ನಿದ್ರೆಯಿಂದ ಎದ್ದ ತಕ್ಷಣ ಬರುವ ಕುತ್ತಿಗೆ ನೋವಿಗೆ ಇಲ್ಲಿದೆ ಸಿಂಪಲ್ ಮನೆಮದ್ದು!

Click Here

Call us

Call us

Call us

ಇಡೀ ರಾತ್ರಿ ಆರಾಮವಾಗಿ ಮಲಗಿ ನಿದ್ರೆ ಮಾಡಿ ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ ಆದರೆ ನಿದ್ರೆಯ ಸಮಯದಲ್ಲಿ ಇದು ಅರಿವಿಗೆ ಬಂದಿರುವುದಿಲ್ಲ. ನಿದ್ರೆಯಲ್ಲಿ ನಮಗೆ ಬೇಕಾದ ಹಾಗೆ ಸರಿಯಾಗಿ ದಿಂಬಿನ ಮೇಲೆ ತಲೆ ಇಟ್ಟುಕೊಳ್ಳದೆ ಹೇಗೆಂದರೆ ಹಾಗೆ ಮಲಗಿರುತ್ತೇವೆ. ಇದರಿಂದ ಬೆಳಗ್ಗೆ ಎದ್ದ ಯಾಕೋ ಕುತ್ತಿಗೆ ಹಿಡಿದುಕೊಂಡಿದೆ ಅಥವಾ ಕುತ್ತಿಗೆ ನೋವು ಬಂದಿದೆ ಎನಿಸುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ನೋವು ಎನಿಸಿದರೆ ಆ ಸಮಯದಲ್ಲಿ ಮಾತ್ರೆ ಅಥವಾ ಔಷಧಿ ತೆಗೆದುಕೊಂಡು ಇದನ್ನು ಕಡಿಮೆ. ಮಾಡಿಕೊಳ್ಳಬಹುದು. ಆದರೆ ಇದರಿಂದ ಸೈಡ್ ಎಫೆಕ್ಟ್ ಸಹ ಹೆಚ್ಚಾಗುತ್ತದೆ. ಅದರ ಬದಲಾಗಿ ಮನೆಯಲ್ಲಿ ಸುಲಭವಾಗಿ ಬಳಸುವ ಮನೆ ಮದ್ದುಗಳ ಬಗ್ಗೆ ತಿಳಿಯೋಣ

Call us

Click Here

ಕುತ್ತಿಗೆ ನೋವಿಗೆ ಆರೈಕೆ ಬಹಳ ಮುಖ್ಯ:
ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ಹಿಡಿದುಕೊಂಡಿದ್ದರೆ, ಯಾವುದೇ ಕಾರಣಕ್ಕೂ ವೇಗವಾಗಿ ಕುತ್ತಿಗೆಯನ್ನು ಅತ್ತಿತ್ತ ಆಡಿಸಲು ಹೋಗಬೇಡಿ. ಕುತ್ತಿಗೆಯನ್ನು ಹೇಗೆ ಇಟ್ಟುಕೊಂಡರೆ ನೋವು ಕಡಿಮೆ ಕಾಣುತ್ತದೆ ಅದೇ ರೀತಿ ಇಟ್ಟುಕೊಂಡಿರಿ. ಎದ್ದ ತಕ್ಷಣ ಕುತ್ತಿಗೆಯನ್ನು ಬಲವಾಗಿ ಆಡಿಸಲು ಹೋದರೆ ನೋವು ಮತ್ತಷ್ಟು ಹೆಚ್ಚಾಗುತ್ತದೆ.

