ರಮವೇ ಅಧಿಕ. ಥೀಮ್ ಪಾರ್ಕ್‌ನಲ್ಲಿ ನಡೆಯುವ ಕೆಲವೊಂದು ತರಗತಿಗಳಿಗೆ ಸರಕಾರದಿಂದ ಅನೌಪಚಾರಿಕ ಶಿಕ್ಷಣ ಕೇಂದ್ರದ ಮಾನ್ಯತೆ ಲಭಿಸಿದ್ದು ಇವರ ಬಿಡದ ಪರಿಶ್ರಮದಿಂದ. ಹೀಗೆ ಹತ್ತು ಹಲವಾರು ಚಟುವಟಿಕೆಯನ್ನು ಥೀಮ್ ಪಾರ್ಕ್‌ನಲ್ಲಿ ನಡೆಸಿ ಇಂದು ರಾಜ್ಯ ಮಟ್ಟದಲ್ಲಿ ಥೀಮ್ ಪಾರ್ಕ್ ಸಂಚಲನ ಮಾಡಲು ನರೇಂದ್ರ ಕುಮಾರ್ ಅವರ ಪಾತ್ರ ಮರೆಯುವಂತಿಲ್ಲ.

ಸಾಹಿತ್ಯ ಕ್ಷೇತ್ರದ ಮಿದುಳು ಮಿಂಚು:
ಸಾಹಿತ್ಯ ಕ್ಷೇತ್ರದಲ್ಲಿ ನರೇಂದ್ರ ಕುಮಾರ್ ಅವರ ಸಾಧನೆ ಅಪಾರವಾದದ್ದು, ಹೆಚ್ಚಾಗಿ ತನ್ನನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಯದಶಿಯಾಗಿ ಜಿಲ್ಲಾ, ತಾಲೂಕು ಸಮ್ಮೇಳನದಲ್ಲಿ ತನ್ನನ್ನು ಮುಂಚೂಣಿಯಲ್ಲಿ ತೊಡಗಿಸಿಕೊಂಡವರು. ಅಲ್ಲದೇ ಅವರ ಬರವಣಿಗೆಯನ್ನು ಪ್ರೀತಿಸುವ ಒಂದು ಅಭಿಮಾನಿಗಳ ಸಮೂಹವೇ ಸೃಷ್ಟಿಯಾಗಿದೆ. ಇವರ ಸಾಹಿತ್ಯ ಕೃಷಿಯಲ್ಲಿ ಈಗಾಗಲೇ 26ಪುಸ್ತಕಗಳು ಹೊರಹೊಮ್ಮಿದ್ದು ಇನ್ನೂ 14 ಪುಸ್ತಕಗಳು ಪ್ರಕಟಣೆಯ ಅಂತಿಮ ಹಂತದಲ್ಲಿದೆ. ೨೦೦ ಕ್ಕೂ ಮಿಕ್ಕಿದ ಕವನಗಳು, 23 ಕಥೆಗಳು, 150 ಲೇಖನಗಳು, 16 ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, ವಾರ ಪತ್ರಿಕೆಯಲ್ಲಿ ಇವರ ಲೇಖನ ಕವನಗಳು ರಾರಾಜಿಸುತ್ತಿರುತ್ತದೆ.

ಸಿನಿಮಾ ಲೋಕಕ್ಕೆ ಲಗ್ಗೆ
ಸಾಧನೆ ಎಂಬುವುದು ಸಾಧಕನ ಸೊತ್ತು ಹೊರತು ಸೋಮಾರಿಯ ಸೊತ್ತಲ್ಲ ಎಂದು ಹಿರಿಯರು ಹೇಳಿದನ್ನು ಕೇಳಿರಬಹುದು. ಸಿಕ್ಕ ಸಮಯವನ್ನು ಉಪಯುಕ್ತವಾಗಿ ಬಳಸಿಕೊಂಡವರಲ್ಲಿ ನರೇಂದ್ರ ಕುಮಾರ್ ಅವರು ಒಬ್ಬರು. ಸಿನಿಮ ಮಾಡಬೇಕು ಎಂಬ ಕನಸು ಹೊತ್ತು ಅದನ್ನು ನನಸಾಗಿಸಿಕೊಂಡವರು. ಕಾರಂತರನ್ನು ಯಾವ ರೂಪದಲ್ಲಿ ತೆರೆಯ ಮೇಲೆ ತೋರಿಸಬಹುದು ಎನ್ನುವ ಮಾನದಂಡವನ್ನಿಟ್ಟುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಜಿ ಮೂರ್ತಿ ಅವರನ್ನು ಕೂಡಿಕೊಂಡುತಮ್ಮದೇ ನಿರ್ಮಾಣದ ಸಂಸ್ಥೆ ಮೂಲಕ ಸಂಭಾಷಣೆ ಬರೆದು ಸುಗಂಧಿ ಎನ್ನುವ ಚಲನಚಿತ್ರ ನಿರ್ಮಾಣ ಮಾಡಿದರು. ಮುಖ್ಯ ಭೂಮಿಕೆಯಲ್ಲಿ ಶ್ರೀ ಸಂಜೀವ್ ಸುವರ್ಣ, ವಿನಯ ಪ್ರಸಾದ್ ಅವರನ್ನು ಬಳಸಿಕೊಂಡರು. ಈ ಚಲನಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ಪಡೆದುಕೊಂಡು ಪ್ರಥಮ ಪ್ರಯೋಗದಲ್ಲೇ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ಇವರು ಕೂಡಾ ಮೊದಲ ಬಾರಿ ಬಣ್ಣ ಹಚ್ಚಿದರು. ತದ ನಂತರ ಹಲವಾರು ಕಿರು ಚಿತ್ರದಲ್ಲಿ ಅಭಿನಯಿಸುದರ ಮೂಲಕ ಚಿತ್ರಕಥೆ, ಸಂಭಾಷಣೆ, ಧ್ವನಿ ನೀಡಿ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಕಂಪನ್ನು ಬೀರಿದರು.

