ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಕಾರದಿಂದ ರಾಜ್ಯ ವಿಧಾನ ಪರಿಷತ್ಗೆ ಚುನಾಯಿತರಾಗಿದ್ದಾರೆ. ದ್ವೈವಾರ್ಷಿಕ ಚುನಾವಣೆ ದ್ವಿಸದಸ್ಯ ಕ್ಷೇತ್ರದ ಫಲಿತಾಂಶದಲ್ಲಿ ಇಬ್ಬರೂ ಅಭ್ಯರ್ಥಿಗಳು ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆಲುವು ಸಾಧಿಸಿದರು.
ಒಟ್ಟು 6,011 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು 3,672 ಗಳಿಸಿದ್ದು, ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರು 2,079 ಮತ ಗಳಿಸಿದ್ದಾರೆ. ಇಬ್ಬರು ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ಧಾರೆ. ಇನ್ನು ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಅವರು 204 ಮತಗಳನ್ನು ಗಳಿಸಿದ್ದಾರೆ.
ದ.ಕ.ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಎರಡು ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟ 6,040 ಮತದಾರರ ಪೈಕಿ 6,011 ಮಂದಿ ಮತದಾನ ಮಾಡಿದ್ದರು. ಈ ಪೈಕಿ ಈ ಪೈಕಿ 5,955 ಸಿಂಧು ಮತಗಳು ಚಲಾವಣೆಯಾಗಿದ್ದು, 56 ಅಸಿಂಧು ಮತಗಳಾಗಿವೆ. ಈ ಗೆಲುವಿನ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರು ಸತತ ನಾಲ್ಕನೇ ಬಾರಿಗೆ ಪರಿಷತ್ ಪ್ರವೇಶ ಮಾಡಿದ್ದಾರೆ.