ಬಿಸಿ ನೀರಿನ ಸ್ನಾನ :
ಇದಕ್ಕೆ ಅತ್ಯುತ್ತಮವಾದ ಒಂದು ಪರಿಹಾರ ಎಂದರೆ, ಬಿಸಿ ನೀರಿನ ಸ್ನಾನ ಮಾಡುವುದು. ಅಂದರೆ ಉಗುರು ಬೆಚ್ಚಗಿನ ನೀರನ್ನು ಕುತ್ತಿಗೆಯ ಭಾಗಕ್ಕೆ ನೋವು ಕಂಡು ಬರುವ ಜಾಗದಲ್ಲಿ ಹಾಕಬೇಕು ನೀರಿನ ಬಿಸಿ ನಿಧಾನವಾಗಿ ಚರ್ಮದ ಒಳಗೆ ಹೋಗುತ್ತಿದ್ದಂತೆ ಕುತ್ತಿಗೆಯನ್ನು ಸಾಧ್ಯವಾದಷ್ಟು ನಿಧಾನಗತಿಯಲ್ಲಿ ಸುತ್ತಲೂ ಆಡಿಸಲು ಪ್ರಾರಂಭ ಮಾಡಬೇಕು. ನಿಧಾನವಾಗಿ ಕುತ್ತಿಗೆಯನ್ನು ಬಾಗಿಸಿ ಮೊದಲು ಎಡಬದಿಯಿಂದ ಪ್ರಾರಂಭ ಮಾಡಿ ನಂತರ ಬಲಬದಿಗೆ ತಿರುಗಿಸಲು ಮುಂದಾಗಬೇಕು ಉಗುರು ಬೆಚ್ಚಗಿನ ನೀರಿನ ಬಿಸಿ ಹಿಡಿದುಕೊಂಡಿರುವ ಕುತ್ತಿಗೆ ಭಾಗದ ಮಾಂಸಖಂಡಗಳಿಗೆ ವಿಶ್ರಾಂತಿ ನೀಡುತ್ತದೆ. ಇದರಿಂದ ಕುತ್ತಿಗೆಯ ಚಲನೆಗೆ ಅನುಕೂಲ ಮಾಡಿಕೊಡುತ್ತದೆ.

ಇನ್ನೊಂದು ಮನೆಮದ್ದು:
ಕಣ್ಣು ಮುಚ್ಚಿ ಮಲಗಿರುವ ಸಮಯದಲ್ಲಿ ಮಾಡಬೇಕಾದ ಕೆಲಸ ಇದು.ಹೇಗೆಂದರೆ ನಿಮ್ಮ ಬಳಿ ಒಂದು ಟವೆಲ್ ಇದ್ದರೆ ಅದನ್ನು ಕೋಲಿನ ಆಕಾರದಲ್ಲಿ ಸುತ್ತಿ ಕುತ್ತಿಗೆ ಭಾಗಕ್ಕೆ ಬೆಂಬಲವಾಗಿ ಕೊಟ್ಟುಕೊಳ್ಳಿ. ಸಂಪೂರ್ಣ ಕುತ್ತಿಗೆ ಟವೆಲ್ ಮೇಲೆ ಇರುವಂತೆ. ನೋಡಿಕೊಳ್ಳಿ ಹಾಸಿಗೆ ಮೇಲೆ ಮಲಗಿದ ಸಂದರ್ಭದಲ್ಲಿ ದಿಂಬು ಹಾಕಿಕೊಳ್ಳದೆ ಕುತ್ತಿಗೆಗೆ ಕೇವಲ ಸುತ್ತಿದ ಟವಲ್ ಮಾತ್ರ ಹಾಕಿಕೊಂಡು ಮಲಗಬೇಕು. ಹಾಕಿಕೊಳ್ಳುವ ಟವಲು ತಲೆಗೆ ಅಥವಾ ದೇಹಕ್ಕೆ ತಾಗುವಂತೆ ಇರಬಾರದು ಕೇವಲ ಕುತ್ತಿಗೆ ಮಾತ್ರ ಟವಲ್ ಮೇಲ್ಬಾಗದಲ್ಲಿ ಇರಬೇಕು. ಸುರುಳಿಯಾಕಾರದಲ್ಲಿ ಸುತ್ತಿದ ಟವಲ್ ಕುತ್ತಿಗೆಯ ಭಾಗಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ನೋವು ನಿವಾರಣೆಯ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಯಾವುದೇ ಬಂಗಿಯಲ್ಲಿ ಮಲಗಿಕೊಂಡರು ಸಹ ಇದು ಅನುಕೂಲಕರವಾಗಿ ಇರುತ್ತದೆ ಎಂದು ಹೇಳಬಹುದು. ಆದರೆ ಹೊಟ್ಟೆ ಕೆಳಗೆ ಮಾಡಿಕೊಂಡು ಮಾತ್ರ ಮಲಗಬಾರದು ಅಷ್ಟೇ.

ಕುಂದಾಪ್ರ ಡಾಟ್ ಕಾಂ ಲೇಖನ

Click here

Click here

Click here

Click Here

Call us

Call us

Leave a Reply