ಅರಸಿ ಬಂದವು ಹಲವಾರು ಪ್ರಶಸ್ತಿಗಳು:
ಸದಾ ನಗುತ್ತಾ ಯಾರ ತಂಟೆಗೂ ಹೋಗದೆ ತಾಳ್ಮೆಯಿಂದ ವ್ಯವರಿಸುವ ನರೇಂದ್ರ ಕುಮಾರ್ ಅವರು ಮೌನವಾಗಿಯೇ ಕೆಲವೊಂದು ಸಾಧನೆಗಳನ್ನು ಮಾಡುತ್ತಾ ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿಕೊಂಡು ಸಾಧನೆ ಮಾಡಿದರು. ಇದರ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದವು. ಅವುಗಳಲ್ಲಿ ಮುಖ್ಯವಾಗಿ ದ.ಕ ಜಿಲ್ಲಾ ಯುವ ಪುಸ್ಕಾರ-, ರಾಜ್ಯ ಮಟ್ಟದ ಕಾವ್ಯ ಶ್ರೀ ಪುರಸ್ಕಾರ, ದಿವಂಗತ ರಾಜೇಂದ್ರ ಶೆಟ್ಟಿ ಸ್ಮಾರಕ, ರಾಷ್ಟ್ರಮಟ್ಟದ ರವಿರೊಹೇಡ್‌ಕರ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ-೨೦೧೦, ರಾಜ್ಯ ಮಟ್ಟದ ಕಾರಂತ ಸದ್ಭಾವನ ಪುರಸ್ಕಾರ, ರಾಷ್ಟ್ರಮಟ್ಟದ ಆರ್ಯಭಟ ಪುರಸ್ಕಾರ-2011, ರಾಷ್ಟ್ರಮಟ್ಟದ ರವೀಂದ್ರ ನಾಥ್ ಟ್ಯಾಗೋರ್ ರಾಷ್ಟ್ರೀಯ ಪುಸ್ಕಾರ, ಸಾಧಕ ಶಿಕ್ಷಕ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದಲ್ಲದೆ 1999-2000ರಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಗಾಯನ ಸ್ಪರ್ಧೆಯಲ್ಲಿ ತೃತೀಯ, ೨೦೦೦ರಲ್ಲಿ ಉಡುಪಿ ಜಿಲ್ಲಾ ಮೊದಲನೇ ಶಿಕ್ಷಕ ಸಾಹಿತ್ಯ ಸಮ್ಮೇಳನ ಆಶುಕವಿತಾ ರಚನೆ ದ್ವಿತೀಯ ಆಶುಭಾಷಣದಲ್ಲೂ ದ್ವಿತೀಯ, 2000-01 ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಜಿಲ್ಲಾ ಮಟ್ಟದ ಆಶುಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದರ ಜೊತೆ ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.

ಬದುಕು ಎನ್ನುವುದು ನಿಂತ ನೀರಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿ, ಡಾ|| ಶಿವರಾಮ ಕಾರಂತರ ಆತ್ಮಕಥನ ಹುಚ್ಚು ಮನಸ್ಸಿನ ಹತ್ತು ಮುಖಗಳು ಎನ್ನುವ ಶೀರ್ಷಿಕೆಗೆ ನರೇಂದ್ರ ಕುಮಾರ್ ಅವರನ್ನು ಹೋಲಿಸಬಹುದೇನೋ. ತನ್ನನ್ನು ಹಲವಾರು ಕ್ರೇತ್ರದಲ್ಲಿ ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ಹೊಸತನ ಅನ್ವೇಷಿಸಿ ಅದನ್ನು ಕಾರ್ಯಗತ ಮಾಡಿ ಯಶಸ್ಸನ್ನು ಕಾಣುವರು. ಇವರ ಹೊಸತನದ ತುಡಿತ, ಇವರ ಸಾಧನೆ ಇಮ್ಮಡಿಯಾಗಲಿ, ಇವರ ಸಾಧನೆಯ ಪ್ರತಿಯೊಂದು ಹೆಜ್ಜೆ ಯುವ ಜನರಿಗೆ ಪ್ರೇರಣೆಯಾಗುತ್ತಾ ಇನ್ನಷ್ಟೂ ಪ್ರಶಸ್ತಿಗಳು ಅರಸಿ ಬಂದು, ಸಮೃದ್ದ ಜೀವನ ಇವರದ್ದಾಗಲಿ, ಮಡದಿ ಅನಿತಾ ಮಕ್ಕಳು ನಿರಂತರ ಹಾಗೂ ನಕ್ಷತ್ರ ಅವರ ಜೊತೆ ಸಂಸಾರದ ಬಂಡಿ ಸಂತೋಷದಿಂದ ಸಾಗುವಂತಾಗಲಿ.

ಪ್ರಶಾಂತ್ ಸೂರ್ಯ ಸಾಬ್ರಕಟ್ಟೆ

Leave a Reply

Your email address will not be published. Required fields are marked *

one × five =