ತಮ್ಮ ಆರೋಗ್ಯ ಹಾಗೂ ಸೌಂದರ್ಯ ಕಡೆಗೆ ಮದುವೆಗೂ ಮೊದಲು ವಿಶೇಷ ಗಮನ ಹರಿಸುವ ಹೆಣ್ಣುಮಕ್ಕಳು ಬರಬರುತ್ತಾ ಕೆಲಸ ಕುಟುಂಬದ ಒತ್ತಡದಿಂದಾಗಿ ಆ ಬಗ್ಗೆ ಗಮನಹರಿಸುವುದನ್ನು ಕಡಿಮೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ಭವಿಷ್ಯದಲ್ಲಿ ಅವರಿಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಕೆಲಸ ಹಾಗೂ ಕುಟುಂಬದ ನಿರ್ವಹಣೆಯ ಬಗ್ಗೆ ಆರೋಗ್ಯ ಕಾಳಜಿ ವಹಿಸುವುದಕ್ಕಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ.
ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡಬೇಡಿ:
ಮನೆಯಲ್ಲಿ ಅಡುಗೆ, ಒರೆಸುವುದು, ತೊಳೆಯುವುದು ಅಂತ ನೂರೆಂಟು ಕೆಲಸ ಇರುತ್ತದೆ. ಅವುಗಳೆನ್ನೆಲ್ಲಾ ಒಟ್ಟಿಗೆ ಮಾಡಿ ಮುಗಿಸಿ ಬಿಡಬೇಕೆಂದು ನಿಮಗೆ ಅನಿಸುತ್ತದೆ, ಆದರೆ ಜೊತೆಗೆ ಮಾಡಬೇಡಿ ಹಾಗೇ ಮಾಡಿದರೆ ತುಂಬಾನೇ ಸುಸ್ತಾಗುವಿರಿ. ಸ್ವಲ್ಪ ಕೆಲಸ ಮಾಡಿ ಒಂದು ಅರ್ಧ ತಾಸು ವಿಶ್ರಾಂತಿ ತೆಗೆದು ನಂತರ ಮತ್ತೆ ಕೆಲಸ ಮುಂದುವರೆಸಿ.
ವಿಶ್ರಾಂತಿ ತೆಗೆದುಕೊಳ್ಳಿ:
ನಾನು ಕೆಲಸ ಮಾಡದೆ ಕೂತರೆ ಬೇರೆಯವರು ನನ್ನ ತಪ್ಪು ತಿಳಿಯುತ್ತಾರೆ ಎಂಬ ಆತಂಕ ಬೇಡ. ನಿಮಗೆ ವಿಶ್ರಾಂತಿ ಬೇಕು ಅನಿಸಿದಾಗ ಆರಾಮವಾಗಿ ಕೂತು ಇಷ್ಟವಾಗಿದ್ದನ್ನು ತಿಂದು ನಂತರ ಕೆಲಸ ಮಾಡಲು ಪ್ರಾರಂಭಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ, ಸಾಕಷ್ಟು ನೀರು ಕುಡಿಯಿರಿ.
ಅಗತ್ಯವಿದ್ದರೆ ಸ್ವಲ್ಪನಿದ್ದೆ ಮಾಡಿ:
ತುಂಬಾ ತಲೆ ನೋವಾಗುತ್ತಿದೆಯೇ ಅದು ವಿಪರೀತ ಒತ್ತಡದಿಂದಾಗಿ ಉಂಟಾಗಿರುತ್ತದೆ, ಆಗ ಸ್ವಲ್ಪ ಹೊತ್ತು ನಿದ್ರಿಸಿ. ನಿಮ್ಮ ಕೆಲಸದಿಂದ ಒಂದು ದಿನ ಬಿಡುವು ತೆಗೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ. ನಿದ್ದೆ ಬರುತ್ತಿಲ್ಲ ಎಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಡಿ. ಇದು ನಿಮ್ಮ ಮೆದುಳನ್ನು ಮತ್ತಷ್ಟು ಹಾಳು ಮಾಡುವುದು. ನೀವು ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸಬೇಕು, ಹೆಚ್ಚು ಚಿಂತೆ ಮಾಡಬೇಡಿ, ನಿಮ್ಮ ಸ್ನೇಹಿತರ ಜೊತೆಗೆ ಮಾತನಾಡಿ, ನಗು-ನಗುತ್ತಾ ಇರಲು ಪ್ರಯತ್ನಿಸಿ, ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ.
ಸಾಧ್ಯವಾದರೆ ಧ್ಯಾನ ಮಾಡಿ:
ಬೆಳಗ್ಗೆ ಅಥವಾ ಸಂಜೆ ಒಂದು 15 ನಿಮಿಷ ಧ್ಯಾನಕ್ಕಾಗಿ ಅಥವಾ ಪ್ರಾರ್ಥನೆಗಾಗಿ ನಿಮ್ಮ ಸಮಯ ಮೀಸಲಿಡಿ. ಇದರಿಂದ ತುಂಬಾ ರಿಲ್ಯಾಕ್ಸ್ ಅನಿಸುವುದು.
ಕನ್ನಡಿಯ ಮುಂದೆ ನಿಂತು ನಿಮ್ಮನ್ನೇ ನೋಡಿಕೊಳ್ಳಿ:
ನಿಮ್ಮ ಬಿಂಬ ನೀವು ನೋಡಿಕೊಳ್ಳಿ ಕನ್ನಡಿ ಮುಂದೆ ನಿಂತು ನಿಮ್ಮ ಬಿಂಬ ನೀವು ನೋಡಿಕೊಳ್ಳಿ. ನಿಮ್ಮನ್ನು ನೋಡಿ ಕಿರು ನಗೆ ಬೀರಿ, ಇದು ನಿಮ್ಮಲ್ಲಿರುವ ಧನಾತ್ಮಕ ಶಕ್ತಿ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ.
ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆ ಬೇಡ:
ನಿಮ್ಮ ಸಂಗಾತಿ ನಿಮಗಾಗಿ ಮಾಡಿದ್ದರೆ ಏನಂತೆ ನೀವು ಮಾಡಿ ನೀವು ನನ್ನ ಇಷ್ಟವನ್ನು ನನ್ನ ಸಂಗಾತಿ ಗಮನಿಸುತ್ತಿಲ್ಲ ಎಂದು ಕೊರಗುವುದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗುವುದೇ ಹೊರತು ಮತ್ತೇನು ಪ್ರಯೋಜನವಿಲ್ಲ. ಅವರು ನಿಮಗೆ ಬೇಕಾಗಿರುವುದನ್ನು ಅರಿತು ಮಾಡಲಿ ಎಂದು ನಿರೀಕ್ಷೆ ಮಾಡಲು ಹೋಗಬೇಡಿ. ನಿಮಗೆ ಇಷ್ಟವಾದ ಡ್ರೆಸ್ ನೀವು ಕೊಳ್ಳಿ, ನಿಮಗೆ ಏನು ಬೇಕೆಂದು ಗಂಡನ ಬಳಿ ಹೇಳಿ.
ಕೆಲಸ ಸುಲಭವಾಗಿಸುವ ದಾರಿ ಕಂಡುಕೊಳ್ಳಿ:
ನಿಮ್ಮ ಕೆಲಸ ಸುಲಭವಾಗಲು ಉಪಾಯವನ್ನು ಕಂಡು ಕೊಳ್ಳಿ ಮಾನಸಿಕ ಒತ್ತಡ ಎನ್ನುವುದು ಸೈಲೆಂಟ್ ಕಿಲ್ಲರ್ ಆಗಿದೆ. ಆದ್ದರಿಂದ ತುಂಬಾ ಒತ್ತಡಕ್ಕೆ ಒಳಗಾಗುವುದನ್ನು ಕಡಿಮೆ ಮಾಡಿ. ಕೆಲಸವನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ನಿಮ್ಮ ಆರೋಗ್ಯವನ್ನು ಗಮನಿಸಿ ಹೆಚ್ಚಿನ ಮಹಿಳೆಯರು ಚಿಕ್ಕ-ಪುಟ್ಟ ಆರೋಗ್ಯ ಸಮಸ್ಯೆ ಇರುವಾಗ ತುಂಬಾ ನಿರ್ಲಕ್ಷ್ಯ ಮಾಡುತ್ತಾರೆ. ಆ ಸಮಸ್ಯೆಯೇ ಮುಂದೆ ದೊಡ್ಡದಾಗುತ್ತದೆ. ಹಾಗೇ ಮಾಡಲು ಹೋಗಬೇಡಿ, ನಿಮ್ಮ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡಿ. ಸುಸ್ತಾಯ್ತೋ ರೆಸ್ಟ್ ಮಾಡಿ.. ಬೇಸರವಾಯ್ತೋ ಮನಸ್ಸಿಗೆ ಖುಷಿ ನೀಡುವ ಸಿನಿಮಾ ನೋಡಿ.
ಆರೋಗ್ಯದ ಮೇಲೆ ಗಮನವಿರಲಿ:
ನಿಮ್ಮ ಬಿಪಿ, ಶುಗರ್ ನಿಯಂತ್ರಣದಲ್ಲಿಡಿ ನಿಮಗೆ ಕಾಯಿಲೆ ಬಂದ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು. ಬಿಪಿ, ಶುಗರ್ ಸರಿಯಾಗಿದೆಯೇ ಎಂದು ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿ. ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಹಿಸಿ.
ಕುಂದಾಪ್ರ ಡಾಟ್ ಕಾಂ ಲೇಖನ